ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸ ನಾನೆಂಬೇ ಗುರು ಭಕುತರಾ ಪ ಗುರುವೇ ಜನಕ ಘನ ಗುರುವೇ ಜನನಿಯ | ಗುರುವೇ ಗೆಳೆಯ ನಿಜ ಗುರುವೇ ಆತ್ಮನು | ಗುರುವೇ ಬಂಧುವು ಗುರುವೇ ಇಷ್ಟನು | ಗುರುವೇ ಗತಿಮತಿ ಗುರುವೆಂದವರಾ 1 ಗುರುವೇ ಚತುರ್ಮುಖ ಗುರು ಕಮಲಾಂಬಕ | ಗುರುವೇ ಸದಾಶಿವ ಗುರುವೇ ಸಂತರು | ಗುರುವೇ ಸುರಭಿಯ ಗುರು ಚಿಂತಾಮಣಿ | ಗುರು ಧನದ್ರವ್ಯನು ಗುರುವೆಂದವರಾ 2 ಗುರು ವಚನವೇ ಶೃತಿ ಗುರುದಯ ಮುಕ್ತಿಯು | ಗುರು ಗೃಹ ಕ್ಷೇತ್ರವು ಗುರು ನೋಟ ಪರಸವು | ಗುರು ಸ್ಮರಣೆಯೇ ಜಪ ಗುರು ಮಹಿಪತಿ ಪ್ರಭು | ಗುರು ಭಕ್ತಿಯೇ ತಪ ಗುರುವೆಂದವರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀನೆ ಸಕಲವೆನ್ನ ಸ್ವಾಮಿ ಶ್ರೀ ಹರಿಯೆ ದೀನ ದಯಾಳು ನೀನೆವೆ ನಿಜಧೊರಿಯೆ ಧ್ರುವ ತಂದೆ ತಾಯಿಯು ನೀನೆ ಬಂಧುಬಳಗ ನೀನೆ ಹೊಂದಿಕಿ ಹೊಲಬು ನೀ ಎನ್ನ ನೀನೆ ಎಂದೆಂದು ಸಲಹುವಾನಂದ ಮೂರುತಿ ನೀನೆ ಕುಂದ ನೋಡದಿಹ್ಯ ಮಂದರಧರ ನೀನೆ 1 ಕುಲದೈವವು ನೀನೆ ಮೂಲಪುರಷ ನೀನೆ ಒಲಿವ ಭಾಗ್ಯದ ಫಲಶ್ರುತಿಯು ನೀನೆ ಸಾಲವಳಿಯು ನೀನೆ ಹಲವು ಭೂಷಣ ನೀನೆ ಕುಲಕೋಟಿ ಬಳಗಾದ ಭಕ್ತವತ್ಸಲ ನೀನೆ 2 ಧನದ್ರವ್ಯಾರ್ಜಿತ ನೀನೆ ಘನಸೌಖ್ಯಾಕರ ನೀನೆ ಅನುದಿನಲಿಗನುಕೂಲ ನೀನೆ ದೀನ ಮಹಿಪತಿಸ್ವಾಮಿ ಭಾನುಕೋಟಿ ತೇಜನೆ ಮನೋಹರ ಮಾಡುವ ಮಹಾಮಹಿಮ ನೀನೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾರವೆಂದು ನಂಬಬ್ಯಾಡವೋ ಸಂಸಾರ ಸಾರವೆಂದು ನಂಬಬ್ಯಾಡವೋ ಪ ಸಾರವೆಂದು ನಂಬದೇ ಸಂಸಾರ ಸುಖವೆಲ್ಲ ಅ ಕಂಸಾರಿ ಚರಣ ಸಾರಿರೋ ಅ.