ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೆ ಕೋಮಲ ಗಾತ್ರೆ ಕಂಜಜಮಾತೆ ಪ ಸುರರು ನಲಿಯುತ ಶಿರವ ಬಾಗಿ ಕರವ ಮುಗಿಯಲು ಪರಮ ಹರುಷದಿ ವರವ ಕೊಡುತಿಹ ಹರಿಯ ಮಡದಿಯೆ ಅ.ಪ. ಕ್ಷೀರವಾರಿಧಿ ತನಯೆ ನಿನ್ನಯ ದೇಹ ಬೀರುತಿದೆ ವಿದ್ಯುಛ್ಛವಿಯೆ ಶ್ರೀ ಹರಿಜಾಯೆ ವರ ಸುದರ್ಶನ ಶಂಖಹಸ್ತದಿ ಮೆರೆಯುತಿರೆ ಭಕುತರನು ಸಲಹಲು ಕರವೀರಪುರ ನಿಲಯದಿ ನೆಲಸಿ ವರದಭಯ ಹಸ್ತವ ತೋರುತಿರ್ಪೆ 1 ಮನಸಿಜಕೋಟಿ ಸುರೂಪಿಣಿ ಮೃದುಮಧುರ ವಾಣಿ ಧನಕನಕಾದಿಗಳಭಿಮಾನಿ ಕೈವಲ್ಯದಾಯಿನಿ ವನಜಸಂಭವೆ ನಿನ್ನ ಒಂದರೆ- ಕ್ಷಣವು ಬಿಡದಲೆ ತನ್ನ ಉರದೊಳು ದನುಜಮರ್ಧನ ಧರಿಸಿಕೊಂಡು ತನುವು ಮನವನು ನಿನಗೆ ತೆತ್ತಿಹ 2 ರಂಗೇಶವಿಠಲನ ರಾಣಿ ಪಂಕಜಪಾಣಿ ಡಿಂಗರೀಕರ ಪೊರೆವ ಕರುಣಿ ಕಾಳಾಹಿವೇಣಿ ಮಂಗಳಾಂಗಿಯೆ ಖೂಳ ಕುಜನರ ಸಂಗಬಿಡಿಸುತ ತವ ಪದ ಸರೋ ಜಂಗಳಲಿ ನಾ ನಲಿದು ವಿಹರಿಪಭೃಂಗನಾಗುವ ಪರಿಯ ತೋರೆ 3
--------------
ರಂಗೇಶವಿಠಲದಾಸರು
ನೀರಜಾಕ್ಷ ನಿನ್ನೂರಿಗೆ ಪೋಗುವ ದಾರಿಯ ತೋರಯ್ಯ ಪ ದಾರಿಯ ಕಾಣದೆ ಅ.ಪ ಜನ್ಮಾಂತರ ಕೃತ ಕರ್ಮಗಳೆಂಬುವ ಹೆಮ್ಮರಗಳು ಬೆಳೆದು ಧರ್ಮನಿರೋಧ ವಿಕರ್ಮದ ಬಳ್ಳಿಯು ಬಿಮ್ಮನೆ ಬಿಗಿವಡೆದು ಕಂಟಕ ವೆಮ್ಮನು ಕಾಲಿಡಲಮ್ಮಗೊಡವು ಹರಿ1 ದಾರಿಯೊಳಡಸಿಹುದು ರಾರು ಮಂದಿ ಮುಳಿದು ಸಾರಿ ಸಾರಿ ಬಾಯಾರಿಸುತಿರ್ಪವು 2 ಯನು ದಾಂಟುವೊಡರಿದು ಧನಕನಕಾದಿಗಳೆನಿಪ ಪಿಶಾಚಗಳನವರತವು ಬಿಡವು ತನು ಸಂಬಂಧದ ಜನಗಳು ದುರ್ಮೃಗ ವನು ಪೋಲುತ ನಮ್ಮನು ಬಾಧಿಸುತಿರುವರು 3 ಕ್ಷುದ್ರವಿಷಯಗಳುಛಿದ್ರವಹುಡುಕುವ ವಧ್ರುವದೇಹದೊಳು ಕದ್ರುಸುತರವೊಲುಪದ್ರವ ಗೈವ ಭದ್ರದ ಭೀತಿಗಳೂ ಪದ್ರವ ಜರೆಯೆಂಬುದ್ರಿಕ್ತಾಂಗನೆ 4 ಸುರನರವರರೊಳು ಶರಣೋಪಾಯವರ ವರದವಿಠಲ ನಿಜ ಚರಣವ ನಂಬಿದೆ 5
--------------
ವೆಂಕಟವರದಾರ್ಯರು
ನೀರಜಾಕ್ಷನಿನ್ನೂರಿಗೆ ಪೋಗುವ ದಾರಿಯ ತೋರಯ್ಯ ಪ ತೊಳಲುವೆ ದಾರಿಯ ಕಾಣದೆ ಅ.ಪ. ಜನ್ಮಾಂತರಕೃತ ಕರ್ಮಗಳೆಂಬುವ ಹೆಮ್ಮರಗಳು ಬೆಳೆದು ಧರ್ಮನಿರೋಧವಿ ಕರ್ಮದ ಬಳ್ಳಿಯು ಬಿಂಮನೆ ಬಿಗಿವಡೆದು ಲಮ್ಮಗೊಡವುಹರಿ 1 ಮೀರಿಬರಲುಘನ ಚೋರರು ಕಾದಿಹರಾರುಮಂದಿ ಮುಳಿದು ಸಾರಿ ಬಾಯಾರಿಸುತಿರ್ಪವು 2 ದಾಂಟುವೊಡರಿದು ಧನಕನಕಾದಿಗಳೆನಿಪ ಪಿಶಾಚಗಳನವರತವು ಬಿಡವು ಪೋಲುತ ನಮ್ಮನು ಬಾಧಿಸುತಿರುವರು3 ಕ್ಷುದ್ರವಿಷಯಗಳು ಛಿದ್ರವಹುಡುಕುವ ವಧ್ರುಗದೇಹದೊಳು? ಕದ್ರುಸುತರವೋಲುಪದ್ರವಗೈವವಭದ್ರದ ಭೀತಿಗಳೂ ಜರೆಯೆಂಬುದ್ರಿಕ್ತಾಂಗನೆ4 ನರಿಗಳ ಪರಿಯಲಿ ನರಳುವರೆಲ್ಲರು ನರಕಗಳನುಭವಿಸಿ ವರದ ವಿಠಲನಿಜ ಚರಣವೆ ನಂಬಿದೆ 5
--------------
ಸರಗೂರು ವೆಂಕಟವರದಾರ್ಯರು
ಸರಸ್ವತಿ ನಲಿಯೆ ನೀ ಜಿಹ್ವೆಯಲಿ ಚತುರಾನನ ಪ್ರಿಯ ರಾಣಿ ನಾನಾ ಧನಕನಕಾದಿ ವಿಭವಗಳು ಹಿರಿದುಕ್ಕುತಲಿರಲು ಪ ನೀನೊಲಿಯದಿರಲು ಮಾನವನಿಗೆ ಸ ನ್ಮಾನವೆಂತು ಬರುವುದು ಜಗದೊಳಗೆ ಅ.ಪ ಕರ ಧೃತ ವೀಣಾಪಾಣಿ ಉನ್ನತ ಮಹಿಮ ಪ್ರಸನ್ನ ಹರಿಗೆ ಸತಿ 1
--------------
ವಿದ್ಯಾಪ್ರಸನ್ನತೀರ್ಥರು