ಒಟ್ಟು 15 ಕಡೆಗಳಲ್ಲಿ , 11 ದಾಸರು , 13 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಮಾಡುವುದೋ ಕೃಪೆ ದಾಸನೊಳು ರಾಮ ಮಾಡುವುದೋ ಕೃಪೆ ದಾಸನೊಳು ಪ ನೋಡ ನೋಡುತ ಕೈಯ್ಯ ಬಿಡುವರೆ ಬೇಡ ಬೇಡಿಕೊಂಬೆನು ರೂಢಿಯೊಳು ನಿನ್ನಂಥ ಕರುಣಿಯ ನೊಡಲಿಲ್ಲವೋ ಎಲ್ಲಿಯು ಅ ಬಂದೆನೋ ನಾನಾ ಜನ್ಮದಲೀ | ರಾಮ ನೊಂದೆನೋ ನಾ ಬಹು ಭವಣೆಯಲೀ ದ್ವಂದ್ವ ದುಃಖದಿ ಕಂದಿ ಕುಂದುತ ಮುಂದುಗಾಣದೆ ಕೆಟ್ಟೆನೋ ಕಂದನೆನ್ನುತ ಬಂದು ಪೊರೆ ಪರಮಾತ್ಮ ನಂಬಿದೆ ನಿನ್ನನು 1 ದಾನ ಧರ್ಮಗಳ ನಾನರಿಯೆ | ರಾಮ ಮೌನ ಮಂತ್ರಗಳ ನಾನರಿಯೆ ಧ್ಯಾನ ಧಾರಣ ಜ್ಞಾನಸಾಧನವೇನೊಂದನು ಅರಿಯೆ ಹಾನಿಯಿದ ನಾನೇನನೊರೆಯಲಿ ಮಾನನಿಧಿ ನಿನ್ನವನು ನಾ 2 ಕಾಮಿನಿ ಕಾಂಚನ ಭೂಮಿಗಳ | ರಾಮ ಕಾಮಕೆÉ ಸಿಕ್ಕಿದೆನೋ ಬಹಳ ನೇಮ ನಿಷ್ಠೆಗಳೇನೂ ಇಲ್ಲದೇ ತಾಪದಿ ನಾ ಕೆಟ್ಟೆನೋ ನಾಮಸುಧೆಯ ಪಾನ ಕರುಣಿಸು ಪ್ರೇಮದಲಿ ಶ್ರೀಕಾಂತನೇ 3
--------------
ಲಕ್ಷ್ಮೀನಾರಯಣರಾಯರು
ಎರಿ ಮುಂಡೆ ಇವನೆರಿ ಮುಂಡೆ ಏನುಅರಿಯದೆ ಒದರುವ ಎರಿಮುಂಡೆ ಪ ತನ್ನ ನಿಜವ ತಾನು ಅರಿಯದೆ ತತ್ವದಕುನ್ನಿಯಂತೆ ಒದರುವ ಎರಿಮುಂಡೆಭಿನ್ನ ಬುದ್ಧಿಯಲಿದ್ದು ನಾ ಬ್ರಹ್ಮವೆಂಬುದನುಚೆನ್ನಾಗಿ ಅರಿಯದ ಎರಿಮುಂಡೆ 1 ಯೋಗವ ತಿಳಿಯದೆ ಯೋಗವ ಹಳಿವನುಈಗ ಹೇಳಿವನೀಗ ಎರಿಮುಂಡೆಆನಿಹೆ ಬ್ರಹ್ಮವು ನಾನೆಂದು ಎತ್ತೆತ್ತೆನುಡಿವನು ಎರಿಮುಂಡೆ 2 ಕೋಟಿ ಸೂರ್ಯರ ತೇಜ ಪಾಟಿಸಿ ಕಾಣದೆಬೂಟಕ ನುಡಿವವ ಎರಿಮುಂಡೆದಾಟಿ ಸಹಸ್ರಾರ ಬ್ರಹ್ಮರಂಧ್ರದ ನಾಳ ಕೇಳದ ನರನಾಗ ಎರಿಮುಂಡೆ 3 ಮಾತರಿಯದೆ ಜ್ಞಾನ ನುಡಿಯಿದ್ದುದಕಳೆದು ಮಣ್ಣು ಹೋಯ್ಯೆಂಬುವ ಎರಿಮುಂಡೆಮಾತಿಲಿ ಬ್ರಹ್ಮವು ಆಗಬೇಕಾದರೆ ಮಹಾಸಾಧನವೇಕೆ ಎರಿಮುಂಡೆ 4 ಒಂದು ಹೋಗಲಿಲ್ಲ ಒಂದೇ ನಾನೆಂಚಿನುಇಂದು ಕೇಳುವನೀಗ ಎರಿಮುಂಡೆಸುಂದರ ಚಿದಾನಂದ ಸ್ವರೂಪ ತಿಳಿಯದೆ ಸುಲಭ ಎಂದೆಂಬುವ ಎರಿಮುಂಡೆ 5
--------------
ಚಿದಾನಂದ ಅವಧೂತರು
ಏನಿದ್ದರೇನಯ್ಯ ಜ್ಞಾನವಿಲ್ಲದಿರೆ ಶ್ರೀನಾಥನಂ ನೆನೆಯದಿಹ ಹೀನಮಾನವಗೇ ಪ. ಗುರುವ ಸೇವಿಸಲಿಲ್ಲ ಹರಿಯ ಧ್ಯಾನಿಸಲಿಲ್ಲ ಅರಿತವರ ಸಂಗತಿಯೊಳ್ವೆರಯಲಿಲ್ಲವಲ್ಲಾ 1 ಹರಿಕತೆಯ ಭಕ್ತಿಯೊಳು ಪ್ರಕಟಮಾಡಿಸಲಿಲ್ಲ ಪರಿಪರಿಯ ಭೋಗದಿಂ ಮರುಳಾದೆನಲ್ಲ 2 ಬಂದೇ ದಾನವಿರದ ಧನವೇಕೆ ಪೇಳು ತಿಂದುಂಡು ಮಲಗುವಾನರಜನ್ಮ ಹಾಳು3 ಕರ ಚರಣ ಮೊದಲಾದ ಕರಣಂಗಳಂ ಪಡೆದು ಹರಿಪದವ ಪೊಂದುವಾ ಪರಿಯುಂಟೆ ಪೇಳು 4 ಆನಂದ ಸಾಮ್ರಾಜ್ಯ ನಿನಗಹುದು ಕೇಳು 5
--------------
ನಂಜನಗೂಡು ತಿರುಮಲಾಂಬಾ
ಕೇಳಿಕೊ ಗುರುಬುದ್ಧಿ ಮನವೆ ಕೇಳಿಕೊ ಗುರುಬುದ್ಧಿ ಕೇಳಿ ನಡೆಯದಿದ್ದರೆ ನೀನು ಜನ್ಮಕ ಜಾರಿಬಿದ್ದಿ ಮನವೆ ಧ್ರುವ ವೇದಕ ನಿಲುಕದ ಹಾದಿಯದೋರುವ ಸದ್ಗರುವಿನ ಸುಬುದ್ಧಿ ಸಾಧಿಸಿ ನೋಡಲು ತನ್ನೊಳಗ ತಾ ಎದುರಿಡುವುದು ಸುಶುದ್ಧಿ ಭೆದಿಸದಲ್ಲದೆ ತಿಳಿಯದು ಎಂದಿಗೆ ಆದಿ ತತ್ವದ ನಿಜ ಶುದ್ಧಿ ಸುಬೋಧದಲಿ ಗೆದ್ದಿ 1 ತರಣೋಪಾಯಕೆ ಸಾಧನವೇ ಮುಖ್ಯ ಗುರುಬುದ್ಧಿಯ ವಿಶೇಷ ಪರಗತಿ ಸಾಧನ ಪಡೆದೇನಂದರೆ ಗುರು ಮಾತ ಉಪದೇಶ ದೋರುದು ತಾ ಹರುಷ ಭವ ಬಂಧಪಾಶ 2 ಗುರು ಘನಸೌಖ್ಯ ಸುರಮುನಿ ಜನರಿಗೆ ಬಲು ಅಗಮ್ಯದೋರುವದೆ ಆಠಕ್ಯ ತರಳ ಮಹಿಪತಿ ಮನವೆÀ ಕೇಳು ಗುರುರಾಯನ ಸುವಾಕ್ಯ ಪರ ಗೆಲಿಸುವದು ನಿಜಮುಖ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಗದೊಳಗ | ಸಾಧುರ ಮಹಿಮೆಯ ನೋಡಿ | ಸಾದರದಿಂದಲಿದೇ ಸಾಧನವೇ ಮಾಡಿ ಪ ಸಾಧುರ ನೋಡಿ | ಬಾರದ ಬಯಸುವರಲ್ಲಾ | ತಾನಾಗಿ ಬಂದ | ದಾರಿಯ ತ್ಯಜಿಸಲಿಕ್ಕಿಲ್ಲಾ ಬರುದೆ ಕಂಡಾ | ದುರಾಶೆ ಸೇರುವರಲ್ಲೆ | ದೊರಕಿದನಿತೆ ಲಾಭ | ಸಂತುಷ್ಟರಾಗಿಹರೆಲ್ಲಾ 1 ಸಾಧುರ ನೋಡಿ | ಬ್ರಹ್ಮಭಾವನೆ ಸಮತಾಳಿ | ಸಕಳಿಲ್ಲಿ | ಹಮ್ಮಿನ ಮೊಳಿಕೆಯ ಕೇಳಿ | ಸಿದ್ಧಾಂತದಿಂದ ತಮ್ಮನು ಭವದಲಿ ಬಾಳಿ | ಮುಮ್ಮುಳಿ | ಬಿಡಿಸುವರೊಂದೊಂದೇ ನುಡಿಹೇಳಿ 2 ಸಾಧುರ ನೋಡಿ | ಭಕ್ತಿಯ ಆಶ್ರಯ ಮಾಡೀ | ಬಂದವರಿಗೆ | ಮುಕ್ತಿಯ ಅನ್ನ ಸತ್ರ ನೀಡೀ | ಸದ್ಭೋಧದ | ಯುಕ್ತಿಯಾನಂದದೊಳಗಾಡೀ | ಉಕ್ತವಾದ ಗುರು ಮಹಿಪತಿಸ್ವಾಮಿ ಕೂಡೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯದೇವಿ ಜಯದೇವಿ ಜಯಭಗವದ್ಗೀತೆ | ಶ್ರಯ ಸುಖದಾಯಕಮಾತೇ ಶೃತಿ ಸ್ಮøತಿ ವಿಖ್ಯಾತೇ ಪ ಮೋಹ ಕಡಲೋಳಗರ್ಜುನ ಮುಳುಗುತ ತೇಲುತಲಿ | ಸೋಹ್ಯವ ಕಾಣದೆತನ್ನೊಳು ತಾನೇ ಮರೆದಿರಲೀ| ಬೋಧ ಪ್ರತಾಪದಲೀ| ಮಹಾ ಸುಜ್ಞಾನದ ತೆಪ್ಪದಿ ದಾಟಿಸಿದವನಿಯಲಿ 1 ಅಂದಿಗಿಂದಿಗೆ ಋಷಿ ಮುನಿ ಸಜ್ಜನ ಮೊದಲಾಗಿ | ಕುಂದದಿ ಪಂಡಿತರೆಲ್ಲರು ಮತಿ ಯುಕ್ತಿಯಲೊದಗಿ | ಸುಂದರ ಟೀಕೆಯ ಮಾಡುತ ಪಾಡುತ ಅನುವಾಗಿ | ಚಂದದಿ ನಿಂತರು ಅನುಭವದಲಿ ವಿಸ್ಮಿತರಾಗಿ 2 ಆವನು ಭಾವದಿ ಪೂಜಿಸಿ ಓದಿಸಿ ಕೇಳುವನು| ಸಾವಿರ ಸಾಧನವೇತಕೆ ಜೀವನ್ಮುಕ್ತವನು | ದೇವಮನುಜರಿಗೆ ತಿಳಿಯದು ಪದಪದ ಮಹಿಮೆಯನು | ಆವಗು ಸ್ಮರಿಸುವ ಮಹೀಪತಿ ನಂದನು ನಿಮ್ಮವನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತಂದೆ ನೀನೆಂದು ನಾ ಬಂದೆ ರಕ್ಷಿಸೆಂದೆ ಪ ಮುಂದೆನ್ನ ಸಲಹುವ ಭಾರವು ನಿಂದೆ ಅ.ಪ. ಮಾತು ಮಾತಿಗೆ ನಾ ನಿನ್ನ ನೆನೆವೆ ಸ್ಮರಿಸುತಿರುವೆ ಜ್ಞಾತಿ ಬಾಂಧವರ ಮತ್ಸರ ಮರೆವೆ ಮಾತಾಪಿತರುಗಳ ಸೇವೆಗೈವೆ ಈ ತನು ನಿನ್ನ ಚರಣಕರ್ಪಿಸಿರುವೆ 1 ಸಾಧನವೇನೆಂಬುದ ನಾನರಿಯೆ ಕೇಳೊ ದೊರೆಯೆ ಮಾಧವ ನಿನ ನಾಮವೆಂದಿಗೂ ಮರೆಯೆ ವೇದಬಾಹಿರರೊಡನಾಡಿ ಮೆರೆಯೆ ಕಾದುಕೋಯೆನ್ನನೆಂಬೆನು ಶ್ರೀಹರಿಯೆ 2 ನಾ ನಿನ್ನ ಕಾಡಿ ಬೇಡುವುದಿಲ್ಲ ದೂರುವನಲ್ಲ ಜ್ಞಾನ ಮಾತುರವಿತ್ತು ಕಾಯಬೇಕಲ್ಲ ನೀ ನನ್ನ ಸಲಹೊ ಲಕ್ಷ್ಮೀ ನಲ್ಲ ಶ್ರೀನಿವಾಸ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ದೋಷ ಬಪ್ಪದೆ ಇಪ್ಪದೆ ಪಾಮರನಿಗೆ ಪ ಜಲಜನಾಭನ ಮರೆತು ಜಲದಲ್ಲಿ ಮಿಂದು ಹೆ ಬ್ಬುಲಿ ಬಣ್ಣದಂತೆ ನಾಮಗಳ ಧರಿಸಲೇನು 1 ಸನಕಾದಿ ಮುನಿವಂದ್ಯ ಮನಸಿಜ ಜನಕಾ ನಮ್ಮನನು ಕಾಯುತಿರೆ ಭೂಮಿಧನವೇ ಜೀವನನೆಂಬುವಗೆ 2 ಶಿರಿಗೋವಿಂದ ವಿಠಲನ ಸಂಸ್ತುತಿಸುವ ಹರಿದಾಸನ ತಿರಸ್ಕರಿಸುವ ದುರುಳಗೆ 3
