ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿರುವೆ ಬಾರಯ್ಯದೇವ ಬಲ್ಲಿದ ನೀನೆ ಅನಾಥಜನಜೀವ ಪ ಪುಲ್ಲನಾಭ ನೋಡೆನ್ನ ಪರಿಭವದ ದು:ಖವನು ನಿಲ್ಲದೆ ದಯಮಾಡು ಬೇಗದೊಳಭವ ಅ.ಪ ಕ್ಷಣಕ್ಷಣಕೆ ಒದಗುತಿಹ್ಯ ದಣಿವು ಬೇನ್ಯಾಪತ್ತು ಅನುಪಮ ಬಡತನದ ಘನ ಘನ ವಿಪತ್ತು ದಿನದಿನ ಪರರನು ಮಣಿದುಬೇಡುವ ಹೊತ್ತು ಇನಿತೆಲ್ಲ ಕನಿಕರದಿ ನೀನೆ ಕಳೆಯಭವ 1 ಕನಕ ವಸ್ತ್ರಾಭರಣ ವನಿತೆಗ್ಹಾಕುವ ಚಿಂತೆ ಧನಧಾನ್ಯವಿಲ್ಲೆಂಬ ಎಣಿಕಿಲ್ಲದ ಚಿಂತೆ ಮನಕೆ ತುಸುಗೊಡದ ರಿಣಬಾಧದ್ದತಿ ಚಿಂತೆ ವನಜಾಕ್ಷ ಕೃಪೆಯಿತ್ತು ನೀನೆ ಬಿಡಿಸಯ್ಯ 2 ಧರೆಯಸುಖೆನಗಿಲ್ಲೆಂಬ ಪರಿಪರಿಯು ಉರಿ ತಾಪ ಪರರಸೇವೆಯ ಮಾಡ್ವ ಪರಮ ಪರಿತಾಪ ಜರಜರಕೆ ಬಂದು ಆವರಿಸುವುವು ಮಹಪಾಪ ಪರಹರಿಸೆಲವೋ ಶ್ರೀರಾಮಪ್ರಭು ಭೂಪ 3
--------------
ರಾಮದಾಸರು
ಕಲಿಯುಗದ ಮಹಿಮೆಯನು ಕಂಡಷ್ಟು ಪೇಳುವೆನು ಪ ಜಲಜನಾಭನ ಕೃಪೆಯ ಪಡೆದವರು ಕೇಳಿ ಅ ಸತ್ಯಧರ್ಮಗಳೆಲ್ಲ ಎತ್ತ ಪೋದವೊ ಕಾಣೆಉತ್ತಮರ ಜೀವನಕೆ ದಾರಿಯಿಲ್ಲನಿತ್ಯದಲಿ ಕಳವು ವ್ಯಭಿಚಾರವುಳ್ಳವರೆಲ್ಲಅರ್ಥ ಸಂಪನ್ನರಾಗನುಭವಿಸುತಿಹರು1 ಅತ್ತೆಯೇ ಸೊಸೆಯಾಗಿ ಸೊಸೆಯು ಅತ್ತೆಯು ಆಗಿಪುತ್ರ ಪಿತನಾಗಿ ಪಿತ ಪುತ್ರನಾಗಿಮತ್ತೆ ಗಂಡನಿಗೆ ಹೆಂಡತಿಯೆ ಗಂಡಳು ಆಗಿವರ್ತಿಸುವರಯ್ಯ ತಮಗೆದುರಿಲ್ಲವೆಂದು 2 ವೈರಿ ಸಿರಿ ಮದದಿ ಸೊಕ್ಕಿದರುಕಾವರಾರೈ ಸಾಧು ಸಜ್ಜನರನೀಗ3 ವೇದ ವಿಪ್ರರು ತಮ್ಮ ವೃತ್ತಿ ಸ್ವಾಸ್ಥ್ಯವ ಕಳೆದುಆಧಾರವಿಲ್ಲದೆ ತಿರಿದು ತಿಂಬುವರುಕಾದುವ ಶೂರರಿಗೆ ಕಾಸು ಕೊಡುವವರಿಲ್ಲಮೇದಿನಿಗೆ ಬೀಳ್ವ ಮಳೆ ಖಂಡಮಂಡಲವು 4 ಅನ್ನವಸ್ತ್ರಗಳಿಂದ ಚೆನ್ನಾಗಿ ಬಾಳುವರಭಿನ್ನ ತಂತ್ರವ ಮಾಡಿ ಕೆಡಿಸುತಿಹರುಗನ್ನಗತಕವ ಮಾಳ್ಪ ಗ್ರಾಮಣ್ಯಗಳ ಕಲಿತುಕುನ್ನಿಗಳು ಹೆಚ್ಚಿದರು ಕ್ರೂರ ಫಣಿಯಂತೆ 5 ಆಳಿದೊಡೆಯಂಗೆರಡು ಬಗೆಯುವಾತಗೆ ಒಳ್ಳೆಮಾಳಿಗೆಯ ಮನೆ ತುರುವು ಧನಧಾನ್ಯವುವೇಳೆವೇಳೆಗೆ ಬರುವ ಹೆಂಡತಿಯ ಲೆಕ್ಕಿಸದೆಸೂಳೆಯನು ನೆಚ್ಚಿ ಕಾಲವ ಕಳೆವರಯ್ಯ6 ಸೇರಿ ದ್ರೋಹವ ಮಾಳ್ಪ ಕ್ರೂರಕರ್ಮಿಗಳ ಮತಪೂರೈಸಿ ಕೊಡುವರರಸುಗಳೆಲ್ಲರುಧಾರಿಣಿಯ ಭಾರವನು ತಾಳಲಾರದೆ ದೇವಿಶ್ರೀರಾಮ ರಾಮೆಂದು ಶಿರವ ತೂಗುವಳು7 ಪತಿ ನೀನೆ ಗತಿಯೆನಲುಮುತ್ತೈದೆಗುಡುವುದಕೆ ವಸ್ತ್ರವಿಲ್ಲಮತ್ತೆ ವ್ಯಭಿಚಾರಿಣಿಗೆ ತೊಡಿಗೆ ಬಂಗಾರಗಳುವರ್ತನೆಯಿದೇನಯ್ಯ ಕಲಿಯುಗದ ಮಹಿಮೆ 8 ಪತಿವ್ರತೆಯರೆಂಬುವರು ಶತಸಹಸ್ರಕೊಬ್ಬರುಮಿತಿಮೀರಿ ಇಹರಯ್ಯ ಇತರ ಜನರುಮತಿಗೆಟ್ಟು ಮನಸೋತು ಅನ್ಯ ಪುರುಷರ ಕೂಡಿಗತಿಗೆಟ್ಟು ಹೋಗುವರು ಮೂರು ತೊರೆದು 9 ಹರಿಹರರ ಪೂಜೆಗಳು ಹಗರಣಗಳಾದವುಉರಿ ಮಾರಿ ಚಾಮುಂಡಿ ಶಕ್ತಿಗಳಿಗೆಕುರಿ ಕೋಣ ನೈವೇದ್ಯ ಧೂಪದೀಪಗಳಿಂದಪರಮ ಭಕ್ತಿಯ ಸಲಿಸಿ ಪೂಜಿಸುವರಯ್ಯ10 ನಡೆವ ಕಾರ್ಯಗಳೆಲ್ಲ ನುಡಿಯಲೆನ್ನಳವಲ್ಲಒಡೆಯ ನೀನೇ ಬಲ್ಲೆ ಕಲಿಯುಗದ ಮಹಿಮೆತಡವ ಮಾಡಲಿ ಬೇಡ ತಾಳಲಾರದು ಲೋಕಮೃಡನ ವೈರಿಯ ಪೆತ್ತ ಆದಿಕೇಶವನೆ11
--------------
ಕನಕದಾಸ
ಮೊಚ್ಚೆ ಮೊಚ್ಚೆಲಿ ಹೊಡೆಯಿರಿ ಇವನ | ನೆಚ್ಚಿದೆತನುವಿದನೆಂಬುವನ || ಹುಚ್ಚ ನಾಯಿಯೋಲ್‍ಎಚ್ಚರವಿಲ್ಲದೆ | ಅರ್ಚಕ ಜನರನು ಬೊಗಳುವನ ಪ ಪರ ಉಪಕಾರಿಲ್ಲದ | ಮಾನುಷನಾಗಿಬಾಳುವನ || ತಾ ಅಜ್ಞಾನ ಮಾರ್ಗದಿ ನಡೆದು |ಜ್ಞಾನವ ಪರರಿಗೆ ಹೇಳುವನ 1 ಸತಿಸುತರತಿಶಯ ಹಿತವರು ಎನುತಲಿ | ಸತತವು ಅವರೊಳುಮರಗುವನ | ಮಿತಿಯಿಲ್ಲದೆ ಧನಧಾನ್ಯವ ಬೇಡುತ |ಕ್ಷಿತಿಯ ಮೇಲೆ ತಿರುಗುವನ2 ಕರುಣವ ಪಡೆಯದೆ ಭವತಾರಕನ | ನರ ತನುಗಳನುಸ್ತುತಿಸುವನ | ಪರಿಪರಿ ಸಂಸಾರದ ವಿಷಯದಲಿ |ನಿರುತದಿ ಮನವನು ಮಥಿಸುವನ 3
