ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪವಮಾನ ಜಗದ ಪ್ರಾಣ ಸಂಕರುಷಣ ಭವನೇ ಭಯಾರಣ್ಯದಹನ ಪ ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರೀಯ ಅ.ಪ. ಹೇಮ ಕಚ್ಚುಟ ಉಪವೀತ-ಧರಿಪ ಮಾರುತ ಕಾಮಾದಿ ವರ್ಗರಹಿತ ವ್ಯೋಮಾದಿ ಸರ್ವವ್ಯಾಪುತ-ಸತತ ನಿರ್ಭೀತ ರಾಮಚಂದ್ರನ ನಿಜದೂತ ಯಾಮ ಯಾಮಕೆ ನಿನ್ನರಾಧಿಪುದಕೆ ಕಾಮಿಪೆ ಎನಗಿದ ನೇಮಿಸಿ ಪ್ರತಿದಿನ ಪಾಮರ ಮತಿಯನು ನೀ ಮಾಣಿಪುದು 1 ವಜ್ರ ಶರೀರ ಗಂಭೀರ-ಮಕುಟಧರ ದುರ್ಜನವನ ಕುಠಾರ ನಿರ್ಜರಮಣಿ ದಯಾ ಪಾರಾ-ವಾರ ಉದಾರ ಸಜ್ಜನರಘ ಪರಿಹಾರ ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು ಮೂರ್ಜಗವರಿವಂತೆ ಗರ್ಜನೆಮಾಡಿದೆ ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜಪಾದದ ಧೂಳಿ- ಮೂರ್ಜನದಲಿ ಭವವರ್ಜಿತನೆನಿಸೊ 2 ಪ್ರಾಣ ಅಪಾನ ಉದಾನ-ವ್ಯಾನ ಸಮಾನ ಆನಂದ ಭಾರತೀರಮಣ ನೀನೆ ಯಾಮ ಯಾಮಕೆ e್ಞÁನ ಧನಪಾಲಿಪ ವರೇಣ್ಯ ನಾನು ನಿರುತದಲಿ ಏನೇನನೆಸಗಿದೆ ಕರ್ಮ ನಿನಗೊಪ್ಪಿಸಿದೆನೊ ಪ್ರಾಣನಾಥ ಸತ್ಯ ವಿಜಯವಿಠ್ಠಲನಕಾಣಿಸಿ ಕೊಡುವುದು ಭಾನು ಪ್ರಕಾಶ 3
--------------
ವಿಜಯದಾಸ