ನನಗ್ಯಾಕೆ ಬಡತನವು ಸನಕಾದಿನುತ
ನಿನ್ನ ಬೆನ್ನು ಬಲವಿರಲು ಪ
ಪುಂಡಗಂಡನು ಇರಲು ಹೆಂಡತಿಯ ಭೋಗ ಭೂ
ಮಂಡಲದೊಳಗಿನ್ನುತ್ವವ್ಯಾಕೋ
ಭಂಡರಕ್ಕಸಹರ ಪುಂಡಮಂಡಲತ್ರಯದೋ
ಮಂಡೆ ಮೇಲಿರಲು 1
ಜನರಿಗೆ ಕಾಣದ ಧನವ ಕೂಡಿಟ್ಟು
ಅನುದಿನ ಹಿಗ್ಗುವವರಿಗೆ ಬಡತನವುಂಟೇನೊ
ಧಣಿಯಾಗಿ ಮೂಲೋಕವನು ಉದರದಿಟ್ಟಾಳ್ವ
ಪಾದ ಮನಮಂದಿರದಿರಲು 2
ಕಲ್ಪಿತಸಂಸಾರ ಅಲ್ಪೆಂದು ನಿಜವಾಗಿ
ಕಲ್ಪಿಸಿಕೊಂಡವರು ಅಲ್ಪರೇನಯ್ಯ
ಕಲ್ಪತರು ಶ್ರೀರಾಮನ ಕಲ್ಪಾಂತರರಿಬಳಿ
ಕಲ್ಪರಲ್ಲಿಗೆ ಹೋಗಿ ಅಲ್ಪರಿವರೇನೊ 3