ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧುರಧೀರನಿವನೆಂದು ನೆರೆವೆರೆಯಲೈತಂದು ಮರುಳಾದೆ ನಾನಿಂದು ಮುಂದೆ ನಿಂದು ನಾರ್ವಟ್ಟೆಯುಟ್ಟಿರುವ ಅರಣ್ಯದೊಳಗಲೆವ ನಾರುಬೇರನೆ ಮೆಲುವ ಅರರೆ ಚಲುವ ಜನಪನಂದನನೆನಿಸಿ ಮುನಿಜನರ ತಾವೆರಸಿ ವನವನದಿ ಸಂಚರಿಸುತಿರುವ ಸಹಿಸಿ ಲಲನೆಯನು ಕರೆತರಲು ಪಲವು ಕಪಿಗಳನೆರೆದು ಜಲಧಿಯನು ಬಂಧಿಸಿದನಲಘುಬಲನೆ ಇನಿತು ಸಾಹಸವುಳ್ಳ ಸುಗುಣನಿಧಿಗೆ ಮನವೊಲಿದು ನಾ ಬಂದು ಮೋಸಪೋಗೆ ಮಿಣುಕಿ ಫಲವೇನಿನ್ನು ಮಿಂಚಿದುದಕೆ ಧಣಿಯೆನಗೆ ಶೇಷಾದ್ರಿವರನೆ ಸಾಕೆ
--------------
ನಂಜನಗೂಡು ತಿರುಮಲಾಂಬಾ