ಪಲ್ಲಕ್ಕಿ ಸೇವೆಯವಧಾನ ಆಳಪಲ್ಲಕ್ಕಿಯಲಿ ಮಂಡಿಪುದು ಶಿವ ನಿಧಾನ ಪ
ಮದನ ಕೈಗಳ ಸುಭುಜ-ವಲಯದೊಳ್ತಳದ ಪೂರುಷರ ಸರಪಂಸೆಗಳತೊಳಪಗಜಪಕ್ಷಿಯಗ್ರಗಳಾ ದೇವಲಲನೆಯರ ಚಾಮರದ ಕರದ ಚಲನೆಗಳಾ 1
ವಂದಿಮಾಗಧರೆಲ್ಲ ಕರವೆತ್ತಿ ಪೊಗಳುತಿರೆದಾಂಧಣಧಣಾ ಎಂದು ಮೊಳಗೆ ಮಂಗಳವಾದ್ಯಚಂದ್ರಸೂರ್ಯರು ಜಗಜ್ಯೋತಿಯನುಪಿಡಿದಿರಲು ಗಂಧರ್ವತತಿ ಪಾಡುತಿರಲುಮುಂದೆ ರಂಭಾದಿ ಗಣಿಕೆಯರು ನರ್ತಿಸಲು ದೇವೇಂದ್ರ ಮುಕ್ತಾಛತ್ರಮಂ ಪಿಡಿದಿರಲು ಧನದಕುಂದಣದ ಪಾದುಕೆಯ ಪಿಡಿದಿರಲುವಾಯು ನಲವಿಂದ ಸೀಗುರಿಯ ವೀಜಿಸಲುಸುರರು ಮುಂದೆ ಜಯಜಯವೆಂದು ಓಲೈಸುತಿರಲು 2
ಸುರರು ಹೂಮಳೆಗರೆಯೆ ಸುರದುಂದುಭಿಯು ಮೊಳಗೆಪರಮಋಷಿವರರು ವೇದಂಗಳನು ಪಠಿಸೆ ತುಂ-ಬುರನಾರದರು ವೀಣೆಯನು ಬಾಜಿಸಲು ಗಣನಿ-ಕರ ಖಡ್ಗಶರವ ಪಿಡಿದಿರಲುಸರಸಿಜೋದ್ಭವನು ನಿಮ್ಮುನ್ನತಿಯನರುಹುತಿರೆಸುರರಾಜಮಂತ್ರಿ ಸಮಯವ ಸೂಚಿಸುತಿರಲುವರಕೆಳದಿಪುರವಾಸ ರಾಮೇಶ ಜಯವೆಂದುಹರಿ ಹಸ್ತಲಾಘವನು ಕೊಡಲು ಗೌರಿಹರುಷದಿಂ ಮುಂಬಿನೊಳು ರಂಜಿಸುತ್ತಿರಲು 3