ಹರಿವಾಸುದೇವನೆ ಬ್ಯಾಸರಿಲ್ಲದೆ ದಾಸನ ಮೊರೆ ಕೇಳು
ಜಗದೀಶ ನನ್ನ ಸಮಾನ ಕರುಣಾಭೂಪರುಂಟೆ ಪೇಳು ಪ.
ಕಾಲಕಾಲಕೆ ಪೇಳಲಂಜುವೆ ಶ್ರೀಲಲಾಮ ಹರಿಯೆ ಆದರೆ
ಬೀಳಗೊಳಿಸುವ ದೇಹಬಾಧೆಯು ತಾಳಲಾಪ ಹೊರೆಯೆ
ಎರಡೇಳು ಭಕ್ತಿಯ ಮ್ಯಾಳವರಿಯದೆ ಹಾಳು ಮೋಹ ತೆರೆಯೆ
ಮುಳಿಗೇಳಲಾರೆನು ಮಾಧವನೆ ಕರುಣಾಳು ಕಾಯೊ ದೊರೆಯೆ 1
ಯಾರ ಧನವಿನ್ಯಾರ ಭೂಮಿಯು ಯಾರ ವಸ್ತುಗಳಿವು
ಕುಂಬಾರ ಭಾಂಡಗಳಂತೆ ನಶ್ವರ ತೋರಲ್ಯಾಕೆ ಫಲವು ಲಘು
ನೀರಗುಳ್ಳೆಯ ಪೋಲ್ವ ದೇಹಕೆ ಸೇರಿದ ಸನ್ನಹವು ಬಿಳಿ
ಭಾರ ಪೊತ್ತ ಥರವು 2
ಅದರಿಂದ ವೆಂಕಟಮಂದಿರನೆ ನಿನ್ನಿಂದ ಮಾತ್ರ ತಿಳಿಸು
ಮೂರ್ತಿ ತಾಪಗಳಿಂದ ಬ್ಯಾರೆಗೊಳಿಸು ದ್ವಿಜ
ವೃಂದ ರಕ್ಷಕನೆಂಬ ಬಿರುದನು ಎಂದೆಂದಿಗು ಘಳಿಸು ಭವ
ಬಂಧ ಮೋಚಕ ನಿನ್ನ ಸೇವಾನಂದವಾರ್ಧಿಗಿಳಿಸು 3