ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸಾ ಪ ನಗೆಮೊಗದ ನತಜನ ಬಂಧು ಬಾಬಾರೆನ್ನ ಬಿ - ಟ್ಟಗಲದಲೆ ಮನ ಮಂದಿರದೊಳಿರು ಮುನ್ನಾದರು ಸುಪ್ರಸನ್ನ ಮುಂದೆ ಗತಿ ಏನಯ್ಯ ಮುಕುತರ ಹಿಂದುಳಿದವನಲ್ಲದಲೆ ತನು ಸಂ - ಬಂಧಿಗಳ ವಶನಾಗಿ ದುರ್ವಿಷ - ಯಾಂಧಕಾರದಿ ಮುಳುಗಿದೆನೊ ನಾ ಅ.ಪ. ಹಲವು ಜನ್ಮದ ನೋವಾ ನಾ ಹೇಳಿಕೊಳಲೇನೆಲವೊ ದೇವರ ದೇವಾ ನೀ - ನಲ್ಲದಲೆ ಭೂವಲಯದೊಳಿಗಿನ್ನಾವಾ ನಂಬಿದರ ಕಾವ ಸುಲಭರೊಳಗತಿ ಸುಲಭನೆಂಬುವ ಅಲವಬೋಧಮತಾನುಗರು ಎನ - ಗೊಲಿದು ಪೇಳಲು ಕೇಳಿ ನಿಶ್ಚಂ - ಚಲದಿ ನಿನ್ನನೆ ಧೇನಿಸುವೆ ನಾ ಕಲುಷ ಸಂಸ್ಕಾರಗಳ ವಶದಿಂ ಹೊಲಬುಗಾಣದೆ ಹರುಷಗುಂದುವೆ ಹೊಲೆ ಮನದ ಹರಿದಾಟ ತಪ್ಪಿಸಿ ನೆಲೆಗೆ ನಿಲ್ಲಿಸದಿರ್ದ ಬಳಿಕಿನ್ನೆಂದು 1 ಭಾರತೀಪತಿಪ್ರೀಯಾ ಎಂದೆಂದು ಭಕುತರ ಭಾರ ನಿನ್ನದೊ ಜೀಯಾ ಜಗವರಿಯೆ ಕರುಣಾ - ವಾರಿಧಿಯೆ ಪಿಡಿ ಕೈಯ್ಯಾ ಫಣಿರಾಜಶಯ್ಯಾ ತಾರಕನು ನೀನೆಂದು ತಿಳಿಯದ ಕಾರಣದಿ ಸುಖ ದುಃಖಮಯ ಸಂ - ಸಾರ ದುಸ್ತರ ಶರಧಿಯೊಳು ನಾ ಪಾರಗಾಣದೆ ಪರಿದು ಪೋಪೆನೊ ದೂರನೋಳ್ಪದು ಧರ್ಮವಲ್ಲವೊ ದ್ವಾರಕಾಪುರನಿಲಯ ಪರಮೋ - ದಾರ ತನುವೆಂದೆನ್ನ ಪಾಲಿಗೆ ಬಾರದಲ್ಲದೆ ಭವವಿಮೋಚನ 2 ವಿಕಸನಾರ್ಚಿತಪಾದ ವಿಶ್ವೇಶ ಜನ್ಮಾ - ದ್ಯಖಿಲ ಕಾರಣನಾದ ನಿರ್ದೋಷ ಸತ್ಯಾ - ಸುಖಗುಣಾರ್ಣವ ಶ್ರೀದವಿಠಲಪ್ರಸೀದ ಸಕಲ ಕ್ರಿಯ ಯೋಗಗಳು ತನು ಬಂ- ಧಕವು ನಿನಗೊಪ್ಪಿಸದಿರಲು ಎನೆ ನಿಖಿಳ ಜೀವರ ಭಿನ್ನ ನಿನ್ನಯ ಯುಕುತಿಗೆ ನಮೊ ಎಂಬೆನಲ್ಲದೆ ಯುಕುತ ಯುಕ್ತಿಗಳೊಂದರಿಯದ - ರ್ಭಕನ ಬಿನ್ನಪ ಸಲಿಸಿ ನವವಿಧ ಭಕುತಿ ಭಾಗ್ಯವ ಕೊಟ್ಟು ತವ ಸೇ - ವಕರ ಸೇವಕನೆನಿಸದಿರ್ದೊಡೆ 3
