ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾವವನೆ ಕರ್ಮಜಯ ಬಳಿಕಂ ಸಾವವನೆ ಉಣ್ಣುವರು ಜನರು ಭಾವವನೆ ಅರಿದಿರಿಸು ಜೀವರ ನಿನ್ನಂಘ್ರಿಯಲಿ ಪ ದಾಸವೃಂದವು ತೋಷದಿಂದಲೆ ಪೂಶರಯ್ಯನ ವಿಡಿದು ಘನ ಸಂ- ಸುಕೃತ ಫಲವಿಹುದೋ ಶ್ರೀಶನಲಿ ನಿಜದಾಸ ಭಕುತಿಯ ಮೀಸಲಿರಿಸೀ ಮನವ ಮೋಹದೆ ಆಶೆ ಗಳಿಸದೆ ಶ್ರೀಹರಿಯ ನಿಜವಾಸ ಕೈಯ್ಯುವರು 1 ಮೃಗಜಲಕೆ ನೀರೆಂದು ಭಾವಿಸಿ ಪೊಗಲೆಳಿಸುವೆರಳೆಗಳ ಪರಿಯಲಿ ಮೃಗನಯನೇರತಿ ಚೆಲ್ವಿಕೆಗೆ ಜಗವೆಳಸಿ ಬಳಲುವದು ಮಿಗಿಲಾಗಿದ ವಿಷಯಲನಲದಿ ಧಗಧಗಿಸಿ ಜನಗಳು ಪೋಪರಲ್ಲದೆ ಖಗಪತೀ ವಾಹನನ ನೆನೆಯರು ಜಗವ ಪಾವನನು 2 ನೀರಜಾಸನ ಪಿತನೆ ಅಕ್ಷಯ ಶ್ರೀ ರಮಾವಲ್ಲಭನೆ ತವ ಪರಿ ವಾರವಲ್ಲದೆ ಸತಿಸುತರು ಮೇಣ್ ದೇಹ ಬಾಂಧವರು ಸಾರಸುಮತಿಯನಿತ್ತೆಮಗೆ ಹರೆ ಸೇರಿಸೆಮ್ಮನು ನಿನ್ನ ಅಡಿಯಲಿ ಧೀರ ಶ್ರೀ ನರಸಿಂಹವಿಠ್ಠಲ ಪಾರಗಾಣಿಪುದು 3
--------------
ನರಸಿಂಹವಿಠಲರು
ಶ್ರೀ ರಮಣ ಸರ್ವೇಶ ತ್ವಚ್ಚರ- ಣಾರವಿಂದವ ನಂಬಿರುವನಲಿ ಘೋರ ಭಾವವ ತಾಳ್ದ ಹೂಣನ ದೂರ ಓಡಿಸುವ ಭಾರ ನಿನ್ನದು ಪರಮ ಕರುಣಾ ವಾರುಧಿಯೆ ನೀನಲ್ಲದೆನಗೆ- ಸಾರಥಿ 1 ಸುಗುಣ ಸಜ್ಜನ ಶಿರೋಮಣಿ ಮಗುವು ಪ್ರಹ್ಲಾದನ ಪದಾಂಬುಜ ಯುಗವ ನೆನೆವುದನರಿತು ತತ್ಪಿತನೆಂದು ರೋಷದಲಿ ನೆಗೆದು ಬಂಡೆಯ ಝಳಪಿಸುತ ಬರೆ ಧಗಧಗಿಸಿ ಕಂಬದಲಿ ತೋರುತ ಬಗೆದಿ ದೈತ್ಯನ ಕರುಳ ಜಯ ಜಯ ವಿಜಯಸಾರಥಿ 2 ದೋಷಿ ದೈತ್ಯಾವೇಷದಿಂದಲಿ ವಾಸವಾದಿ ಸಮಸ್ತ ದಿವಿಜರ ಘಾಸಿಗೊಳಿಸಿದ ದಶಶಿರನ ತದ್ವಂಶಜರ ಸಹಿತ ನಾಶಗೈದು ನಿರಾಪರಾಧಿ ವಿ- ಭೀಷಣಗೆ ಸಾಮ್ರಾಜ್ಯವಿತ್ತ ಪ- ರೇಶ ಸೀತಾಕಾಂತ ಜಯ ಜಯ ವಿಜಯಸಾರಥಿ 3 ಪೂತನಾ ಬಕ ಶಕಟ ಧೇನುಕ ಪಾತಕಿ ಶಾರಿಷ್ಠ ಕೇಶಿಕಿ- ರಾತ ಕಂಸಾಂಬಷ್ಟ ಮುಷ್ಟಿಕ ಮಲ್ಲ ಚಾಣೂರ ಕಾತರದ ಶಿಶುಪಾಲ ಮುಖ್ಯರ ಘಾತಿಸಿದ ಗರುಡಧ್ವಜನೆ ಪುರು- ಹೂತ ಸುತನನು ಕಾಯ್ದೆ ಜಯ ಜಯ ವಿಜಯಸಾರಥಿ 4 ಅತ್ಯಧಿಕ ಕೋಪದಲಿ ಪ್ರಜ್ವಲಿ ಕಮಲ ಜೌಸ್ತ್ರವ ನುತ್ತರೆಯ ಗರ್ಭದಲಿ ಬಿಡದೆ ಸುತ್ತಿಕೊಂಡಿರಲು ಸತ್ಯಭಾಮಾಕಾಂತ ಕರುಣದಿ ತೆತ್ತಿಯನು ಕಾಪಾಡಿದಖಿಳೋ- ತ್ಪತ್ತಿರಕ್ಷಣಕಾರಿ ಜಯ ಜಯ ವಿಜಯಸಾರಥಿ 5 ಇರುವೆ ಮೊದಲು ಬ್ರಹ್ಮಾಂತರಾಗಿಹ ಸುರನರಾಸುರ ಮುಖ ಪ್ರಪಂಚ ದೊ- ಳಿರುವೆ ಸರ್ವೇಂದ್ರ್ರಿಯ ನಿಯಾಮಕ ಸರಿವ ಕೃತ್ಯವನು ಅರಿತು ಮಾಡಿಸಿ ನೋಡಿ ನಗುತಿಹ ಪರಮ ಮಂಗಳ ಚರಿತ ನೀ ಯನ- ಗಿರಲು ಭಯವ್ಯಾಕಿನ್ನು ಜಯ ಜಯ ವಿಜಯಸಾರಥಿ 6 ಆದರೀ ತೆರದಿಂದ ನಿನ್ನಯ ಪಾದ ಪಂಕಜಗಳನು ಪೊಗಳಿದ- ರಾದುದೊಂದಾಶ್ಚರ್ಯ ನೋಡಲಿ ಸುಜನರಾದವರು ಮೋದ ಭೋದಿ ದಯಾಬ್ಧಿ ವೆಂಕಟ ಭೂಧರೇಶನೆ ಸತತ ನಮ್ಮನು ಕಾದಿರುವೆ ಕಮಲೇಶ ಜಯ ಜಯ ವಿಜಯಸಾರಥಿ7
--------------
ತುಪಾಕಿ ವೆಂಕಟರಮಣಾಚಾರ್ಯ
ಮರತೆ ಮರತೆ ಬಗಳ ಮಹಾಮಂತ್ರವಸುರತರುವಿಗೆ ತರುವಾದ ಬ್ರಹ್ಮಾಸ್ತ್ರವಪಭುಗುಭುಗಿಸಿ ಭುವನಗಳನ್ನೆಲ್ಲಾ ಪಾಲಿಪ ಮಂತ್ರಧಗಧಗಿಸಿ ಝಗ ಝಗಿಸಿ ನಿಗಿ ನಿಗಿವ ಮಂತ್ರಜಗದೊಡೆಯರಾದವರಿಗೆ ಒಡೆಯಳ ಮಂತ್ರತಗತಗನೆ ಶತಕೋಟಿರವಿಸೂಸುವ ಮಂತ್ರ1ಸರಸಿಜಾಸನ ತಾನೆ ಜಪಿಸುತಿಹ ಮಂತ್ರಹರಿಹರರುಅನವರತಸ್ಮರಿಸುವಾ ಮಂತ್ರಸುರಪ ಇಂದ್ರಾಗ್ನಿಗಳಿಗಭಯ ನೀಡಿಹ ಮಂತ್ರದುರುಳರಿಪು ವನಗಳಿಗೆದಾವಾಗ್ನಿಮಂತ್ರ2ಹರಿಯ ಸಮಭಾಗ್ಯ ಕೋ ಎಂದು ಕೊಡುವ ಮಂತ್ರಹರಗೆ ಸರಿಯಾದ ಸತ್ವವನೀವ ಮಂತ್ರಗುರುಚಿದಾನಂದ ತಾನಾದ ಬಗಳ ಮಹಾ ಮಂತ್ರಪರಬ್ರಹ್ಮ ಸತ್ಯ ಬ್ರಹ್ಮಾಸ್ತ್ರ ಮಂತ್ರ3
--------------
ಚಿದಾನಂದ ಅವಧೂತರು