ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುವ ತೊಳೆದ ಮಾತ್ರದಿಂದ ಜನರು ಶುದ್ಧರೆನಿಪರೆ ಪ ಮನದ ಶುದ್ಧಿ ಆದ ಹೊರತು ವನಜನಾಭನೊಲಿವನೇ ಅ.ಪ ದಿನಪನುದಯ ಕಾಲದಿಂದ ದಿನಪನಸ್ತದನ್ನೆಗಾ ಧನವಗಳಿಸುವಾಸೆಯಿಂದ ಮನಸಿನಲ್ಲಿ ಯೋಚಿಸಿ ಮನಸಿಜಾತನಾಟಕೆ ಪರವನಿತೆಯರ ಬೆರೆಯುತುರುಳಿ ಕನಸಿನಲ್ಲಿ ಹರಿಯ ಕಂಡೆ ಎನುತ ಪೇಳ್ವ ಮಾನವಾ 1 ಪರರು ನೋಡಿ ಮೆಚ್ಚಲೆಂದು ಬೆರಳಿನಿಂದ ಮಣಿಯನೆಣಿಸಿ ಶಿರವನೊಮ್ಮೆತೂಗಿ ತೂಗಿ ತೆರೆದು ಮುಚ್ಚಿ ಕಂಗಳ ಹಿರಿಯ ಭಕ್ತನಂತೆ ನಟಿಸಿ ಪರರ ಮೋಸಗೊಳಿಸಿ ದಣಿಸಿ ಬರಿಯಡಾಂಭಿಕ ಮಾಂಗಿರೀಶ್ವರನ ಶರಣನೆನಲು ಸಾಧ್ಯವೇ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್