--------------
ಶ್ರೀದವಿಠಲರು
ಶ್ರೀ ಪುರುಷೋತ್ತಮವಿಲಾಸ 62-2 ಆನಂದ e್ಞÁನಮಯ ಅಖಿಲ ಗುಣ ಪರಿಪೂರ್ಣ || ಅನಘ ಲಕ್ಷ್ಮೀರಮಣ ಶರಣು ಜಗದೀಶ ಪ ವನಜಾಸನಾದಿ ಸುರರಿಂದ ಆರಾಧಿತನೇ | ವನಜಜಾಂಡದಿ ಜಗಜ್ಜನ್ಮಾದಿಪತೇ ಅಪ ಅಮಿತ ಅನಂತ ಗುಣಕ್ರಿಯಾರೂಪ ಅನಂತ ಶೀರ್ಷಾನಂತ ಉರುಸುಗುಣಪೂರ್ಣ|| ಅನಂತಾಕ್ಷ ಸರ್ವಜ್ಞ ಸಾಕ್ಷಿ ಸರ್ವಾಧ್ಯಕ್ಷ || ಅನಂತಪಾದನು ಅನಂತರೂಪಸರ್ವಸ್ಥ 1 ಸಹಸ್ರಪಾತ್ ಸತ್ಯಂ ಸತ್‍ಸೃಷ್ಟಿ ಜೀವನದ ಸಹಸ್ರಾಕ್ಷe್ಞÁನಂ ಎರಡು ವಿಧe್ಞÁನ || ಸಹಸ್ರಶೀರ್ಷಾನಂತಂ ಆನಂದ ಆನಂದ ಮಹಾಮಹಿಮ ಪೂರ್ಣಗುಣ ಪುರುಷನೀಬ್ರಹ್ಮ 2 ನಾಕಭೂಪಾತಾಳ ಜಗದಂತರ್ಬಹಿವ್ರ್ಯಾಪ್ತ || ಭಕುತರ ಸಮೀಪಸ್ಥ ಇತರರಿಗೆ ದೂರ || ಏಕಾತ್ಮ ಪರಮಾತ್ಮ ಪರಮ ಪುರುಷವಿಷ್ಣೋ ನೀಕಾಲಗುಣ ದೇಶಾಪರಿಶ್ಚಿನ್ನ ಭೂಮನ್ 3 ಪ್ರಕೃತಿಶಚವ್ಯಕ್ತ - ಮಹದಾದಿ ತತ್ವಂಗಳಿಗೇ | ಆಕಾಶ ಮೊದಲಾದ ಭೂತ ಪಂಚಕಕ್ಕೆ || ಸುಖಮಯನೇ ನೀಸರ್ವೆ ಚೇತನಾ ಚೇತನಕೆ | ಏಕ ಆಶ್ರಯ ಅನಂತ ಶೀರ್ಷಾಕ್ಷಪಾದ 4 ಪರಮೇಶ ಅವಿಕಾರ ಸಮರ್ಥ ಉರು ತೈಜಸಚ್ಛಕ್ತಿ ರೂಪವಷಟ್ಕಾರ ಪ್ರಕ್ರತಿ ಸರ್ವದಿ ನೀನು ಸ್ವೇಚ್ಛೆಯಿಂ ತುಂಬಿರುವಿ | ಪ್ರಕೃತಿ ಸರ್ವವು ನಿನ್ನಧೀನವೋ ಸ್ವಾಮಿ 5 ದ್ಯುಭ್ವಾದಿ ಜಗತ್ತಿಗೆ ಆಧಾರಾಧಿಷ್ಠಿತನು ದುಭ್ವಾದಿಗಳವ್ಯಾಪ್ಯ ವ್ಯಾಪಕನು ನೀನು ಸರ್ವಸ್ಥನಾಗಿ ನೀ ಸರ್ವವಶಿಯಾದುದರಿಂ ಸರ್ವನೀನೇಂದೆನಿಸಿಕೊಂಬಿಯೋ ಸ್ವಾಮಿ 6 ಆಧಾರ ಆಧೇಯೆ ಅನಂತಾಲ್ಪಶಕ್ತಿಯು ಅಧಿಷ್ಠಾನಾಷ್ಟಿತ ವ್ಯಾಪ್ಯ ವ್ಯಾಪಕವು ಭೇದ ಈರೀತಿಯಲಿ ಸುಸ್ಪಷ್ಟವಾಗಿದೆಯು ಇದಂಸರ್ವಂ ಉಕ್ತಿ ನಿನ್ ಸ್ವಾಮಿತ್ವ ಬೋಧಕವು 7 ಅಧೀನ ನಿನ್ನಲ್ಲಿ ಸ್ವಾಮಿ ಸರ್ವವಶಿಸರ್ವ | ಓದುನವು ಕರ್ಮಫಲಭುಂಜಿಪ ಸಂಸಾರಿಗಳು ಅದರಂತೆ ಮುಕ್ತರಸ್ವಾಮಿ ಆಶ್ರಯನು 8 ಇವು ಮಾತ್ರವÉೀ ನಿನ್ನ ಮಹಿಮೆಗಳು ಪರಮಾತ್ಮ || ಸರ್ವ ಈ ಚೇತನಾಚೇತನ ಪ್ರಪಂಚವು ಸರ್ವೇಶ ನಿನ್ನಂಶ ಸಹೃದಯ ಕಿಂಚಿತ್ತು 9 ಒಡೆಯನಿನ್ನಮಿತ ಶಕ್ತಿಯೊದಂಶದಲೆ ಜಡಜಗತ್ ಇರುವಿಕೆ ವಿಕಾರವುಸರ್ವ || ಜಡ ಭಿನ್ನರಲಿ ನಿನ್ನ ಸಾದೃಶ್ಯ ಅತಿ ಸ್ವಲ್ಪ ಪಾದ ವೊಂದಂ ಶೃತ ಸುಪಾದನು 10 ಅಧೀನತ್ವದಿಂಜಗತ್ ಇದಂಸರ್ವಂ ಎಂದಂತೆ - ಪಾದೋಸ್ಯ ವಿಶ್ವದಲಿ ಭಿನ್ನಾಂಶಜೇಯ || ಭಿನ್ನಜೀವರು ನಿನ್ನ ಪಾದರಾಗಿತಿಹರೋ ಚಿತ್ಚೇತ್ಯಯಂತ 11 ಪೂರ್ಣಗುಣನಿಧಿ ಅನಘ ಜನ್ಮಾದಿಕರ್ತಅಜ ಆವಣ್ನಯೋನಿತ ಪ್ರಾಪ್ಯ ಮಧ್ವಸ್ಥ ಶರಣು || ವನಜಭವಪಿತ ಶ್ರೀಶ ಪ್ರಸನ್ನ ಶ್ರೀನಿವಾಸ ನಮೋ ಪರಮ ಪುರಷ 12
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವಿಷ್ಣು ತೀರ್ಥ ಅಣು ವಿಜಯ ಅರಣ್ಯಕಾಚಾರ್ಯ ಶ್ರೀವಿಷ್ಣು ತೀರ್ಥಾರ್ಯರ ಚರಣಸರಸೀರುಹದಿ ಶರಣಾದೆ ಸತತ ಹೊರ ಒಳಗೆ ಪ್ರಜ್ವಲಿಪ ಅನಘಗುಣ ಪರಿಪೂರ್ಣ ಸಿರಿವರ ಹರಿಕೃಪಾ ಪ್ರಸಾದವೊದಗಿಸುವ ಪ ಪಾದ ಸೇವಿಸಿದ ಫಲವಾಗಿ ಭಾಗೀರಥಿ ಬಾಳಾಚಾರ್ಯರಲಿ ಜನಿಸಿ ವೇಂಕಟರಾಮಾರ್ಯ ಐಜಿಯವರ ಸುಪವಿತ್ರ ಮುಖ ಪಂಕಜದಿಂದ ಕಲಿತರು ಸಚ್ಛಾಸ್ತ್ರ 1 ಜಯತೀರ್ಥ ನಾಮದಲಿ ಮೊದಲೆರಡು ಆಶ್ರಮ ನಿಯಮದಿ ಚರಿಸಿ ಈ ವೈರಾಗ್ಯ ನಿಧಿಯು ಸತ್ಯಸಂಧರಸುತ ಸತ್ಯವರ ತೀರ್ಥರಿಂ ತುರೀಯಾಶ್ರಮಕೊಂಡ ವಿಷ್ಣು ತೀರ್ಥಾರ್ಯ 2 ಏನು ಧನ್ಯರೋ ಸತ್ಯಧರ್ಮತೀರ್ಥರು ಮತ್ತು ಸೂರಿ ಈರ್ವರಿಗೆ ಅನಘಮಧ್ವಸ್ಥ ಶ್ರೀ ಹಂಸ ವೇದವ್ಯಾಸ ತಾನೇ ಸತ್ಯವರ ದ್ವಾರ ಉಪದೇಶ ಕೊಟ್ಟ 3 ಪೂರ್ವಾಶ್ರಮ ನಾಮ ಜಯತೀರ್ಥಾಂಕಿತದಲ್ಲಿ ತತ್ವಪ್ರಕಾಶಿಕ ಸುಧಾ ಟಿಪ್ಪಣಿಯ ಭಾಗವತ - ಸಾರೋ ದ್ಧಾರವ ಶೋಡಶಿ ಚತುರ್ದಶಿ ಬರೆದಿಹರು 4 ತತ್ವಬೋಧಕ ಸ್ತೋತ್ರ ಬಿನ್ನಹ ರೂಪವು ಆಧ್ಯಾತ್ಮ ರಸರಂಜಿನಿ ಅಮೃತಫÉೀಣ ಭಕ್ತಿಯಲಿ ಪಠಿಸಲು ಅಪರೋಕ್ಷ್ಯ ಪುರುಷಾರ್ಥ ಸಾಧನವಾಗಿಹುದನ್ನು ರಚಿಸಿಹರು ಇವರು 5 ಹದಿನಾರು ಪ್ರಕರಣ ಶೋಡಶಿ ಎಂಬುzರÀಲಿ ಹದಿನಾಲ್ಕು ಪ್ರಕರಣ ಚತುರ್ದಶಿಯಲ್ಲಿ ಬಂಧ ಮೋಕ್ಷಾಂತ ಶೋಡಶಿಯಲ್ಲಿಹುದು ಭಕ್ತಿ ಶುಚಿಯಲಿ ಪಠನೀಯ ರಹಸ್ಯವು 6 ಬಂಧಕವು ಬಂಧ ನಿವೃತ್ತಿಯು ಬಿಂಬ ಪ್ರತಿಬಿಂಬ ಭಾವವು, ಬಿಂಬಸಂಸ್ಥಾಪನವು ಅವಸ್ಥಾತ್ರಯ ನಿರ್ಮಾಣ ಆರನೆಯದು 7 ಪ್ರಾಣವ್ಯಾಪಾರವು ಭೋಜನ ಪ್ರಕರಣವು ಇಂದ್ರಿಯ ವ್ಯಾಪಾರವು ತತ್ವಕಾರ್ಯಹತ್ತು ತನು ಅಧಿಷ್ಠಾನ ರಥಾಧಿ ಪ್ರಕರಣವು ಹನ್ನೆರಡಲಿ ಬೋಧ್ಯ ಜಾಗೃತ್ ಪ್ರಕರಣವು 8 ಸ್ವಪ್ನವು ಸುಷುಪ್ತಿಯು ಗಮನಾಗಮನವು ಶುಭ ಮೋಕ್ಷ ಪ್ರಕರಣ ಷೋಡಶವು ಇನ್ನು ಚತುರ್ದಶಿಯಲಿ ಜೀವಹೋಮ ಮೊದಲಾಗಿ ರತ್ನಗಳು ಗುರು ಪ್ರಸಾದ ಲಾಭ ಪರ್ಯಂತ 9 ಜೀವಹೋಮ - ಉಪನಯನ ಸೂರ್ಯಗತಿ ಯಜ್ಞ ಪವಿತ್ರತಮ ವೇದಾಧ್ಯಯನ ಭಿಕ್ಷಾಟನ ವೈಶ್ವಾನರ ಪ್ರಿಯ ಭೋಜನ ಪಾಪಲೇಪ ಜೀವ ಪ್ರಯಾಣ ಮಾರ್ಗವು ನವಮ 10 ಹತ್ತನೆಯದು ಬ್ರಹ್ಮಯಜ್ಞಲಯ ಚಿಂತನಾಕ್ರಮ ಶುದ್ಧಯಜ್ಞ `ಸ್ವರೂಪಯಜ್ಞ' ಸುಲಭಪೂಜಾ ಹದಿನಾಲ್ಕಲಿ ಗುರುಪ್ರಾಸಾದ ಲಾಭದಲಿ ಆದಿತ್ಯಗ ಮಧು ಸುಖ ಪೂರ್ಣ ವಿಷಯ 11 ಯೋಗ್ಯ ಆಧಿಕಾರಿಗೆ ಮಾತ್ರ ಈಸೌ - ಭಾಗ್ಯಪ್ರದ e್ಞÁನ ಪುಷ್ಠಿಕರಣ ಯುಗುಳ ಮಾತ್ರೆಗಳನ್ನ ವಿನಿಯೋಗಿಸುವುದು ಅಯೋಗ್ಯರಿಗೆ ಸರ್ವಥಾ ಕೊಡಕೂಡದು 12 ಕೃತ ಕೃತ್ಯ ಧನ್ಯಮನದಿಂದಲಿ ಈ ಮಹಾನ್ ಐದಿಹರಿಪುರಲಯವ ಚಿಂತನೆಮಾಡಿ ಹದಿನೇಳ್ ನೂರಿಪ್ಪತ್ತೆಂಟು ಶಕ ಮಾಘ ತ್ರಯೋದಶಿ ಕೃಷ್ಣದಲಿ ಕೃಷ್ಣನ ಸೇರಿದರು 13 ಮತ್ತೊಂದು ಅಂಶದಿ ವೃಂದಾವನದಿಹರು ಭಕ್ತಿಯಿಂ ಸ್ಮರಿಸಿದರೆ ಬಂದು ಸಲಹುವರು ಮಾದನೂರು ಕ್ಷೇತ್ರಸ್ಥ ವೃಂದಾವನ ಸೇವೆ ಭಕ್ತಿಯಲಿ ಮಾಳ್ಪರು ದೇಶ ದೇಶ ಜನರು 14 ಬೃಹತೀಸಹಸ್ರ ಪ್ರಿಯ ಮಹಿದಾಸ ಜಗದೀಶ ಬ್ರಹ್ಮಪಿತ ಭಕ್ತಪಾಲಕ ಪರಮ ಹಂಸ `ಮಹಿಸಿರಿ' ಶ್ರೀ ಪ್ರಸನ್ನ ಶ್ರೀನಿವಾಸನ ಮಹಾಭಕ್ತಿ ಶ್ರೀ ವಿಷ್ಣು ತೀರ್ಥಾರ್ಯರೇ ಶರಣು 15 ಪ || ಸಂಪೂರ್ಣಂ||
--------------
ಪ್ರಸನ್ನ ಶ್ರೀನಿವಾಸದಾಸರು
ಹರಿಭಜನೆ ಮಾಡುವಗೆ ಅನಂತಫಲವೂ ಹರಿ ಭಜನೆ ಇಲ್ಲದವಗೆ ಅತಿಘೋರ ತಮವೂ ಪ ಭವರೋಗ ಸಂಚಿತವು ಪರಿ ಪರಿಯ ನರಕಾದಿ ಬಂಧಕವು ಬಿಡದು 1 ಆ ರಾಮನಂಘ್ರಿಗಳ ಅರ್ತಿಯಲಿ ಅರ್ಚಿಸುವರಿ ಗಾರಾಮವಾದಂಥ ಸುಖಸೌಖ್ಯವು ಹೇರಾಮ ಎನದವಗೆ ಅತಿ ದು:ಖದಾರಿದ್ರ್ಯ ತೋರುವುದು ಅನುಗಾಲ ತಗಲಿ ಬಿಡದವೆಯಿನ್ನು 2 ವಿತರಣಾದಿ ಶ್ರೀ ಹೆನ್ನೆವಿಠ್ಠಲನ ಹೃದಯದಲಿ ಸತತಧ್ಯಾನವು ಮಾಡುವ ಸಾಧು ಜನರಾ ಪತಿತ ಪಾವನನಾದ ಪರಮಾತ್ಮ ಪಾಲಿಸೆ ಗತಿಯು ತೋರುವ ಇನ್ನು ಕರುಣದಲಿ ಹರಿಯು 3
--------------
ಹೆನ್ನೆರಂಗದಾಸರು
