ನರ ಹರಿನಾಮವ ನೀ ನೆನೆದರೆ|
ಧರಿಯೊಳು ಸಾಲದೇ ಇಹಪರ ದೋರದೆ|
ಬರದೇ ಸಾಯಾಸ ಬಡುವರೇ ಪ
ಆದಿ ಯುಗಂಗಳಲಿ ತಾಪಸರು|
ಸಾದರ ಬಹುದಿನದಿಂದಾ|
ಸಾಧಿಸುವಗತಿ ಕೊಡುವ ನೊಂದೆ ಕ್ಷಣದಿ|
ಶ್ರೀಧರ ತಾ ದಯದಿಂದಾ1
ಸಂತರ ಸಂಗದಿ ಶ್ರವಣವ ಮಾಡಿ|
ಆಂತರ್ಭಾವನೆ ಬಲಿಸೀ|
ಭ್ರಾಂತ ನೀನಾಗದೆ ಅನ್ಯ ಸಾಧನದಲಿ|
ಸಂತತ ಕೀರ್ತನೆ ಬೆರೆಸೀ2
ಸಾವಿರಕೊಂದೆ ಈ ನುಡಿ ನಿಜವೆಂದು|
ಸಾವಧವನಾದವ ಮನುಜಾ|
ಭಾವಿಸು ಗುರುಮಹಿಪತಿ ಪ್ರಭು|ನುಡಿಸಿದ|
ಆವನಂಬವನೇ ದನುಜಾ3