ಲಾಲಿ ಗೌರೀಪ್ರಿಯನೆ ಲಾಲಿ ನಾಲ್ಮೊಗನೆ
ಲಾಲಿ ಲಕ್ಷ್ಮೀರಮಣ ಲಾಲಿ ಪರಿಪೂರ್ಣ ಪ
ಕಪಟದಾನವಶಿಕ್ಷ ಕರುಣಾ ಕಟಾಕ್ಷ
ತಪನಾಗ್ನಿ ಶಿಖಿನೇತ್ರ ಧನನಾಥ ಮಿತ್ರ
ಸುಪವಿತ್ರ ಚಾರಿತ್ರ ಸುಜನನುತಿ ಪಾತ್ರ1
ವನಜ ಸಂಭವ ಸೃಷ್ಟಿ ಕರ್ತವಾಣೀಶ
ಕನಕ ಗರ್ಭಾಪ್ರತಿಮ ಮಹಿಮ ಜೀವೇಶ
ಗಮನ ಸುವಿಲಾಸ
ಸನಕಾದಿ ಮುನಿವಿನುತ ಸರ್ವಲೋಕೇಶ2
ಪಕ್ಷಿವಾಹನ ಜಗದ್ರಕ್ಷ ಸಿರಿವರನೆ
ಸಾಕ್ಷಿಯಾಗಿಹ ಗುರುರಾಮ ವಿಠ್ಠಲನೆ 3