--------------
ಅಸ್ಕಿಹಾಳ ಗೋವಿಂದ
ನೋಡಿ ನೋಡಿನೊ ರಂಗಾ ನಿನ್ನ ನೋಡಿನೊ ಆಡಲೇನಯ್ಯಾ ಪರಸತಿಯರ ಮೋಹಕ್ಕೆ ಸಿಲುಕಿ ಪ ಹೆಣ್ಣ ನಾ ಕಾಣುತ ಮನಸು ದ್ರವಿಸುವದು ದೃಢವಾಗಿ ಮುನ್ನೆ ದಾರಿದ್ರತನ ಯೆಣಿಸಿಕೊಳದೆ ಕಣ್ಣು ಹೋಗುವ ಸುದ್ದಿ ತಿಳಿಯದಲೆ ನೀಕ್ಷಿಸಿ ನಿತ್ಯ 1 ಜಲ್ಪಸಿಲ್ಪಿಗಳಿಂದ ಮಂತ್ರ ಮಾಡುವೆ ಅವಳಾ ಬಲ್ಪು ವಯ್ಯಾರ ಗುಣಗುಣಿಸಿಕೊಳುತಾ ತಲ್ಪಮಿಕ್ಕಾದ ಭೋಗದ್ರವ್ಯ ಬಯಸಿ ವಿ ಕಲ್ಪ ಸಂಕಲ್ಪದಲ್ಲಿ ಬಳುಲುವೆನುಬ್ಬಸವಳಿದು 2 ವ್ಯಾಖ್ಯಾತ ಪಂಡಿತದ್ವ್ಯಾಪಕ ಪಾಠಕ ಮಹಾ ಪ್ರಖ್ಯಾತ ವೇದವೇದಾಂತ ಪ್ರೌಢ ಸೌಖ್ಯ ಪುಸ್ತಕ ಪಾಣಿ ಜ್ಞಾನಿ ಎನಿಸಲು ಅವಳ ಆಖ್ಯಾನ ಕೇಳುತಲೆ ಕಿವಿಗೊಟ್ಟು ಲಾಲಿಸುವೆ 3 ಬೀದಿಯೊಳು ಪೋಗುವವಾಳೊಂದು ಪ್ರಯೋಜನಕೆ ಹಾದಿಯನು ಹಿಡಿದು ಸಮೀಪ ಬರಲು ಪಾದಕಾದರು ಬಿದ್ದು ಮಾತಾಡುವೆನೆಂಬೊ ಮೋದವನು ತಾಳಿ ಏಕಾಂತ ಹುಡುಕುವೆ 4 ಅಂಧಕ ಮೂಕಿ ಬಧಿರೆ ಹೀನಾಂಗ ಅವರೋತ್ತಮ ಜಾತಿ ವಿಧಿ ನಿಷೇಧವನು ಚಿಂತಿಸದೆ ತೀವರದಿಂದ ಅಧೋಗತಿಗೆ ಇಳುವೆನು ಸತ್ಕರ್ಮವನು ತೊರೆದು 5 ನೀರು ಸೀರೆವೊಗಿವಾಗ ಮೈ ತೊಳೆದು ಉಡುವಾಗ ಉರು ಕುಚ ಕಚ ನೋಳ್ಪ ಆಶೆಯಲ್ಲಿ ಮೂರು ಹತ್ತನೆ ತತ್ವ ನೆನೆನೆನೆದು ಯೋಚಿಸಿ ವಾರಿತಿಯ ಕೇಳಿ ತಲೆದೂಗುವೆನೊ ಲೇಸಾಗಿ 6 ಕಣ್ಣುಯಿದ್ದದಕೆ ಸಾರ್ಥಕವಾಗಲಿಲ್ಲ ಪ್ರ ಸನ್ನ ಮೂರುತಿ ಯೆನ್ನ ಸಾಧನವೇನೊ ಘನ್ನ ಏಲ್ಲೆಲ್ಲಿ ನಾ ನೋಡಿದರೆ ಅಲ್ಲಲ್ಲಿ ನಿನ್ನ ರೂಪವ ತೋರೊ ವಿಜಯವಿಠ್ಠಲ ಒಲಿದು 7
