ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಡದಿ ಭಾಗ್ಯ ಎಂಬುವಿಯಾಕೊ ರಂಗಯ್ಯನಿನ್ನ ಬಡಿವಾರವ ಹೇಳಿಕೊಂಬೆ ಸಾಕೊ ಕೃಷ್ಣಯ್ಯ ಪ. ಬಿಡು ಬಿಡು ಸಣ್ಣ ಮಾರಿಯನ್ನು ನೀ ಮಾಡಬ್ಯಾಡ ಬಡಿವಾರವ ಹೇಳಿಕೊಂಬುವುದೇನೊಕಡುಭಾಗ್ಯ ಪುರುಷನಾಗೊ ನೀನು ಎತ್ತಿಕೊಂಡ್ಹೋಗಿ ಮಡುವು ಸೇರಿಕೊಂಡಿ ಮತ್ತೇನೊ1 ದೊರೆತನ ಹೇಳಿಕೊಂಬೆ ಸಾಕೊ ರಂಗಯ್ಯನಿನ್ನ ಕರಕರ ಹಲ್ಲು ತಿಂಬೊ ಸಿಟ್ಟು ಕೃಷ್ಣಯ್ಯಬಿರುಗಣ್ಣು ಬಿಡವೋದ್ಯಾಕಿಷ್ಟು ರಂಗಯ್ಯನಿನ್ನ ಉರಿಮಾರಿಗೆ ಅಂಜೋರೆಲ್ಲೊ ಅಷ್ಟು 2 ಧರೆ ಮ್ಯಾಲೆ ರಾಜ್ಯ ಹ್ಯಾಂಗ ರಂಗಯ್ಯನಿನ್ನ ತಗಿ ತಗಿ ಬಲುಲೀಲಾ ಕೈಯ್ಯ ಕೃಷ್ಣಯ್ಯಸುಗುಣನೆಂತೆಂಬೊ ಮತಿಯಾದುದಕ್ಕೆಜನರು ನಗದೆ ಸೈ ಸೈ ಎಂದಾರು ಬರಿಯ ಕೃಷ್ಣಯ್ಯ3 ಧೀರ ಧನವಂತನಲ್ಲೊ ಸಾಕೊ ರಂಗಯ್ಯಆದರೆ ವನದಿನಾರು ವಸ್ತ್ರವನುಟ್ಟುಕೊಂಡಿ ಯಾಕೊ ಕೃಷ್ಣಯ್ಯಚೋರನಂತಾಡಿಕೊಂಬಿ ಸಾಕೊ ರಂಗಯ್ಯಇದ ಕೇಳಿದ ವೀರರೆಂಬವರು ನಗತಾರೊ ಕೃಷ್ಣಯ್ಯ 4 ವಸ್ತ್ರವಿಲ್ಲೆಂಬೊ ಎಚ್ಚರಿಕಿಲ್ಲೊ ರಂಗಯ್ಯತೇಜಿ ಹತ್ತೇನು ಎಂದು ಬರುವಿಯಲ್ಲೊ ಕೃಷ್ಣಯ್ಯಕತ್ತಿ ಕೈ ಶೂರನೆಂಬೊದೆಲ್ಲೊ ರಂಗಯ್ಯರಾಮೇಶ ನಿನ್ನ ಹತ್ತಿಲ್ಲಿದ್ದರೆಲ್ಲ ನಗುವರೊ ಕೃಷ್ಣಯ್ಯ5
--------------
ಗಲಗಲಿಅವ್ವನವರು