ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗತಿಯಾರೋ ಈ ಜಗದಿ ಮತಿಗೆಟ್ಟ ಮನುಜ ಕ್ಷಿತಿನಾಥ ಹೆಜ್ಜಾಜಿ ಕೇಶವನ ಹೊರತು ಪ ಸತಿಯ ಪರದೊಳು ನೋಡೆ ಪುಣ್ಯವರ್ಥಕೆ ಕತೆಗೆ ಸುತರಿರುವರೆಂದೆನಲು ಋಣಮುಗಿವೊವರೆಗೇ ಅತಿಶಯದ ಬಾಂಧವರು ಮಿತ್ರಮಂಡಲಿಯೆಲ್ಲ ಸ್ತುತಿಯುಕ್ತ ಮರ್ಯಾದೆ ಪಡೆಕೊಳ್ಳುವನಕ 1 ತಂದೆ ತಾಯಿಗಳೆಲ್ಲ ಮುಂದಳಿದು ಹೋಗುವರು ಬಂದ ತನ್ನಧಿಕಾರ ಬಲುಮೆಯಿರುವಾಗ ಬಂದಿದ್ದ ಧನಧಾನ್ಯಗಳು ನಿಲ್ಲದೋಡುವುವು ಬಂಧನದ ಕಾಲದೊಳಗೊಬ್ಬರೂ ಬರರೂ 2 ಕರಿ ಧ್ರುವನು ಪಾಂಚಾಲಿ ಪ್ರಹ್ಲಾದ ಪ್ರಭೃತಿಗಳ ಪರಮಪಾವನರೆನಿಸಿ ಪೊರೆದಂಥ ಹರಿಯ ಉರುತರದ ನೋಟದೊಳು ನಿರುತ ನೆನೆಯಲು ನಿನ್ನ ಕರಪಿಡಿದು ಕಾಯುವನು ಸುಂದರಶ್ಯಾಮ 3
--------------
ಶಾಮಶರ್ಮರು
ಚಿಂತೆಯಿಲ್ಲದ ನರನು ಧರೆಯೊಳಗಿಹನೇ ಅಂತರಂಗದಿ ನಮ್ಮ ರಂಗನಿಲ್ಲದಿರೆ ಪ ಅಂತರಂಗದಿ ಶುದ್ಧಿ ಇಲ್ಲದಿರೆ ರಂಗಯ್ಯ ಎಂತು ನೀನಿಹೆಯಯ್ಯ ಮಾನಸದಿ ಸ್ವಾಮಿ ಅ.ಪ ಧನಧಾನ್ಯಗಳ ಚಿಂತೆ ಕನಕದೊಡವೆಯ ಚಿಂತೆ ತನುಜ ತನುಜೆಯರನ್ನು ಪಡೆವ ಚಿಂತೆ ಅನಿಶ ಯೌವ್ವನವಾಂತು ಕನಸು ನನಸುಗಳಲ್ಲಿ ವನಿತೆಯರನೊಡಗೂಡಿ ಭೋಗಿಸುವ ಚಿಂತೆ 1 ಉಡಿಗೆ ತೊಡಿಗೆಯ ಚಿಂತೆ ಉಡುವೆನೆಂಬಾ ಚಿಂತೆ ಒಡಲ ಪೋಷಿಪ ಚಿಂತೆ ಕಡಲಲೆಗಳಂತೆ ಪಿಡಿದೆನ್ನ ಬಾಧಿಪುವು ಬಿಡಿಸೆಲ್ಲ ಚಿಂತೆಗಳ ಕೊಡು ನಿನ್ನ ಸೇವೆಯನು ಮಾಂಗಿರಿಯರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾಕೊಲ್ಲ ಯಾಕೊಲ್ಲ ನಲ್ಲೆ ಸಂಪದ ಇವ ಯಾಕೊಲ್ಲ ಯಾಕೊಲ್ಲ ಪ ಅಲ್ಲಬೆಲ್ಲವನೊಲ್ಲ ನಲ್ಲೆಯಾದರವೊಲ್ಲ ಒಲ್ಲನ್ಯಾಕವ್ವ ನಲ್ಲ ಇಲ್ಲದದಕೆ ಒಲ್ಲ ಅ.ಪ ಮೇಲು ಮಾಲು ಒಲ್ಲ ನೀಲದುಪ್ಪರಿಗೊಲ್ಲ ಶಾಲು ಸಕಲಾತೊಲ್ಲ ಶೀಲಮಂಚವನೊಲ್ಲ ಅಮೃತ ಉಂಡು ವೀಳ್ಯ ಮೆಲ್ಲಲು ಒಲ್ಲ ಬಾಲೆ ಯಾಕೊಲ್ಲ ಕೈಯೊಳಿಲ್ಲದದಕೆ ಒಲ್ಲ 1 ರತ್ನದುಂಗುರ ಒಲ್ಲ ಮುತ್ತಿನ್ಹಾರ ಒಲ್ಲ ಪುತ್ಥಳೀ ಚಿನ್ನ ಒಲ್ಲ ಕಸ್ತೂರಿಗಂಧ ಒಲ್ಲ ಉತ್ತಮ ಹಯವನ್ನು ಹತ್ತಿ ಮರೆಯ ಒಲ್ಲ ಮಿತ್ರೆ ಯಾತಕೊಲ್ಲ ಹತ್ತಿರಿಲ್ಲದದಕೊಲ್ಲ2 ಸತಿಯ ಸುತರನೊಲ್ಲ ಅತಿಭಾಗ್ಯವನೊಲ್ಲ ಕ್ಷಿತಿ ಅಧಿಕಾರನೊಲ್ಲ ಛತ್ರ ಚಾಮರನೊಲ್ಲ ಸತತ ಸೌಭಾಗ್ಯನೊಲ್ಲ ಮತಿಮಾನ್ಯವನೊಲ್ಲ ಮತಿಯುತೆ ಯಾತಕೊಲ್ಲ ಗತಿಯಿಲ್ಲದದಕೊಲ್ಲ 3 ಭೋಗಭಾಗ್ಯ ಒಲ್ಲ ರಾಗರಚನೆಯೊಲ್ಲ ಭೋಗದಾಸೆಗೆ ತಲೆದೂಗಿ ಒಲಿಯ ಒಲ್ಲ ತೂಗುಮಂಚವೇರಿ ತೂಗಿಸಿಕೊಳ್ಳಲೊಲ್ಲ ಸುಗುಣೆ ಯಾಕೊಲ್ಲ ಕೈಸಾಗದದಕೆ ಒಲ್ಲ 4 ಜಾಣತನದಿ ಧನಧಾನ್ಯಗಳಿಸಲೊಲ್ಲ ಜಾಣ ಜನರ ಕೂಡಿ ಮಾನ ಪಡೆಯಲೊಲ್ಲ ಜಾಣೆ ಏನಾಶ್ಚರ್ಯ ಏನು ಯಾಕೆ ಒಲ್ಲ ಪ್ರಾಣೇಶ ಶ್ರೀರಾಮ ತ್ರಾಣಕೊಡದದಕೊಲ್ಲ 5
--------------
ರಾಮದಾಸರು