ಆಕಳ ಕಾಯುವ ಗೊಲ್ಲನ ಪರಿಯಲಿ
ತಾ ಕೋಲನು ಪಿಡಿಯನು ಹರಿಯು ಪ
ಸಾಕಲು ಬಯಸುವ ಜನರಿಗೆ ದೇವನು
ತಾ ಕರುಣಿಸುವನು ಸನ್ಮತಿಯ ಅ.ಪ
ಸಂಸಾರದ ಸಾಗರವನು ದಾಟಲು
ಹಿಂಸೆಗಳೆಲ್ಲವ ಸಹಿಸುವರ
ಸಂಶಯ ಭ್ರಾಂತಿಯ ತೊಲಗಿಸಿ ಪೊರೆಯಲು
ಕಂಸಾರಿಯು ತಾ ಕೊಡುವ ವಿವೇಕವÀ 1
ನೀರಿನ ಮೇಲಿನ ಗುಳ್ಳೆಗಳಂದದಿ
ಭವ ಭೋಗಗಳು
ಯಾರಲಿ ಕರಣವ ತೋರ ಬಯಸುವನೊ
ದೂರ ಮಾಡುವನು ಧನಕನಕಗಳ 2
ಶಾಂತಿಯೇ ಸೌಖ್ಯಕೆ ಕಾಣವೆಂಬುವ
ಅಂತರಂಗವನು ಗಮನಿಸಿರಿ
ಶಾಂತಿಗೆ ಸಾಧನ ಜ್ಞಾನವ ಪಡೆಯಲು
ಸಂತತ ಸನ್ಮತಿ ಕೊಡಲಿ ಪ್ರಸನ್ನನು 3