ಪಾದ ಕೂಡು | ಸಾಯಾಸಗಳನೇ ಬಿಡು ಪ
ಪಾದ ಕೂಡು ಸಾಯಾಸಗಳನೇ ಬಿಡು |
ಸಾಧಿಸುವದು ನೋಡು ಸದ್ಗತಿಯ ಸುಖಾಡು 1
ತನುವಿಟ್ಟು ಧನವಿಟ್ಟು ಚರಣಕ ಮನಕೊಟ್ಟು |
ಅನುವಾಗಿ ತಿಳಿಗಟ್ಟು ಮದಗರ್ವಗಳ ಬಿಟ್ಟು 2
ನಿನ್ನಾ ನೀ ತಿಳಿಯಣ್ಣಾ ಮ್ಯಾಲ ದೋರುದ್ಯಾಕ ಬಣ್ಣಾ |
ಇನ್ನಾರೆ ದೆರಿಕಣ್ಣಾ ಆಗದಿರು ಮಸಿಮಣ್ಣಾ 3
ತನಗ ತಾನೇವೇ ಬಂಧು ತನಗೆ ತಾನೇ ಹಗೆಯೆಂದು |
ವನಜಾಕ್ಷ ಹೇಳಿದುದು ಅನುಮಾನಿಲ್ಲಿದಕಿಂದು 4
ಇನ್ನೊಂದು ಸಾಧನಿಲ್ಲಾ ಇದರಿಂದಧಿಕವಿಲ್ಲಾ |
ಮನ್ನಿಸಿ ಕೇಳಿರೆಲ್ಲಾ ಮಹಿಪತಿಜನ ಸೊಲ್ಲಾ 5