(2) ಆಂಡಾಳ್ ಸ್ತುತಿ
ಆಂಡಾಳ್ ದೇವಿ ಶರಣೆಂಬೆ
ಶ್ರೀಗೋದಾದೇವಿ ಪೊರೆಯೆಂಬೆ ಪ
ಮುಡಿದು ಕೊಟ್ಟ ನಾಯಕಿ ತಾಯೆ
ರಂಗನಾಥನ ಪರಮಪ್ರಿಯೆ
ಮುಡಿಪುಹೊತ್ತು ಸೇವಿಪೆವಮ್ಮ
ಶರಣಾಗತಿಯನ್ನ ಅ.ಪ
ಅಂದುಗೋಪಿಯರು ಕೃಷ್ಣನ ಸೇರಲು
ಚಂದದಿಮಾಡಿದ ಕಾತ್ಯಾಯನಿವ್ರತವ
ತಂದೆಯಮತದಿ ಹೊಂದಿಸೇವಿಸಿದೆ
ಒಂದು ತಿಂಗಳ ತಿರುಪ್ಪಾವೈಯಲಿ 1
ದಿನಕೊಂದು ಪಾಶುರ ಕಟ್ಟಿಪಾಡುತ
ದಿನದಿನ ಸಖಿಯರೊಳು ಮಾರ್ಗಳಿಯಲಿ
ದಿನ ಮೂಡುವಮೊದಲೆ ತಣ್ಣೀರ್ಮೀಯುತ
ದಿನಪ ಕೃಷ್ಣನ ಕಲೆತ ಕನ್ಯಾಮಣಿಯೆ 2
ಧನುರ್ಮಾಸವನು ಧರಿಸಿ ಭಜಿಸುವೆವು
ಧನಂಜಯನ ತೋರೆ ಸಿರಿಬಾಯ್ನುಡಿಯೆ
ಧನಕನಕಚಂದನೂ ಬಲ್ಲೆವು ತಾಯೆ
ತನು ಕರಗಿಸು ಜಾಜಿಪುರೀಶನಡಿಯಲ್ಲಿ 3