--------------
ಭಾವತರಕರು
ಹರಿಯ ಪಟ್ಟದರಾಣಿ ನಿಮ್ಮ ಸಿರಿಚರಣಕ್ಕೆ ನಾ ಶರಣೆಂಬೆಧರಣಿ ಒರೆಸಮ್ಮ ದುರಿತಘಮ್ಮ ಹರಿಸುದಮ್ಮ ಪ. ಧನಧಾನ್ಯವಿತ್ತು ಮತ್ರ್ಯರ ಪೊರೆವೆ ಎಂದೆಂದುಮನೆಗಿಂಬುಕೊಟ್ಟು ರಕ್ಷಿಸಿದೆದಿನದಿನದಿ ಚರಣವಿಟ್ಟರೆ ನೊಂದುಕೊಳೆ ನಿನ್ನಗುಣಕೆ ಭೂದೇವಿ ಸರಿಗಾಣೆ ಸಕಲಮುನಿ-ಜನರ ಪೊರೆವುದು ನಿಮ್ಮಾಣೆ ನಾರಾಯಣ ಬಂದುನಿನ್ನ ಸಲಹುವ ಪ್ರವೀಣೆ1 ನಿತ್ಯ ಸಮಸ್ತಪರ್ವತಭಾರವ ನೀ ತಾಳ್ವೆಉತ್ತಮ ತ್ರಿವಿಕ್ರಮನ ರಥೋತ್ಸವವೆ ಮೊದಲಾದಪವಿತ್ರಾಂಕುರಾರ್ಪಣಕೆ ನೀ ಬಂದು ವರಿಯಸುತ್ತಿನ ಪವಳಿಯೊಳಗೆ ನಿಂದು ನಮಗೆಮುಕ್ತಿ ಪದವೀವುದಕೆ ಬಾ ಕೃಪಾಸಿಂಧು 2 ಕೊಂಡ ಸಿರಿ ಹಯವದನಹರಿಯಕರ ಕರಿಭೇರುಂಡ ಸಿರಿಗೆ ಸರಿಯೆನಿಸಿನಿನ್ನನ್ನು ಪೊರೆಯುತಲಿಹನು ಕಂಡಾ3
--------------
ವಾದಿರಾಜ
ಶಾಶ್ವತ ಭಾಗವತರು ನಗರೆ ಮತಿಮಿಶ್ರರ ನೋಡಿ ಕೈ ಹೊಡೆದು ಪ.ಮಾಧವನಲ್ಲದೆ ಆ ದೈವೀದೈವಾದಿಗಳ ಹಿರಿಯರು ನಂಬರುಆದರವರ ಬಿಟ್ಟರೆ ಈ ಧನಧಾನ್ಯವುಹೋದರೆ ಕೆಟ್ಟೆವೆಂಬರ ನೋಡಿ 1ಕೃಷ್ಣನೆ ಸುಖದಾಯಕನಿರೆ ಸತಿಯಳುಹುಟ್ಟಿದ ಶಿಶುವಿನ ದೆಸೆಯಿಂದ ಎನ್ನಕಷ್ಟವೆ ಹೋಯಿತು ತುಷ್ಟಿಯೊಳಿಹೆನುಸೃಷ್ಟಿಗೆ ನಾ ಸುಖಿಯೆಂಬನ ನೋಡಿ 2ನಾರಾಯಣ ದಾತಾರನು ವಿಶ್ವಕೆತೋರುತಿರಲು ನರಧನಿಕರನುಆರಾಧಿಸಿ ನಾಭೂರಿಧನಾಢ್ಯನುಆರೆನಗೆದುರಿಲ್ಲೆಂಬನ ನೋಡಿ 3ಶ್ರೀ ಗುರುವರ ಸುಖಯೋಗಿಯ ಸಂತತಿಯೋಗಿಗಳಂಘ್ರಿಯ ನಂಬಿರದೆಆಗುರುಈ ಗುರುವೇ ಗತಿಯೆನುತಲಿಭೂಗುರುವಾಗಿಹ ರೋಗಿಯ ನೋಡಿ 4ಬೂಟಕತೋಟಕ ಭಕುತಿಗೆ ದ್ವಾದಶಗೂಟಬರೆಗೆ ಬುಧರೊಪ್ಪುವರೆ ಜಗನ್ನಾಟಕ ಪ್ರಸನ್ವೆಂಕಟೇಶನ ಗುಣಗಣಭಟರೆನಿಪ ವೈಷ್ಣವರಹ ಸಜ್ಜನ 5
--------------
ಪ್ರಸನ್ನವೆಂಕಟದಾಸರು