ಲಕ್ಷ್ಮೀ ದೇವಿಯ ಗಂಡ ಹರಧನುರ್ಭಂಗಾ
ರುಕ್ಮಾಂಗ ಧನಪಾಲಾ ಕರುಣಾಂತರಂಗಾ ಪ
ಪೂಜಿಸಿದವರಿಗಭೀಷ್ಟವ ಕೊಡುವಾ
ಪೂಜಿಪ ದಾಸರ ಕಷ್ಟವ ತರಿವಾ
ಸಜ್ಜನರಿರುವಲ್ಲಿ ನಿರುತನಾಗಿರುವಾ 1
ಸ್ಮಾರನನ್ನು ಪಡೆದ ಮನೋಹರ ಮೂರ್ತಿ
ಶರಣು ಬಂದವರಿಗೆ ವರ ಚಕ್ರವರ್ತಿ
ಧರೆಯಲ್ಲಿ ಪೊಗಳುವೆ ಶ್ರೀಹರಿ ಕೀರ್ತಿ
ಅರಿಯದ ದಾಸಗೆ ಸುಖಗಳ ಭರತೀ 2
ಪನ್ನಗಶಯನ ಶ್ರೀದಾಸರ ಪೋಷಾ
ಸನ್ನುತ ಕಾವ ಶ್ರೀ ದೂರ್ವಾಪೂರೇಶಾ
ಮನ್ನಿಸಿ ರಕ್ಷಿಸೊ ಭಜಕರ ಪೋಷಾ
ಚನ್ನಿಗ ಕೇಶವದಾಸನಧೀಶಾ3