ಕಾಯ ಕರವ ಪಿಡಿಯೊ ಗೋಪಾಲ ಪ
ಜಾಳು ಜೀವನದ ಗೋಳಿಗೆ ಸಿಲುಕಿದೆ
ಕೇಳುವರುಂಟೆ ದಯಾಳು ನೀನಲ್ಲದೆ ಅ.ಪ
ತನುಬಲ ಧನಬಲ ಜನಬಲವೆಲ್ಲವು
ಅನುಸರಿಸುವುವೇ ಕೊನೆತನಕ
ಧನವು ತಪ್ಪಿದರೆ ಜನರು ತ್ಯಜಿಸುವರು
ಜನಕ ನೀನಲ್ಲದೆ ಪೊರೆವರ ಕಾಣೆನೊ 1
ಸಟೆಯನಾಡುವುದು ದಿಟವ ತೊರೆಯುವುದು
ಕಟುತರ ವಚನಕೆ ನಗುತಿಹುದು
ಕಪಟ ಜೀವನವು
ತುಟಿಯ ಮೀರಿದ ದಂತಗಳಂತಿರುವುದು 2
ನಿಮಿಷದ ಸೌಖ್ಯಕೆ ವರುಷದ ಕ್ಲೇಶವು
ಪುರುಷ ಜೀವನವಿದು ಧರೆಯೊಳಗೆ
ಪುರುಷೋತ್ತಮನೆ ಪ್ರಸನ್ನ ಹೃದಯನಾಗಿ
ಕಲುಷರಹಿತವಾದ ಹರುಷವÀ ನೀಡೆಲೋ 3