ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಲ್ಲಿ ಅವಗುಣ ಶತಸಾವಿರವಿರೆ | ಅನ್ಯರ ಕರೆದಾನು ನಡತೆ ಇದೇನೆಂಬೆ ಪ ವೇದವನೋದಿದೆ ಪರರಿ | ಗಾದÀರಿಸಿ ಮುಕುತಿಗೆ | ಹಾದರಹಳು ನಾರಿ | ಮಾದಿಗÀನ ಪೋದಂತೆ 1 ಧನದಾಸೆಯಿಂದ ಸಾಧನವಾಗದೆಂದು | ಜನರಿಗೆ ಉಪದೇಶವನು ಮಾಡುವೆ | ತೃಣ ಹತ್ತದಿದ್ದ | ವಧನರಾಶಿ ಕದ್ದಂತೆ2 ರಸನೇಂದ್ರಿಯಗಳ ಬಂ | ಧಿಸಬೇಕೆಂದು ನಾನು | ಉಸುರುವೆ ಅಲ್ಲಲ್ಲಿ ಕುಶಲನಾಗಿ | ಅಮೃತ | ರಸವಲ್ಲೆನೆಂದಾವ ಮುಸುರಿಯ ಮೆದ್ದಂತೆ 3 ಒಡಿವೆ ವಸ್ತುಗಳು ಸಂಗಡ ಬಾರವು ಮಮತೆ | ಬಿಡು ಸಂಸಾರವಿದು ಕಡಿಗೆ ಭವದ | ಮಡವು ಸಿದ್ಧವೆಂದು ನುಡಿವೆನೊ ಪರರಿಗೆ | ಯಡಹಿಯೊ ಎಂದಾವ ಗಿಡನೇರಿ ಬಿದ್ದಂತೆ 4 ಭಕುತಿ ಕೂಡಿದ ವಿರಕುತಿ ಲೇಶವಿಲ್ಲಾ | ಯುಕುತಿ ಬಾಯಲಿ ನಾರಕಕೆ ಸಾಧನಾ | ಲಕುಮಿವಲ್ಲಭ ನಮ್ಮ ವಿಜಯವಿಠ್ಠಲ ನಿನ್ನ ಅ | ರ್ಚಕನಾಗಿ ಬದುಕತಕ್ಕದ್ದು ಮಾರ್ಗವ ತೋರೊ 5
--------------
ವಿಜಯದಾಸ
ದಾಸಗುರೂ | ದಾಸಗುರೂ | ವಾಸವ ನಾಮಕ ಪ ಭೂಸುರರಿಗೆ ಧನರಾಶಿ ಸಮರ್ಪಿಸಿ ವ್ಯಾಸರಾಯರುಪದೇಶಗೊಂಡ ಹರಿ ಅ.ಪ ಜಲಜಭವನ ಪಿತನಾಜ್ಞೆಯಲಿ ಕಲಯುಗದಲಿ ಜನ್ಮ ತಾಳುತಲಿ ಅಲವ ಬೋಧಾಮೃತ ನೆಲೆಯನು ಸುಲಭದಿ ತಿಳಿಗನ್ನಡದಲ್ಲಿ ತಿಳಿಸಿ ಸಲುಹಿದ 1 ಪವನದೇವನ ಒಲಿಸುತಲಿ | ಮಾ ಧವನ ಸ್ತುತಿಸಿ ಸಲೆ ಕುಣಿಯುತಲಿ ಕವನದಿ ಭಕುತಿಯ ನವವಿಧ ಮಾರ್ಗವ ಅವನಿಗೆ ಬೀರಿದ ದಿವಜ ಮೌನಿವರ 2 ಕಾಮಿತ ಫಲಗಳ ಗರಿಯುತಲಿ ಬಲು ಪಾಮರ ಜನರನು ಸಲಹುತಲಿ ಶ್ರೀಮನೋವಲ್ಲಭ ಶಾಮುಂದರ ನಾಮಾಮೃತವನು ಪ್ರೇಮದಿಂದುಣಿದ 3
--------------
ಶಾಮಸುಂದರ ವಿಠಲ
