ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೃಢತರದ ಭಕುತಿಯಾ ತವದ್ವಾರದಿಂದಲಿ ದೊರಕುವುದು ನಿಶ್ಚಯಾ ತರಿ ಎನ್ನ ಮಾಯಾ ಪರಿಹರಿಸೋ ಈ ಭವತಾಪವ ಪರಿಹರಿಸದಲೇ ಭರದಿ ಬಂದೆನು ಪರಮ ಪಾವನ ಸತ್ಯಜ್ಞಾನ ಶ್ರೀ ಗುರುವರನೇ ತವ ಚರಣಕೆರಗುವೆ ಪ ಕರ್ಮಗಳೊಂದು ನಾನರಿಯೇ ನಿನ್ನಯ ಪಾಲಿಗೆ ಇಂದು ಚರಣಗಳ ದ್ವಂದ್ವಕೆ ಮಾಡದಲೆ ಸಲಹೋ ಆನಂದತೀರ್ಥರ ಪೀಠಪೂಜನೇ 1 ಭ್ರಷ್ಟನಾದವ ನಾನು ಸೃಷ್ಟಿಸಿದ ಹರಿಯನು ಮರೆತು ದಿನಗಳೆದನು ಪಡ್ಡೆರಧೊಟ್ಟಿ(ಪಡ್ಡೆರದು+ಹೊಟ್ಟಿ) ಹೊರಕೊಂಡೆನು ಪಾಪಿಷ್ಟ ನಾನು ಇಷ್ಟದಾಯಕ ಮುಟ್ಟಿ ಭಜಿಸುವೆ ಸುದೃಷ್ಟಿಯಲಿ ನೋಡಿ ಎನ್ನಯ ಕೆಟ್ಟ ಮನವನು ಕಳೆದು ಜ್ಞಾನದ ದೃಷ್ಟಿ ಕೊಡುವುದು ಶ್ರೇಷ್ಠ ಮಹಿಮನೆ 2 ದಾನಧರ್ಮಗಳನ್ನು ಈ ಕರಗಳಿಂದಲಿ ಮಾಡಲಿಲ್ಲವೊ ನಾನು ಹನುಮೇಶವಿಠಲನ ಸ್ಮರಣೆ ಎಂಬುವುದನ್ನು ಧನವನಿತೆಸುತರಾ ಮೋಹದೊಳು ಮರೆತೆನು ಗುರುವರನೆ ನೀನು ಜ್ಞಾನವಿಲ್ಲದ ದೀನದಾಸನ ಹೀನಗುಣ ಎಣಿಸದಲೆ ಪಾಲಿಸೊ ದೀನಜನ ಮಂದಾರನಿಲಯನೆ ಕಾಮಿತಾರ್ಥವನೀವ ದಾತನೇ 3
--------------
ಹನುಮೇಶವಿಠಲ
ಬ್ರಹ್ಮಣ್ಯ ತೀರ್ಥ ಗುರು ರಾಜಾ | ನಿನ್ನನಮ್ಮಿದೆನೊ ಭಾಸ್ಕರ ಸುತೇಜಾ | ಭಾವಿಬೊಮ್ಮ ಮತವರುಹಿ ಮಹೋಜಾ | ಸಲಹೊಪ್ರಮ್ಮೇಯಂಗಳ ನಿಧಿಯ ಸಹೋಜಾ ಪ ಓದ್ದಾಡುತಿಹೆನೊ ಈ ಭವದೀ | ಸುಖಗದ್ದುಗೆಯನೇರ್ವಂಥ ಹಾದೀ | ತೋರಿಉದ್ಧರಿಸೊ ಬಲು ಕೃಪಾಜಲಧೀ | ಗುರುವೆಶುದ್ಧ ಬುದ್ಧಿಯ ನೀಯೊ ಮುದದೀ 1 ಯಾತ್ರೆಗಳ ಮಾಡ್ದೆನೆಂಬ | ಬಿಂಕದ್ವಾರ್ತೆಯೊಂದಲ್ಲದಲೆ ಇಂಬ | ಕಾಣೆಕ್ಷೇತ್ರ ಮೂರ್ತಿಯ ಕಾಂಬನೆಂಬ | ಆಶೆಪೂರ್ತಿ ಮಾಡೆನ್ನ ಗುರು ಬಿಂಬ 2 ಧನವನಿತೆ ವಿಷಯದಲ್ಲೀ | ಬಹಳ ಮನ ಮಾಡಿ ನೊಂದೆನಲ್ಲೀ | ಹರಿಯಮನ ಮುಟ್ಟೊ ಭಜಿಸು ಎಂಬಲ್ಲೀ | ಇನ್ನುಘನ ಜ್ಞಾನ ಭಕುತಿ ಇಲ್ಲಲ್ಲೀ 3 ಜೀವಗೆಲ್ಲಿಯ ಸ್ವತಂತ್ರಾ | ಹರಿಗುರುತಾವಲ್ಲಿ ಮಾಡುತಿಹ ತಂತ್ರ | ದಿಟವಿದುಜೀವನೇ ಮಾಳ್ಪುನೆಂಬುದೆ ಕುತಂತ್ರ | ತಿಳಿಸೊಭಾವ ಜಾನಯ್ಯನ ಸ್ವತಂತ್ರ 4 ಸಾರ ವ್ರಾತ | ತಿಳಿಸೊಜ್ಞಾನ ನಿಧಿ ಪುರುಷೋತ್ಮ ತಂತ್ರ 5 ಕಾರಕ ಕ್ರಿಯ ದ್ರವ್ಯವೆನಿಪ | ಭ್ರಮವುಮೂರರಿಂದಲಿ ದೂರ ಮಾಳ್ಪ | ಮಾರ್ಗತೋರಿಸಲಹುವುದು ಯತಿ ಭೂಪ | ತವಪದವಾರಿ ಜತೆ ಈ ನೀಚ ಬೀಳ್ಪ 6 ತ್ರ್ಯಕ್ಷಾಂಶ ಭೂತರಾದ | ಸನ್ಯಾಸಿಅಕ್ಷೋಭ್ಯ ಕರಜರಾದ | ಅಜೇಯಇಕ್ಷುಚಾಪನ್ನ ಗೆಲಿದ | ಜಯಾರ್ಯಭಿಕ್ಷುವಿನ ಮಾರ್ಗರಾದ7 ಮೋದ | ಪಡೆವದಾಯ ತೋರಿದಿ ನಿರ್ವಿವಾದ | ಇನ್ನುಗಾಯನದಿ ಮಹಿಮೆ ಅಗಾಧ | ಪೇಳ್ವಆಯತವ ನೀಯೋ ಸುಭೋಧ 8 ಬೃಹತೀ ಸಹಸ್ರ ಮಂತ್ರ | ಜಪಿಪಮಹಯೋಗದಾತ ಮಹಾಂತ | ಬೇಡ್ವೆಬೃಹತಿನಾಮಕನು ಎಂಬಂಥ | ಹರಿಯಮಹ ಮಹಿಮೆ ಕಂಡು ಹಿಗ್ವಂಥ 9 ಸೃಷ್ಟ್ಯಾದಿ ಅಷ್ಟಕಗಳ | ಗೈವಕೃಷ್ಣನ್ನ ಮಹಿಮೆಗಳ | ಕೇಳಿಹೃಷ್ಟರಾಗುವ ಜನಗಳ | ಸಂಗಕೊಟ್ಟುದ್ಧರಿಸೊ ನಮ್ಮಗಳ 10 ಸದನ 11
--------------
ಗುರುಗೋವಿಂದವಿಠಲರು
ಮನಸಿನನುತಾಪವನು _ ಪರಿಹರಿಸು _ ಹರಿಯೇ ಪ ವನಜ ನಾಭನು ನೀನೇ ಮನದ ಪ್ರೇರಕನಲ್ಲವೇ ಅ.ಪ. ಅನುದಿನದಿ ಧನವನಿತೆ _ ಎಂತೆಂಬ ಕಾನನದಿ ಮನಸು ಮಾಡೀ ಬಹಳ _ ಶ್ವಾನನಂದದಿ ತಿರಿದೇ ಕನಸಿಲಾದರು ನಿನ್ನ _ ಧ್ಯಾನವನು ಮಾಡದೆಲೆ ಮನುಜ ಪಶುವೆನಿಸಿದೆನು _ ದೀನವತ್ಸಲ ಸ್ವಾಮಿ 1 ಸಂಸಾರ ವೆಂಬುವುದು _ ಹಿಂಸೆರೂಪವೆಸಿದ್ಧ ಹಂಸರೂಪಿಯ ಮರೆತ _ ಸಂಶಯಾತತಜನಕೆ ಧ್ವಂಸ ಗೈಸಿ ವಿಷಯ _ ವಾಸನೆಯ ತರಣಿಯನು ಶೌರಿ _ ದಾಸನೆನ್ನನು ಮಾಡಿ2 ಜ್ಞಾನ ತಿರುಳನು ತಿಳುಹಿ _ ಧ್ಯಾನಬಗೆಯನು ಅರುಹಿ ಮಾನಾಭಿಮಾನವನು _ ನಿನಗೆ ಸಮರ್ಪಿಸಿ ಸು ಜ್ಞಾನಿಗಳ ಸಹ ಶ್ರೀ ಕೃಷ್ಣವಿಠಲನ ನಿತ್ಯ ಗಾನದಲಿ ಮೆಚ್ಚಿಸುವ ಭಾಗ್ಯ ಶೀಲನ ಮಾಡೀ 3
--------------
ಕೃಷ್ಣವಿಠಲದಾಸರು