ಆಧಾರ ನೀನೆ ಶ್ರೀಹರಿ ಕಾಯೊ ದೊರೆ ಪ
ಚಾರು ಚರಿತ ಮೂರುಲೋಕಕಾಧಾರ ನೀನೇ ಅ.ಪ
ಸ್ವಾರಸ್ಯನೋಡಿ ನಿರಾಶೆಯಿಂದ ದೂರಾಗುವರು 1
ಧನಜನವು ಮನವು ಇಲ್ಲದವರೆಲ್ಲಾವನಜಾಕ್ಷ ನಿನ್ನ
ನೆನಪು ಮಾಡದೆ ತೃಣಕೂ ಬಾರರು 2
ಜಾಗುಮಾಡದೆ ಬೇಗಾ ಬಾರಯ್ಯ 3
ಚನ್ನಕೇಶವ ಮನ್ನಿಸೊದೇವ ನಿನ್ನವನಿವ 4
ಪೊರೆಯುವನೀನಲ ಶರಣಜನರ ಪಾಲಕರುಣಾಲವಾಲ ಗುರುರಾಮ ವಿಠಲ ಸಿರಿಲೋಲ 5