ನಿನಗಿನಿತು ಮಮಕಾರವಿರಲೆನಗೆ ಭಯವೇನು ಚಿನುಮಯನೆ ಧನ್ಯ ನಾನು ಪಜನಕ ನೀನೆನಗಾದೆ ತನುಜ ನಾ ನಿನಗಾದೆ ಘನಮಹಿಮ ಕಾಮಧೇನು ನೀನು ಅ.ಪಜನ್ಮಕೋಟಿಗಳಲ್ಲಿ ಪುಣ್ಯಕರ್ಮಗಳನ್ನು ಮುನ್ನ ಮಾಡಿಸಿದೆ ನೀನುಮುನ್ನಿನಾ ದೇಹಗಳು ಭಿನ್ನವಾಗಲು ಕರ್ಮವಿನ್ನುಳಿವ ಬಗೆಯದೇನುಚಿನ್ಮಯನೆ ತನುಕರಣ ಭಿನ್ನವಾದರು ಸಾಕ್ಷಿ ನಿನ್ನೊಳಿಂಬಿಟ್ಟೆಯವನುಸನ್ನುತನೆ ಬಾಲಕನಿಗುಣ್ಣ ಕಲಿಸುವ ತೆರದಿ ನಿನ್ನನಿತ್ತುದೇನೆಂಬೆನು ನಾನು 1ದುಷ್ಟಸಂಗವ ಬಿಡಿಸಿ ದುರ್ಬುದ್ದಿಯನು ಕೆಡಿಸಿ ಶಿಷ್ಟರೊಳು ತಂದು ನಿಲಿಸಿಕಷ್ಟಸಾಧನಗಳನು ಮುಟ್ಟಲೀಸದೆ ಸುಲಭ ನಿಷ್ಠೆಯಲಿ ಚಿತ್ತವಿರಿಸಿಹುಟ್ಟುಹೊಂದುಗಳನ್ನು ಕೊಟ್ಟು ಮೋಹಿಸುತಿರುವ ಪುಟ್ಟ ಫಲಗಳ ತೇಲಿಸಿಮುಟ್ಟಿ ನಿನ್ನಯ ಪದವನಿಟ್ಟು ಹೃದಯಾಂಬುಜದಲಿಷ್ಟಮೋಕ್ಷವ ತೋರಿಸಿ ನಿಲಿಸಿ 2ವಿದ್ಯವಿಸ್ತರವಾದರದ್ದುವದು ಗರ್ವದಲಿ ಬುದ್ಧಿ ನಿಲ್ಲದು ನಿನ್ನಲಿಇದ್ದು ವೃದ್ಧರ ಪಥದಿ ಹೊದ್ದಿ ಶುದ್ಧತ್ವವನು ಶ್ರದ್ಧೆ ಸೇರದು ನಿನ್ನಲಿಉದ್ದುರುಟುತನದಿಂದ ಬಿದ್ದು ವಾದದ ಮಡುಹವದ್ದು ಸುಕೃತವ ಕಾಲಲಿಇದ್ದ ನಿಜಸ್ಥಿತಿುವಗೆ ಸಿದ್ಧವಾಗದುಯೆಂದು ನಿರ್ಧರಿಸಿ ನೀನೆ ದಯದಿ ಇಲ್ಲಿ 3ಅನಿಮಿತ್ತ ಬಂಧು ನೀನೆಂಬುದನು ಫಲುಗುಣನು ಮನದೊಳೆಣಿಸಿದುದಿಲ್ಲವೆಅಣುಮಾತ್ರದುಪಕಾರ ಜನರಿಂದ ನಿನಗುಂಟೆ ಮನಕೆ ದೂರ ನೀನಲ್ಲವೆವನಜಭವ ದಿಕ್ಪಾಲ ಮನುಗಳೈಶ್ವರ್ಯಗಳು ನಿನಗೆ ಗಣನೆಗೆ ಬರುವವೆಇನಿತು ಬ್ರಹ್ಮಾಂಡಗಳ ನೆನದು ನಿರ್ಮಿಸಿ ಬಳಿಕ ಕ್ಷಣದೊಳಳಿಸುವದಿಲ್ಲವೆ ನಿಜವೆ 4ನಿನ್ನ ಭಜಿಸುವ ಭಾವವಿನ್ನುಂಟೆ ಜಡಮತಿಗೆ ಅನ್ಯವಿಷಯದಿ ಮೋಹಿಸೆತನ್ನ ಮರೆದತಿದುಃಖದುನ್ನ ತದ ಸಂಸಾರ ವೆನ್ನದೆನ್ನುತ ದುಃಖಿಸೆನಿನ್ನ ನೆನಯದೆ ಬಹಳ ಜನ್ಮವೇಗದ ನದಿಯಲುನ್ನಿಸುವ ಕರ್ಮ ಹೊದಿಸೆಭಿನ್ನ ಬುದ್ಧಿಯಲೊಂದಿ ತನ್ನ ತಾನರಿಯದಿರೆ ನಿನ್ನಿಂದ ಮುಕ್ತನೆನಿಸೆ ನಿಲಿಸೆ 5ಚಲಿಸದಂದದಿ ಮನವ ನಿಲಿಸಿ ನಿನ್ನೊಳು ಬಾಹ್ಯವಳಿವ ಬಗೆುಲ್ಲವಲ್ಲನಳಿನನಾಭನೆ ನೀನು ಸುಲಭನೇ ಯೋಗಿಗಳು ಬಳಲುವರು ಕಾಣರಲ್ಲನಿಲುವೆ ಮನದಲಿ ನೀನೆ ಸಲಹೆಂದು ಭಜಿಸಿದರೆ ಗೆಲರೆ ಸಂಸೃತಿಯನೆಲ್ಲತಿಳುಹಿ ಸುಲಭದ ದಾರಿಯೊಳಗೆನ್ನ ನೀನಿರಲು ಬಳಲುವಿಕೆುಲ್ಲವಲ್ಲಾ ಲಲ್ಲಾ 6ಬಿನುಗು ಭೋಗವನುಂಡು ಜುಣುಗಿ ಮತ್ತದರಲ್ಲಿ ಮನವೆರಗಿ ಮುಳುಗುತಿಹುದುತನುವಿನಭಿಮಾನದಲಿ ನೆನಹು ತಗ್ಗದು ಮತ್ತೆ ಕನಲಿ ಮುರಿದೇಳುತಿಹುದುಅನುವರಿಯದಂಧತಮದಲಿ ತಾನು ನೆರೆಹೊಕ್ಕು ಘನದುಃಖಬಡುತಲಿಹುದುಇನಿತವಸ್ಥೆಯಲಿರುವ ಮನಕೆ ಸಿಕ್ಕಿರಲೆನ್ನ ದಿನಕರನೆ ಕೈವಿಡಿವುದು ಸೆಳೆದು 7ಧ್ಯಾನ ಧಾರಣೆುಂದ ನಿನ್ನ ಮೂರ್ತಿಯ ನಿತ್ಯ ಮಾನಸದಿ ನಿಲಿಸಬೇಕುಧ್ಯಾನಾಂಗ ನಿಯಮಗಳನಭ್ಯಾಸವಂ ಮಾಡಿ ತಾನು ತಾನಾಗಬೇಕುಏನೊಂದ ಕಂಡರೂ ನಾಮರೂಪವ ಬಿಟ್ಟು ನೀನೆಂದು ನಿಲ್ಲಬೇಕುಏನೆಂಬೆನಿವನೆಲ್ಲ ನೀನೆ ಸಾಧಿಸಿಕೊಟ್ಟು ದೀನನನು ಸಲಹಬೇಕು ಸಾಕು 8ಪರಮ ಕರುಣಾನಿಧಿಯೆ ಪರಿಪೂರ್ಣ ಪರಮೇಶ ಪರಮಸಂವಿದ್ರೂಪನೇಶರಣಜನಸುರಧೇನು ದುರಿತಭೂಧರಕುಲಿಶ ಕರಿವರನ ರಕ್ಷಿಸಿದನೇಮರೆಯೊಕ್ಕೆ ನಿನ್ನಡಿಯ ಮರವೆಯನು ಪರಿಹರಿಸು ಅರಿವಿನೊಳು ಪೊಗಿಸು ನೀನೆತಿರುಪತಿಯ ನೆಲೆವಾಸ ವರದ ವೆಂಕಟರಮಣ ಅರವಿಂದದಳನೇತ್ರನೆ ಅಜನೆ 9ಓಂ ಜಲಕ್ರೀಡಾಸಮಾಸಕ್ತಗೋಪೀವಸ್ತ್ರಾಪಹಾರ ಕಾಯ ನಮಃ