ಪ ಇಂದ್ರಜಾಲ ದೊಡ್ಡವಣ ಗಂಧರ್ವ ಪುರದ ಮಾಟಾ ಸಾಂದ್ರಜಲ ಪೂರಾ ಛಂದವಿದು ನೋಡಿರ್ಯೋ ಕನಸಿನಲಿ ಕೆಂಯ್ಯಾ ಬೆಳೆಯ ಘನವಕಂಡು ನೆಚ್ಚಿ ತನ್ನ ಮನಿಯೊಳಿಹ ಧಾನ್ಯವೆಲ್ಲಾ ಜಿನುಗು ಮಾಡಿದಂದದಿ 1 ತನುವುತನ್ನನಳಿದರೆ ತನು ಸಂಬಂಧಿಗಳಾರು ಕ್ಷಣಿಕವಾದಾ ಸತಿಸುತ ಧನದ್ರವ್ಯ ಕಾಣಿರ್ಯೋ ಮರ್ಕಟವು ಕೀಲುದೆಗೆದು ಪುಕ್ಕಟೆವೆಸಿಕ್ಕಿದಂತೆ ಅಕ್ಕರದ ಸುಖವೆಲ್ಲಾ ದುಃಖ ರೂಪ ಕಾಣಿರ್ಯೋ 2 ಕುತ್ತಿನ ಮಡಹು ತಾಪತ್ರಯ ತಾರುಮನೆ ಮೃತ್ಯುಬಾಯ ತುತ್ತುರೋಗ ಹುತ್ತವಿದು ಕಾಣಿರ್ಯೋ ಮರಹು ನೀಗಿ ಹರಿಯಭಕ್ತಿ ಬೆರೆದು ನಿತ್ಯರಾಗಿರೆಂದು ಗುರು ಮಹಿಪತಿ ಭೋದಗರೆದ ವಾಕ್ಯನೋಡಿರ್ಯೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿ ಹರಿ ಹರಿ ಹರಿ ಹರಿಯೆನಬೇಕು ಹರಿ ಸ್ಮರಣೆಯೋಳನುದಿನವಿರಬೇಕು ಧ್ರುವ ಹರಿಯೇ ಶ್ರೀ ಪರಬ್ರಹ್ಮೆನಬೇಕು ಹರಿ ಪರಂದೈವೆವೆಂದರಿಬೇಕು ಹರಿಯೇ ತಾ ಮನದೈವೆನಬೇಕು ಹರಿ ಋಷಿ ಮುನಿಕುಲಗೋತ್ರೆನಬೇಕು 1 ಹರಿಯೇ ತಾಯಿತಂದೆನಬೇಕು ಹರಿಯೇ ನಿಜ ಬಂಧುಬಳಗೆನಬೇಕು ಹರಿಯೇ ಆಪ್ತ ಮೈತ್ರೆನಬೇಕು ಹರಿಕುಲಕೋಟೀ ಬಳಗೆನಬೇಕು 2 ಹರಿಯೇ ಸಲಹುವ ದೊರೆಯನಬೇಕು ಹರಿ ಸುಖ ಸೌಖ್ಯದ ಸಿರಿಯೆನಬೇಕು ಹರಿ ನಾಮವೆ ಧನದ್ರವ್ಯೆನಬೇಕು ಹರಿಸ್ಮರಣೆಯು ಸಂಪದವೆನಬೇಕು 3 ಹರಿದಾಸರ ಸಂಗದಲಿರಬೇಕು ಹರಿಭಕ್ತರ ಅನುಸರಿಸಿರಬೇಕು ಹರಿಚರಣದಿ ರತಿಮನವಿಡಬೇಕು ಹರಿ ನಿಜರೂಪವ ನೋಡಲಿಬೇಕು 4 ಹರಿ ಮಹಿಮೆಯ ಕೊಂಡಾಡಲಿಬೇಕು ಹರಿಸ್ತುತಿಸ್ತವನ ಪಾಡಲಿಬೇಕು ಹರಿತಾರಕ ಪರಬ್ರಹ್ಮೆನಬೇಕು ಹರಿ ಸರುವೋತ್ತಮ ಸ್ವಾಮೆನಬೇಕು 5 ಹರಿಯೇ ಸಕಲ ತಾ ಧರ್ಮನಬೇಕು ಹರಿ ಸರ್ವಮಯ ಪುಣ್ಯಕ್ಷೇತ್ರೆನಬೇಕು ಹರಿಯೇ ಇಹಪರ ಪೂರ್ಣೆನಬೇಕು ಹರಿ ಸದೋದಿತ ಸಹಕಾರೆನಬೇಕು 6 ಹರಿ ಬಾಹ್ಯಾಂತರೇಕೋಮಯವೆನಬೇಕು ಹರಿ ಸಕಲವು ವ್ಯಾಪಕವೆನಬೇಕು ಹರಿಯೇ ಶ್ರೀ ಪರಮಾತ್ಮೆನಬೇಕು ಹರಿ ಮಹಿಪತಿ ಸದ್ಗತಿಯೆನಬೇಕು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು