ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಹುದಹುದು ದೀನ ಬಂಧು ಅಹುದಹುದು ದೀನಬಂಧು|ಶ್ರೀ ಕೃಷ್ಣ| ಸಹಕಾರಿ ಶರಣ ಜನರಾ ಹರಿಯೇ ಪ ಕಪ್ಪೆಮರಿ ಅಂದರೇನು|ಕಾಯ್ದಿರುವಾ| ಅಪ್ಪವಿನೋಳು ಬಳಲುತ|ಹರಿಯೇ| ಸರ್ಪಶಯನೆಂದು ಕರೆಯೆ|ಬಂದೊದಗಿ| ಒಪ್ಪಿಕೊಳ್ಳಬೇಕು ದಯದಿ ಹರಿಯೇ 1 ಪಕ್ಷಿತತ್ತಿಯು ಬೀಳಲು|ಭಾರತ ಮಹಾ| ಅಕ್ಷೋಹಿಣಿ ರಣದಲಿ ಸಲವೆಂದು| ಗಜ ಘಂಟೆಯಾ|ನೀ ಕೆಡಹಿ| ರಕ್ಷಿಸಿದ ಮುಸುಕಿ ಅವರ ಹರಿಯೇ 2 ಕಬ್ಬುಲಿಗ್ಯಾತದ ರೂಪದೀ ಕಪಟದಲೀ| ಒಬ್ಬರಾಯನ ಕನ್ಯೆಯಾ ಭೋಗಿಸುತ| ನಿಬ್ಬುರಕ ನಿನ್ನ ನೆನೆಯೇ|ಗತಿಗೊಟ್ಟು| ಉಬ್ಬುಸವ ಕಳೆಯಲಿಲ್ಲದೇ ಹರಿಯೇ3 ವ್ಯಭಿಚಾರಿ ಗಣಿಕೆ ತಾನು|ಧನವೀವ| ಪ್ರಭುಗಳೊಂದಿನ ಕಾಣದೇ ವಿರಕ್ತಿಯಲಿ| ವಿಭುನಿನ್ನೀ ಕೀರ್ತನೆಗಳಾ ಮಾಡಲಿಕ್ಕೆ| ಅಭಯ ಪದವಿತ್ತೆ ಬೇಗ ಹರಿಯೇ4 ಹಿಂದಾದ ಕಥಿಗಳಿವನು|ಅಹುದಲ್ಲೋ| ಎಂದಾರು ಬಲ್ಲರಯ್ಯಾ ಮಹಿಪತಿ| ಕಂದರೊಡೆಯನೇ ಎನ್ನ ಕೈ ಪಿಡಿದ| ರಿಂದು ನಿಜವೆಂಬೇ ನಾನು ಹರಿಯೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನ ಪೇಳಲಿ ಹರಿಯ ವ್ಯಾಪಾರ ಮಹಿಮೆ ಪ ಆನಂದ ಆಶ್ಚರ್ಯ ಆಗುವುದು ಎನಗೆ ಅ.ಪ. ಮರಳಿಗೋಸುಗ ಪೋಗೆ ಮಾಣಿಕ್ಯ ದೊರೆಯಿತು ಅಮೃತ ಕಳಶವಾಯ್ತು ಇರುಳು ಕತ್ತಲೆಯೊಳಗೆ ಮಣಿದೀಪ ಮಿರುಗಿತು ಕಮಲ ಮಾಲಿಕೆಯಾಯ್ತು 1 ಪಾಪ ಕಾರ್ಯವ ಕೊಳಲು ಪುಣ್ಯ ಸಾಧನವೀವ ಪಾಪ ಸಾಧನವೀವ ಪುಣ್ಯ ಕಾರ್ಯದಲಿ ಪಾಪ ಬೀಜದ ಪುಣ್ಯ ಪುಣ್ಯ ಬೀಜದ ಪಾಪ ಶ್ರೀಪತಿಯ ವ್ಯಾಪಾರ ಈ ಪರಿಯಲಿಹುದು2 ಮೃಗಯಾ ವಿಹಾರದಲಿ ಮನವಿಟ್ಟು ನಾ ಬರಲು ಮೃಗಲಾಂಛನವನ ಕಳೆಯ ಮೀರುವಂಥ ಮಿಗೆ ತೇಜದೀ ಮಗುವು ಎನಗೆ ದೊರೆತುದು ನರ ಮೃಗರೂಪಿ ಕರಿಗಿರೀಶನ ಕರುಣವಿಲ್ಲದಲೆ 3
--------------
ವರಾವಾಣಿರಾಮರಾಯದಾಸರು
ಭೋಗಿವರನೇ ಪಾಲಿಸೋ ಪ ಆಗಸದೊಳು ನೀನಾಗಮಿಸುತಲಿ ಸ-ದಾಗತಿ ಭೋದವ ಭೋಗಿಸಿ ನಿಂದೇ ಅ.ಪ. ಪರಿ ಪ್ರಾ |ರಬ್ಧವ ಭೋಗವ | ನಾದರದನುಭವಸಾಧನವೀವುದು | ಹೇ ದಯವಂತ 1 ಹೃದಯಾಬ್ಜಾಮಲ | ಸದನದಿ ಸುರತರುಹದುಳ ದೊಳಾಶ್ರಿತ | ಬದಿಗನಿನಾದೆಯೊ |ಸದಮಲ ಶಯ್ಯನೆ | ಇದಿರಾವನು ತವಪದವಿಗೆ ಸುರರೊಳು | ಬುಧಜನ ವಂದ್ಯ 2 ಪತಿ ಗುರುಗೋವಿಂದ ವಿಠಲನ | ಭಾವದಿ ಕಾಣಿಸಿ 3
--------------
ಗುರುಗೋವಿಂದವಿಠಲರು