ಬೀಸಿದ ಗುಂಡಗೆ ಬುಕ್ಕಿದ್ದೇ ಲಾಭ ಬೇಸರವಿಲ್ಲದೆ ಪ ವಾಸುಕಿಶಯನನ ಲೇಶವು ಭಜಿಸದೆ ಅ.ಪ ಹಗಲು ಇರುಳು ವಿಷಯಗಳಲಿ ಮುಳುಗಿ ಪೊಗಳದಿರಲು ಹರಿ ನಾಮವನು ಜಗದೊಳೆನಗೆ ಸಮರಾರೆಂದೆನುತಲಿ ಬೊಗಳಿ ನರಕಕ್ಕುರುಳುವೆನೆಂದರಿಯದೆ 1 ಮೋಸದಿಂದ ಧನರಾಶಿಗಳಿಸಿ ಅತಿ ಹೇಸಿಗೆ ಭೋಗಗಳಾಶಿಸುವ ಈಶನಂತೆ ಬಲು ಮೆರೆಯುತ ಮದದಲಿ ಶ್ರೀಶ ಸಹಾಯವ ಬಯಸದ ತನಕ 2 ಗಂಗಾ ಶುಚಿಜಲ ದೊರಕುತಿರೆ ಹಲ ವಂಗವ ನೀರನು ಬಯಸುವರೇ ಮಂಗಳ ಕರ್ಮಗಳಾಚರಿಸದೆ ನೀ ಮಂಗನಂದದಲಿ ಕುಣಿಯುವ ತನಕ 3 ಕಂಗಳಿಲ್ಲದ ಕುರುಡನಿಗೆ ಬೆಳ ದಿಂಗಳ ಸೌಖ್ಯವು ತೋರುವುದೆ ರಂಗನ ಮಹಿಮೆಯನರಿಯದ ಮೂಢನು ತಂಗಳು ಭೋಗವ ಬಯಸುವ ತನಕ 4 ಕನ್ನಡಿಯೊಳಗಿನ ಗಂಟಿನಂತಿರುವುದು ನಿನ್ನ ನಶ್ವರದ ಭೋಗಗಳು ಇನ್ನಾದರು ನಿನ್ನ ಮೂಢತನವ ಬಿಟ್ಟು ಸಂತತ ಭಜಿಸೋ ಪ್ರಸನ್ನ ಶ್ರೀಹರಿಯ 5
--------------
ವಿದ್ಯಾಪ್ರಸನ್ನತೀರ್ಥರು
ಹರಿಲೀಲೆ ಹರಿಲೀಲೆ ಪ ಜಗದೊಳು ಸುಜನರು ಬಳಲುತಲಿರುವುದು ಅ.ಪ ಉಚ್ಚಕುಲದಿ ಪುಟ್ಟಿ ಸ್ವಚ್ಛ ಜ್ಞಾನದಿಂದ ಅಚ್ಯುತನಂಘ್ರಿಯ ಪೂಜಿಸುತಿರಲು ತುಚ್ಛ ಜನರುಗಳು ಸ್ವೇಚ್ಭೆಯಿಂದಲಿ ಹುಚ್ಚು ಹರಟೆಗಳ ಹರಟುವುದೆಲ್ಲವು 1 ಪಂಡಿತರೆಲ್ಲ ಅಖಂಡ ಕಲೆಗಳಿಗೆ ಮಂಡನರೆನಿಸಿ ಭೂಮಂಡಲದಿ ಭಂಡಿ ಭಂಡಿ ಧನರಾಶಿಗಳಿರಲಾಗಿ ಪಿಂಡಕ್ಕಿಲ್ಲದೆ ತಿರುಗುತಲಿರುವುದು 2 ಮನವ ತೊರೆಯುತ ಕಾಮಿನಿಯರುಗಳು ಗಾನವ ಮಾಡಲು ಆನಂದಿಪರು ಜ್ಞಾನಿ ದಾಸರುಗಳು ಭಕುತಿಯಿಂದ ಹರಿ ಗಾನವ ಮಾಡಲು ಮಾನಸದಿರುವುದು 3 ಪನ್ನಗಶಯನನು ತನ್ನ ಭಕುತರಿಗೆ ಹೆಣ್ಣು ಹೊನ್ನು ಮಣ್ಣಿನ ಆಸೆ ಯನ್ನು ಬಿಡಿಸಿ ಅವರನ್ನು ಉದ್ಧರಿಸಿ ಪ್ರ ಸನ್ನನಾಗುವೆ ನಾನೆನ್ನುತ ಪೇಳ್ವುದು 4
--------------
ವಿದ್ಯಾಪ್ರಸನ್ನತೀರ್ಥರು