ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದ್ದರೇನು ಇಲ್ಲದಿದ್ದರೇನು ಬುದ್ಧಿಯಿಲ್ಲದವನು ಬಾಳಿದ್ದರೇನು ಪ ಮಕ್ಕಳಿಲ್ಲದ ಮನೆಯು ಅರಮನೆ ಆದರೇನು ತಕ್ಕ ದಾನವ ಕೊಡದ ಧನವಿದ್ದರೇನು ದುಃಖ ಸುಖಗಳನು ಕೇಳದ ನೆಂಟರಿದ್ದರೇನು ಅಕ್ಕರದಿ ತಾನೊಬ್ಬ ಉಂಡರಾಗುವುದೇನು 1 ನರಜನ್ಮ ದೊರೆತಾಗ ಹರಿಯ ನೆನೆಯದಿರೇನು ಪಾತಕಿ ಆಗಿ ಬಾಳಿದ್ದರೇನು ದುರಿತ ಕಾರ್ಯದೊಳಿದ್ದ ಬುದ್ಧಿಹಾಕಿದರೇನು ಕರುಣರಹಿತನು ತಾನು ಅರಸಾದರೇನು 2 ಮಾತು ಕೇಳದ ಮಗನು ಮನೆಯಲ್ಲಿ ಇದ್ದರೇನು ಸೋತು ನಡೆಯದ ಬಂಟತನವಿದ್ದರೇನು ನೀತಿ ತಿಳಿಯದೆ ಹರಿಯ ಕಥೆಯ ಕೇಳಿದರೇನು ಹೋತಿನ ಕೊರಳೊಳಗೆ ಮೊಲೆ ಇದ್ದರೇನು 3 ವೇದವನೋದದಾ ವಿಪ್ರನಾದರು ತಾನು ದ್ವಾದಶಿ ನಾಮವನು ಬಡಕೊಂಡರೇನು ಹಾದರಕೆ ಮೆಚ್ಚಿದಾ ಚಲ್ವೆ ಆದರೇನು ಆದಿ ತಿಳಿಯದೆ ಬೂದಿ ಬಡಕೊಂಡರೇನು 4 ಶರಣು ಬಂದವರ ಅನ್ಯರಿಗೊಪ್ಪಿಸದೇ ತಾನು ಕೊರಳ ಕೊಯಿದವನ ಧನ ಸೆಳೆದರೇನು ವರದ ಹನುಮೇಶ ವಿಠಲನಂಘ್ರಿಗಳ ನುತಾ ಸ್ಮರಿಸದಲೇ ನೂರೊರುಷ ಬಾಳಿದರೇನು 5
--------------
ಹನುಮೇಶವಿಠಲ
ರಾಮ ಗೋವಿಂದ ಸೀತಾ - ರಾಮ ಗೋವಿಂದ ಪ.ತೃಪ್ತಿಯಹುದೆ ಹೆತ್ತ ತಾಯಿ ಇಕ್ಕದನಕಭಕ್ತಿಯಹುದೆ ಭಕ್ತಜನರ ಸಲಹದನಕಮುಕ್ತಿಯಹುದೆ ಭಾವಶುದ್ದಿ ಇಲ್ಲದನಕಚಿತ್ತಶುಧ್ಧಿ ಆತ್ಮನಿಜವು ತಿಳಿಯದನಕ 1ಓದಲೇಕೊ ಮನದಿ ಜ್ಞಾನವಿಲ್ಲದನಕಭೇದವೇಕೊ ಗತಿಯುಗಮನ ತಿಳಿಯದನಕಕಾದಲೇಕೊ ಭುಜದಿ ಶಕ್ತಿಯಿಲ್ಲದನಕವಾದವೇಕೊಶ್ರುತಿ- ಶಾಸ್ತ್ರ ತಿಳಿಯದನಕ2ನಳನವಿದ್ದರೇನು ತುಂಬಿಯೊದಗದನಕದಳವು ಇದ್ದರೇನು ಧೈರ್ಯಕೊಡದನಕಲಲನೆಯಿದ್ದರೇನು ಪುತ್ರರಿಲ್ಲದನಕಚೆಲುವನಾದರೇನುವಿದ್ಯೆಕಲಿಯದನಕ3ಮನವಿದ್ದೇಕೊಶುಕ - ಪಿಕವಿಲ್ಲದನಕತನುವಿದ್ದೇಕೊ ಪರಹಿತಕೆ ಬಾರದನಕಮನೆಯಿದ್ದೇಕೊ ಅತಿಥಿಯೊಬ್ಬರಿಲ್ಲದನಕಧನವಿದ್ದರೇನು ದಾನ - ಧರ್ಮಕ್ಕೊದಗದನಕ 4ಹರಿಯ ಚಿಂತೆಯಿರಲು ಅನ್ಯ ಚಿಂತೆಯೇತಕೊಹರಿಯ ಧ್ಯಾನವಿರಲು ಅನ್ಯ ಧ್ಯಾನವೇತಕೊಸಿರಿ ಪುರಂದರವಿಠಲನಿರಲು ಭಯವು ಏತಕೊಹರಿಯ ಒಲಿದ ಮನುಜನಿಗೆ ದೈನ್ಯವೇತಕೊ 5
--------------
ಪುರಂದರದಾಸರು