ಸಿಕ್ಕ ಸಮಯ ನಿಜ ತಿಳಿಯದಲೆ ಬರಿ
ಕಕ್ಕುಲಾತಿ ನಿನಗ್ಯಾಕಲೆ ಮರುಳೆ ಪ
ಬೊಕ್ಕಸ ಭಂಡಾರವೆಲ್ಲ ಸುಳ್ಳೆ ಸುಳ್ಳೆ ನಿನ್ನ
ನಿಕ್ಕುವ ಮನೆ ಊರ್ಹೊರಗಿದೆಲೆ ಅ.ಪ
ಮೇಲುಮಾಳಿಗೆಮನೆ ಸ್ಥಿರವಲ್ಲ ಬಹು
ಬಾಳುವೆ ಧನಸಿರಿ ನಿನಗಿಲ್ಲ
ನಾಳೆ ಬಂದೊದಗಲು ಯಮಶೂಲ ಹಿಂ
ಬಾಲಿಸಿ ನಿನಗೊಂದು ಬರೋದಿಲ್ಲ 1
ಬಂಧುರ ಬುವಿಯಧಿಕಾರ ನಿಖಿಲ ಮಹ
ಅಂದಣೈಶ್ವರ್ಯ ಛತ್ರ ನಂಬಿಗಿಲ್ಲ
ತಂದೆ ತಾಯಿ ಬಂಧು ಬಳಗೆಲ್ಲ ನಿನ
ಗೊಂದುಕೊಂದು ಸಂಬಂಧವಿಲ್ಲ 2
ಅತಿರಥರೆಲ್ಲರೀ ಭೂಮಿ ಸುಖ ನೆಚ್ಚಿ
ಮತಿಗೆಟ್ಟು ಪೊಂದದಿರತಿ ದು:ಖ
ಜತೆಯಲಾರ್ವೊಯ್ಯಲಿಲ್ಲಂತೆಕ್ಕ ಸುಳ್ಳೆ
ವ್ಯಥೆ ಬಟ್ಟರು ತಿಳಿಯದಿದರ ಲೆಕ್ಕ 3
ಕ್ಷೋಣೆ ಪಾರುಪತ್ಯತನವೆಲ್ಲ ತಿಳಿ
ಆನೆ ಕುದುರೆ ಒಂಟೆ ನಿನ್ನದಲ್ಲ
ಕಾಣುವುದೆಲ್ಲ ಮಾಯಭವಜಾಲ ಮತ್ತು
ಮನುಷ್ಯಜನುಮ ಸೀಗೋದಲ್ಲ 4
ನಾನು ನೀನೆಂಬುವ ದುಷ್ಟಮದ ಸುಟ್ಟು
ಜ್ಞಾನದೊಡನೆ ಗೆಲಿ ಭವಬಾಧೆ
ಧ್ಯಾನದಾಯಕ ಶ್ರೀರಾಮಪಾದ ನಿಜ
ಧ್ಯಾನವಿಡಿದು ಪಿಡಿ ಮುಕ್ತಿಪದ 5