ನೂರೆಂಟು ನೆನೆದು ಫಲವೇನು ಈರೇಳು ಜಗದೊಡೆಯಹರಿಯನೊಮ್ಮೆ ನೆನೆ ಮನವೆ ಪ.
ಧನದಾಸೆಗಳಲದಿರು ಭವದುಃಖ ಬಳಲದಿರುಜನಾರ್ದನನ ಮರೆಯದಿರು ಈ ತನುವ ಪೊರೆಯದಿರುಅನಘಜನರೊಡನಾಡು ದಿನದಿನ ಶುಭವಕೂಡುಇನಿತು ಜನಮವೆ ಸಾಕು ಇನ್ನು ಮುಕುತಿಯೆ ಬೇಕು 1
ಸಾಕು ದುರ್ಜನÀರಾಟ ಸಾಕು ಸತಿಯರ ಬೇಟಸಾಕು ಸವಿಯನ್ನದೂಟ ಸಾಕು ಘನಕೂಟಸಾಕು ದೇಶಕೆವೋಟ ಸಾಕು ಸಲೆ ಭವನೋಟಸಾಕದೆಲ್ಲ ಖಳಕೂಟ ಸಾಕುಮನೆ[ಮಠ] 2
ಕೇಳು ಹರಿಮಹಿಮೆಯನು ಪೇಳು ಹರಿನಾಮವನುಬಾಳು ಬಂದಷ್ಟರಿಂದ ತಾಳು ಹಸಿತೃಷೆಗಳಶ್ರೀಲಲನೆಯಾಳ್ದ ಹಯವದನ ಸಿರಿನರಹರಿಯಆಳುತನವನು ಬೇಡು ಕೀಳು ಬುದ್ಧಿಯ ದೂಡು 3