--------------
ವಿಜಯದಾಸ
ಯಾಕೆ ನಿರ್ದಯ ಮಾಡಿದೆ ರಂಗಯ್ಯ ನೀನ್ಯಾಕೆ ನಿರ್ದಯ ಮಾಡಿದೆ ಪ ವ್ಯಾಕುಲ ಪಡಲಾರೆ ನಿಮ್ಮ ಲೋಕವ ಸೇರಿಸು ಅ.ಪ ದುಷ್ಟರ ಮಧ್ಯದಲ್ಲಿ ನಾನಿರಲಾರೆ ಸೃಷ್ಟಿಗೀಶ್ವರನೆ ಕೇಳು ಮುಟ್ಟಿ ಭಜಸಿ ನಿಮ್ಮ ಪಾದಪದ್ಮದ ಭಕ್ತಿಯಿಟ್ಟೇನೆಂದರೆ ದುಷ್ಟ ಇಂದ್ರಿಯ ಬಿಡದೆನ್ನ 1 ಪಂಚೇಂದ್ರಿಯಗಳೆನ್ನ ಬಹುಬೇಗ ವಂಚನೆ ಮಾಡುತಿದೆ ಪಂಚಬಾಣನ ಪಿತ ಪರಮಪುರುಷ ರಂಗ ಅ ಕಿಂಚನಾದೆ ನಿನ್ನಂಘ್ರಿಯ ಸೇರಿಸು 2 ಸಂಸಾರವೆಂಬ ಸರ್ಪ ಕಚ್ಚಿ ವಿಷ ಕ್ಷಣದಲ್ಲಿ ತಲೆಗೇರಿತು ಪರಮ ಹಂಸರ ಸಂಗದೊಳಗೆಯಿರಿಸಿ ಎನಗೆ ಭರದಿಂದೇರಿದ ವಿಷ ತಿರುಗೆಸೋ ಶ್ರೀಹರಿ 3 ಸರ್ಪ ತುಂಬಿದ ಕೂಪದಿ ಬಿದ್ದಿಹೆನು ಎನ್ನಪ್ಪ ರಕ್ಷಿಸೊ ಬೇಗದಿ ಸರ್ಪಶಯನ ಶ್ರೀಅಪ್ರಮೇಯ ರಂಗ ಇನ್ನು ಕ್ಷಿಪ್ರದಿಂ ಮುಕ್ತಿಯ ಒಲಿದು ಪಾಲಿಸು ರಂಗ 4 ಅಮ್ಬುಜನಾಭನೆ ನಿಮ್ಮ ಪಾದದಧ್ಯಾನ ಒಂದು ನಿಮಿಷವಾದರು ಮಾಡಲೀಸದು 5 ಹಿಂದಿನ ಕರ್ಮಂಗಳು ಇಂದಿರೇಶ ನಿಂದಕರ ವಶವಾಯಿತು ಇಂದು ಧರ್ಮದಲಿರ್ದೆ ಬಂಧುಗಳ ವಶವಾಯ್ತು ಇನ್ನು ಬಂಧನವೇನಯ್ಯ ಮುಕ್ತ್ಯಾನಂದ ತೋರುವುದಕ್ಕೆ 6 ಎಂದಿಗಾದರೂ ಮುಕ್ತಿಯ ಕೊಡುವೆಯೆಂದಾನಂದ ಇಂದು ಈ ಸಂಸಾರ ಬಂಧನದೊಳಗೆ ನಾ ಒಂದು ನಿಮಿಷ ಜೀವಿಸಲಾರೆನು ರಂಗ 7 ಅಂದು ದ್ರೌಪದಿ ಧ್ರುವÀ ಗಜೇಂದ್ರನ ರಕ್ಷಿಸಲಿಲ್ಲವೆ ಬಂದು ಅಂಬರೀಷ ಅಜಾಮಿಳರ ಪ್ರಹ್ಲಾದನ ಕಂಬದಿಂದಲೆ ಬಂದು ಕಾಯ್ದ ಗೋವಿಂದ 8 ಭಕ್ತವತ್ಸಲನೆಂತೆಂಬೊ ಬಿರುದು ಈಗ ವ್ಯರ್ಥವಾಯಿತೆ ಶ್ರೀರಂಗ ಉತ್ತಮ ಗುರುಗಳು ಶ್ರೇಯೋನಿಧಿಗಳ ವಾಕ್ಯ ಸತ್ಯವ ಮಾಡಿ ಮುಕ್ತ್ಯಾನಂದ ಪಾಲಿಸು 9 ರಂಗನಾಥ ನೀ ಕೈ ಬಿಟ್ಟರೆ ಎನ್ನ ಲೋಕಮಾತೆ ಬಿಡುವಳೆ ಬೇಗ ಮುಕ್ತಿಪಥವ ಪಾಲಿಸುವಳು 10 ಮಾಡಬಾರದ ಮಾಡಿದೆ ಈ ಸಂಸಾರದೆ ನೋಡಬಾರದ ನೋಡಿದೆ ಆಡಬಾರದ ವಾರ್ತೆಗಳನಾಡಿದೆ ಇನ್ನು ಗಾಡನೆ ಮುಕ್ತಿಯ ನೀಡೊ ವೆಂಕಟರಮಣ 11
--------------
ಯದುಗಿರಿಯಮ್ಮ
ರಾಘವೇಂದ್ರಯತಿ ಗುರುರಾಯರ ಮಹಿಮೆ ಕೇಳಿರಿ ನಮ್ಮ ಗುರುರಾಯರ ಮಹಿಮೆ ಪ ಪರಮ ಭಕುತಿಯಿಂದ ಸ್ಮರಿಸುವ ಸುಜನರ ದುರಿತಗಳÀ್ಹರಿಸಿ ಸದ್ಗತಿ ಪಥವ ತೋರುವ ಅ.ಪ ಇಂದಿರೇಶನ ಮಹಿಮೆ ಪೊಗಳುವ ಭಕ್ತ ಸಂದಣಿ ಪೊರೆಯುವರ ಹಿಂದಿನ ಅಘಗಳನೊಂದೂ ನೋಡದೆ ಶ್ರೀ- ಮುಕುಂದನ ಭಜಕರ ಸಂಗಡ ನೀಡುವ ದಿವ್ಯ 1 ದೇಶ ದೇಶದೊಳಿವರ ಮಹಿಮೆಗಳ ಉ- ಲ್ಲಾಸದಿ ಪೊಗಳುವರ ದಾಸರೆಂತೆಂದು ಸಂತೋಷದಿ ಸೇವಿಪ ಮೀಸಲ ಮನದವರ ಪೋಷಿಸುತಿರುವಂಥ 2 ಹಲವು ಸಾಧನವೇತಕೆ ತನುಮನವ ಶ್ರೀ- ಹರಿಗೆ ಸಮರ್ಪಿಸಿರಲು ಕುಲಕೋಟಿ ಪಾವನ ಮಾಳ್ಪ ಶ್ರೀ ಗುರುಗಳ ಚರಣ ಸೇವಕರೆಂದು ಸಿರಬಾಗಿ ನುತಿಸಿರೊ 3 ನಿದ್ರೆ ಮಾಡುವ ಬಾಲೆಯ ಕರಗಳಿಗೆ ಶ್ರೀ- ಮುದ್ರಾಧಾರಣ ಮಾಡಿಹ ಸಜ್ಜನರಿಗಿವರ ಭಯ ವಜ್ರಕವಚವು ಸತ್ಯ ಹೃದ್ಗøಹದಲಿ ರಾಮಭದ್ರ ಮೂರುತಿ ಕಾಂಬ 4 ಸವಿನಯ ತೋರುವರ ಕನಲಿಕೆ ಕಳೆದು ಶ್ರೀ ಕಮಲನಾಭ ವಿಠ್ಠಲನೊಲುಮೆಯ ಪಡೆದ ಮಂತ್ರಾಲಯ ನಿಲಯ5
