ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹ್ಯಾಗೆ ಕಾಂಬೆ ನಿನ್ನ ಪಾದವ ಶ್ರೀನಿವಾಸ ಯೋಗಿ ಗಮ್ಯ ರೂಪ ಮಾಧವಾ ರಾಗ ರೋಗ ಸಾಗರಸ್ತನಾಗಿ ಮುಳುಗಿ ಬಾಯ ಬಿಡುವೆ ನಾಗರಾಜಗೊಲಿದ ತೆರದಿ ಬೇಗಲೊದಗಿ ಬಂದು ಕಾಯೊ ಪ. ಮನಸು ಎನ್ನ ವಶಕೆ ಬಾರದೆ ಭಕ್ತಿ ಸಾ- ಧನಗಳೆನಗೆ ಸೇರಿ ಬಾಹದೆ ನೆನಸಿಕೊಳುವ ಕಾರ್ಯ ದೊರೆಯದೆ ಸರ್ವಕಾಲ ತನುವ ಕೆಡಿಸಿ ವ್ಯರ್ಥಮಾಡಿದೆ ಕನಲಿ ಕೂಗುತಿರುವ ಶಿಶುವ ಜನನಿ ಕರದೊಳೆತ್ತುವಂತೆ ಮೂರ್ತಿ ದೋರೊ 1 ಕಲಿಯ ಬಾಧೆಯಿಂದ ನೊಂದೆನು ಮಲಿನ ಮೋಹದೊಳಗೆ ನಿಂದೆನು ತ್ಯಾಜ್ಯವಾದ ಫಲಗಳೆಲ್ಲ ತಂದು ತಿಂದೆನು ಗಾಳಿಗೆ ಸಿಲುಕಿದೆಲೆಯ ತೆರದಿ ಹೊರಲುಗಾಣೆನೀ ದೇಹ ಪಾದ ನೆಳಲ ಬಯಸಿ ಬೇಡಿಕೊಳುವೆ 2 ಗಣನೆಯಿಲ್ಲವಾದ ಮರಗಳು ಇರಲು ಪುರು ತನುವಿನಂತೆ ಮುಖ್ಯವಾವದು ಅನುಭವಾತ್ಮ ಸುಖವನೀವದು ಆದರೇನು ಕನಸಿನಂತೆ ಕಾತಿರುವುದು ಪಾದ ವನಜಯುಗವನಿತ್ತು ಎನ್ನ ಮನದೊಳದಯವಾಗು ಮಾರಜನಕ ಮೂಡಲದ್ರಿವಾಸ3
--------------
ತುಪಾಕಿ ವೆಂಕಟರಮಣಾಚಾರ್ಯ