ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನವ ಗೆದ್ದವರುಂಟೆ ಜನರೊಳಗೆ ಶ್ರೀನಿವಾಸ ಪ ಕನಸಿಲಾದರು ಬಿಡದು ಕನಕದಾಶೆಯು ಈಶ ಅ.ಪ. ಹೆಂಡತಿಯ ಬಿಡಬಹುದು ಮಂಡೆಬೋಳಿಸಬಹುದು ಕಂಡ ಕಂಡವರೀಗೆ ದಂಡ ಬೀಳಲಿ ಬಹುದು ಪುಂಡರೀಕಾಕ್ಷನಿಗೆ ತೊಂಡನಾಗಲಿ ಬಹುದು ದುಡ್ಡು ಕಾಸುಗಳನ್ನು ನೀಡಲಾಗದು ಮನಸು 1 ನಾಮ ಹಾಕಲಿಬಹುದು ನೇಮಮಾಡಲಿಬಹುದು ಹೋಮಮಾಡುತಲಿ ಬಹು ಕರ್ಮಿಷ್ಟನೆನಿಸಬಹುದು ನಾಮ ಪಾಡಲಿಬಹುದು ಧರ್ಮಪೇಳಲಿ ಬಹುದು ಹೇಮದಾಶೆಯು ಬಿಡದೂ ಶ್ರೀ ಮನೋಹರನೇ 2 ಜಪಮಾಲೆಧರಿಸುತಲಿ ಉಪವಾಸ ಮಾಡಬಹುದು ತಾಪಸನು ಎನಿಸುತಲಿ ಪುರಾಣಗಳ ಪೇಳಲಿಬಹುದು ಶ್ರೀಪತಿಯ ಸೇವಿಸುತ ಜಪತಪವ ನಡೆಸಬಹುದು ರೂಪಾಯಿ ಮಮತೆ ತಾ ಮುಪ್ಪಿನಲು ತೊಲಗದೈಯ್ಯ 3 ಯಾತ್ರೆಮಾಡಲಿಬಹುದು ಸ್ತೋತ್ರ ಘಟ್ಯಾಗಿ ಹೇಳಬಹುದು ನೀತಿ ಪೇಳಲಿಬಹುದು ಪೂತನೆನಿಸಬಹುದು ಮಾತು ಮಾತಿಗೆವೇದ ಎತ್ತಿ ಪೇಳಲಿಬಹುದು ಪ್ರೀತಿ ತಪ್ಪದೂ ಯೆಂದೂ ಆಸ್ತಿ ಧನಕನಕದಲಿ 4 ಲಜ್ಜೆಬಿಡುತಲಿ ಬೇಗ ಗೆಜ್ಜೆಕಟ್ಟಲಿ ಬಹುದು ಸಜ್ಜನನುಯೆಂದೆನಿಸಿ ಮೂರ್ಜಗದಿ ಮೆರೆಯಬಹುದು ಮಜ್ಜನಕ ಜಯತೀರ್ಥ ವಾಯು ಹೃದಯದಲಿರ್ಪಜ ಗಜ್ಜನಕ “ಶ್ರೀಕೃಷ್ಣವಿಠಲ”ನೆ ನೀವಲಿವ ತನಕ 5
--------------
ಕೃಷ್ಣವಿಠಲದಾಸರು