--------------
ನಿಡಗುರುಕಿ ಜೀವೂಬಾಯಿ
ರಾಜರಯ್ಯ ನಾವು ನಮ್ಮ ರಾಜೀವಾಕ್ಷನ ಕರುಣವ ಪಡೆದರೆ ಪ ಊಂಛವೃತ್ತಿಯೇ ರಾಜ್ಯಕೋಶ | ನಿಷ್ಟ್ರ- ಪಂಚ ನಡತೆಯೇ ನಮಗೆ ಕಛೇರಿ ಪಂಚೇಂದ್ರಿಯ ಜಯಿಸುವುದು ಮ್ಯಾಜಿಸ್ಟ್ರೇಟ್ ಪಂಚವಿಷಯ ಹಂಚಿಕೆಯೇ ಸಿವಿಲ್‍ಬಾಬು 1 ದೇವಾದಾಯದ ಧನವೇ ರೆವಿನ್ಯೂ ಕಾವನು ಕೊಲ್ವನು ಹರಿಯೆಂಬವುದು ಪಾವನ ಜಡ್ಜ್‍ಮೆಂಟ್ ಕಾಪಿರಿಜಿಸ್ಟರು 2 ದೇವೇಂದ್ರಾದಿಗಳೇ ಕಲೆಕ್ಟರ್ ಸುರರು ತಾಲ್ಲೂಕಾಫೀಸರು ಧರ್ಮನಿಷ್ಠರೆಲ್ಲ ನೌಕರ ಜನಗಳು 3 ದಾನಧರ್ಮವೇ ಡಬ್ಲಿಯು ಎಸ್ಸು ಜ್ಞಾನ ಸಾಧನವೇ ವಸೂಲಿ ಲೆಖ್ಖ ಮಾನವ ವೃತ್ತಿಗಳೆಲ್ಲ ರಿಕಾರ್ಡ್ 4 ಸಪ್ತಾವರ್ಣವೇ ಸಪ್ತಾಂಗದ ಸಭೆ ಸಪ್ತಧರ್ಮವೇ ಕಾರ್ಯಗೌರವವು ಗುರೂಪದೇಶವೇ ಜ್ಞಾನಾರ್ಜನೆಯು 5 ವನಜನಯನ ಗುರುರಾಮವಿಠ್ಠಲನೆ ಸೈನು ಮೊಹರು ಮಹಾ ಚಕ್ರವರ್ತಿಯು 6
--------------
ಗುರುರಾಮವಿಠಲ
ಸಾಧನವೇಕೆ ಸಾಧನವೇಕೆಸದ್ಗುರುನಾಥ ಸನಿಹದಿ ಇರಲಿಕೆಪಯಮನಿಯಮಾಸನ ಎಂಬಿವು ಯಾಕೆಕಮಲಾಸನವನು ಬಲಿಯಲದೇಕೆಶ್ರಮದಲಿ ವಾಯುವ ಬಿಗಿಯಲದೇಕೆಭ್ರಮಿತದಿ ಬ್ರಹ್ಮನ ಕಾಣುವುದೇಕೆ1ಮಿತ ಆಹಾರವ ಮಾಡಲದೇಕೆಅತಿ ವೈರಾಗ್ಯವು ದೇಹಕೆ ಯಾಕೆಸತತವು ಕಾಡನು ಸೇರುವುದೇಕೆಮತಿ ತಿಳಿಯದೆ ತಿರುಗಾಡುವುದೇಕೆ2ಶರಧಿಯು ತಾನಿರೆ ಒರತೆಯದೇಕೆತರಣಿಯೆ ತಾನಿರೆ ದೀಪವದೇಕೆಗುರುಚಿದಾನಂದನಿರೆ ಯೋಗಗಳೇಕೆಗುರುಕೃಪೆ ದೊರೆತರೆ ಭಯ ತಾನೇಕೆ3
--------------
ಚಿದಾನಂದ ಅವಧೂತರು