ಶ್ರೀ ಪ್ರಸನ್ನ ಶ್ರೀನಿವಾಸದಾಸರ ಶ್ರೀಹರಿ ಪ್ರಾದುರ್ಭಾವಗಳುಪ್ರಸನ್ನ ಶ್ರೀ ಮತ್ಸ್ಯಾವತಾರ4ಲೀಲಾವತಾರನೇ ಪ್ರಳಯಾಬ್ದಿ ಸಂಚರನೇಮಾಲೋಲ ಸುಖಚಿತ್ ತನು ಮತ್ಸ್ಯರೂಪಬಾಲಾರ್ಕ ಕೋಟ್ಯಮಿತ ಜ್ಯೋತಿರ್ಮಯ ಸುಂದರನೇಕಾಲಗುಣದೇಶ ಅಪರಿಚ್ಛಿನ್ನ ಪೂರ್ಣ ಸುಗುಣಾರ್ಣವನೇ ಶರಣು ಪಪ್ರಳಯದಲಿ ಭೂರಾದಿ ಲೋಕಂಗಳುಮುಳಗಿರಲು ಹುಯಗ್ರೀವನಾಮ ದಾನವನುಸೆಳೆದು ವೇದಗಳ ತನ್ನೊಳ್ ಅಡಗಿಸಿದ್ದವನಸೀಳ್ದಿ ನೀ ಬಂದು ವೇದೋದ್ಧರನೇ ಮತ್ಸ್ಯ 1ಗೋವಿಪ್ರಸುರ ಸಾಧು ಜನರ ವೇದಂಗಳ-ಕಾವಸರ್ವೇಶ್ವರನೇ ಪುರುಷಾರ್ಥದಾತಸರ್ವರಿಗೂ ಸುಖವೀವುದು ನಿನ್ನ ಸುಚರಿತ್ರೆಶ್ರೀವರನೇ ಮತ್ಸ್ಯರೂಪಿಯೇ ಶರಣು ಶ್ರೀ ಕೃಷ್ಣ 2ಹಂಸ ಐರಾವತ ತಿತ್ತಿರಾ ಶುಕಗಳುಈ ಪಕ್ಷಿಗಳಲ್ಲಿ ತರತಮ ಉಂಟುಸುಸುಖ ಐಶ್ವರ್ಯೋನ್ನಾಹ ಅದರಂತೇವೇಈ ಸುನುಡಿಗಳ ಪಠನ ಮಾಳ್ಪ ಸುಜನರಿಗೆ 3ಗುರುರ್ಗುರ್ರೋಗುರುಮನುಶುಕಮಧ್ವಾಂತಸ್ಥಪರಮಾತ್ಮಹರಿವಿಷ್ಣೋ ಉದ್ದಾಮಸಾಮಅರದೂರಅನಂತೋರು ನಿಜಶಕ್ತಿ ಪರಿಪೂರ್ಣಉರು ಸುಗುಣ ನಿಧಿಯೇ ಶಫರಿರೂಪ ಮಾಂಪಾಹಿ 4ಸರ್ವೋತ್ತಮನು ನಾರಾಯಣನೇ ಎಂದರಿತುದ್ರವಿಡ ದೇಶಾಧಿಪನು ಸತ್ಯವ್ರತರಾಯಸುವಿವೇಕದಿ ನಿನ್ನ ಕುರಿತು ತಪವಚರಿಸಿದನುಭಾವಶುದ್ಧನು ಸಲೀಲಾಶನ ದೃಢವ್ರತನು5ವಿವಸ್ವಾನ್ ಮಗ ಶ್ರಾದ್ಧದೇವನು ಪ್ರಖ್ಯಾತವೈವಸ್ವತಮನುವೇ ಇಂದಿನ ಮನುವುಪೂರ್ವದಲಿ ಈತನೇ ಸತ್ಯವ್ರತ ಸಾಮ್ರಾಟ್0ಅವನಿಗೆ ನಮೋ ಎಂಬೆ ನಿನ್ನವನೆಂದು 6ರಾಜ ಋಷಿ ಈ ಮಹಾನ್ ಕೃತಮಾಲಾ ನದಿಯಲ್ಲಿನಿಜ ಭಕ್ತಿಯಿಂದ ಜಲತರ್ಪಣವ ಚರಿಸೆಅಂಜಲಿಉದಕದಲಿ ಮುದ್ದು ಮರಿ ಮೀನೊಂದುಸರಿಜ್ಜಲ ಸಹಿತದಿ ಬಂದದ್ದು ಕಂಡ 7ಅರಸ ಕರುಣದಲಿ ಅದನು ನದಿಯಲಿ ಬಿಡಲಿರೆಅರುಹಿತು ತನ್ನ ವೃತ್ತಾಂತವ ಆ ಮೀನುಪರಿಪರಿಯಾಗಿ ತನ್ನ ಸಜಾತೀಯರ ಭಯ ತನಗೆ ಎಂದುನೀರು ಪ್ರವಾಹದಲ್ಲಿ ತನ್ನ ಬಿಡಬೇಡವೆಂದು ಪ್ರಾರ್ಥಿಸಿತು ರಾಜನ್ನ 8ನಾರಾಯಣಾದಿ ಸುಮಂತ್ರಿತ ಅಭಿಯಂತ್ರಿತ ತನ್ನಸ್ಫುರತ್ ಕಲಶ ಕಮಂಡಲು ನೀರಲ್ಲಿ ಮೀನು ಮರಿ ಇಟ್ಟುಕೊಂಡುಆಶ್ರಮಕೆ ಕೃತ ಕೃತ್ಯ ಮನದಿ ರಾಜನು ಬಂದಮರುದಿನ ಉದಯದಲಿ ಕಂಡ ಆಶ್ಚರ್ಯವ 9ಕಮಂಡಲ ಕಲಶ ಪೂರಾವು ಏಕ ರಾತ್ರಿಯಲ್ಲೇವೇಆಮತ್ಸ್ಯಮರಿ ಬೆಳೆದಿದ್ದು ಆಶ್ಚರ್ಯ ಕಂಡಕಮಂಡಲು ಸಾಲದೇ ವಿಸ್ತಾರವಾದ ಸ್ಥಳನಿರ್ಮಾಣ ಮಾಡಿ ನೀರು ತುಂಬಿಸಿ ಅದರೊಳ್ ಮೀನನ್ನ ಬಿಟ್ಟ 10ಉದಕತುಂಬಿದ ಕುಂಟೆ ಸರೋವರವನ್ನುಮತ್ಸ್ಯವು ಪೂರ್ಣ ವ್ಯಾಪಿಸಿದ ಆಶ್ಚರ್ಯಅತಿಶಯ ಲೀಲಾ ವಿನೋದವ ಕಂಡ ರಾಜಉದಧಿಯಲಿ ಬಿಡಲು ನಿಶ್ಚಯಿಸಿ ಕ್ರಮಗೊಂಡ 11ಮಹೋದಧಿಯಲ್ಲಿರುವ ಮಕರಾದಿಗಳು ತನ್ನ ನುಂಗುವನೆಂದುಮಹಾರಾಜನಿಗೆ ಆ ಮೀನು ಹೇಳಿ ತಾನುಆದರೂ ರಾಜನು ಅಷ್ಟರಲ್ಲೇ ಉದಧಿಯೊಳು ಬಿಟ್ಟನುಮೀನನ್ನು ಆಗ ದೊಡ್ಡ ಆಶ್ಚರ್ಯವೊಂದನ್ನ ಕಂಡ ಆಮೀನು ಮತ್ತೂ ದೊಡ್ಡದಾಯಿತು 12ಶತಯೋಜನ ಮಹಾವೀರ್ಯ ಜಲಚರಗಳುಯಾವುದೂ ಕಂಡಿಲ್ಲ ಕೇಳಿಲ್ಲ ಜಗದಿಅತಿ ಅದ್ಭುತ ಮಹಾ ಮೀನರೂಪನು ಸಾಕ್ಷಾತ್ಉದಧಿಶಾಯಿ ಶ್ರೀಮನ್ನಾರಾಯಣ ನೀ ಎಂದ 13ಜೀವರುಗಳಿಗೆ ಅನುಗ್ರಹ ಮಾಡಲಿಕ್ಕೇವೇದೇವ ನೀ ಮತ್ಸ್ಯರೂಪ ಪ್ರಕಟಿಸಿರುವಿಕಾವಕಾರುಣಿಯೇ ಪುರುಷಶ್ರೇಷ್ಠ ಸರ್ವೋತ್ತಮನೇಸರ್ವದಾ ನಮೋ ಜಗಜ್ಜ£್ಮ್ಞಧಿಕರ್ತ14ಶ್ರವಣ ಸಂಸ್ತುತಿಸಿ ಮನನ ಧ್ಯಾನಾದಿಗಳು ಮಾಡಿಶ್ರೀವರನೇ ನಿನ್ನ ಮಹಾತ್ಮ್ಯಾ ಜ್ಞಾನಪೂರ್ವಕ ನಿನ್ನಲ್ಲಿ ಸುಸ್ನೇಹರತನಾದವಿವೇಕಿ ಪ್ರಪನ್ನರ ಸಲಹಿಗತಿಈವಿ15ಯಥಾರ್ಥ ಜ್ಞಾನವ ಭಕ್ತಿಮಾನ್ ರಾಜನು ಸ್ತುತಿಸಲುಮುದದಿಂದ ಇನ್ನೂನು ನಿನ್ನವೃತತಿಜೇಕ್ಷಣ ಜಗತ್ಪತಿಯೇ ನೀನು ಆಮತಿವಂತನಿಗೆ ಪೇಳಿದಿ ಅವತಾರಕಾರ್ಯ 16ಏಳುದಿನವಾಗಲು ಭೂರಾದಿ ಲೋಕಗಳುಪ್ರಳಯಜಲದಲ್ಲಿ ಮುಳುಗಿ ಹೋಗುವವುಒಳ್ಳೇ ಓಷಧಿ ಸರ್ವವೀರ್ಯತರ ಬೀಜ -ಗಳಸಪ್ತಋಷಿ ಸಹ ಕಾದಿರು ಎಂದಿ17ಕಾದುಕೊಂಡು ಇರುವಾಗ ವಿಶಾಲ ನೌಕವು ಒಂದುಶ್ರೀದ ನೀ ಕಳುಹಿಸೆ ಜಲದ ಮೇಲ್ ಬರುವದುಅದರಲಿ ಅರೋಹಿಸಬೇಕು ಬೀಜಗಳಸಪ್ತಋಷಿ ಸಹ ರಾಜ ಎಂದು ಬೋಧಿಸಿದಿ 18ಎಲ್ಲೆಲ್ಲೂ ಪ್ರಳಯಜಲತುಂಬಿತುಳಕಾಡುವುದುಲೋಲ್ಯಾಡುವುದು ನೌಕ ಗಾಳಿರಭಸದಲಿಅಲ್ಲಿ ಸಮೀಪಿಸುವ ಮತ್ಸ್ಯರೂಪನ ನಿನ್ನಹೊಳೆವ ಶೃಂಗದಿ ನಾವೆಯನು ಕಟ್ಟು ಎಂದಿ 19ನಾವೆಯನು ಬಂಧಿಸಲುರಜ್ಜುಸರ್ಪವು ಎಂದುಸುವ್ರತ ರಾಜನಿಗೆ ಉಪಾಯ ಪೇಳಿದಸರ್ವಗುಣ ಪರಿಪೂರ್ಣ ನಿರ್ದೋಷ ಪರಬ್ರಹ್ಮವಿಶ್ವವಿಷ್ಣೋ ಸೃಷ್ಟಾ ಪಾತಾ ರಮೇಶ20ಈ ರೀತಿ ಆ ಮಹಾನ್ ಸತ್ಯವ್ರತರಾಜನಿಗೆಹರಿನೀನು ಬೋಧಿಸಿ ಅಂತರ್ಧಾನವು ಆಗೇಆ ರಾಜಋಷಿ ತಾನು ಮತ್ಸ್ಯರೂಪ ಹೈಷಿಕೇಶಸಿರಿವರನೇ ನಿನ್ನನ್ನೇ ಧ್ಯಾನಿಸುತಲಿದ್ದ 21ಯುಕ್ತ ಕಾಲವು ಬಂತು ಉಕ್ಕಿತು ಸಮುದ್ರವುಸುತ್ತು ಮುತ್ತು ಎಲ್ಲೂ ಪೊಕ್ಕಿತು ಭೂಮಿಯಲಿಅತ್ತ ಇತ್ತ ಇಲ್ಲೂ ಸುತ್ತಿ ಸುಳಿವ ನೀರುಭೀತಿಕರ ನೆನೆಯಲಿಕೆ ನೋಡೆ ಮತ್ತೆಷ್ಟೋ 22ಚಂಡಮಾರುತ ಪ್ರಚಂಡ ಮೇಘವುಕರಿಸೊಂಡಲಂತೆ ಹನಿ ಕಂಡಿಲ್ಲ ಇಂಥಾ ಮಳೆಕಂಡು ನಾವೆಯ ರಾಜಕೊಂಡು ಬೀಜಗಳಕರಕೊಂಡು ಋಷಿಗಳ ಏರಿಕೊಂಡನು ಬೇಗ 23ಕೇಶವನೇ ನಿನ್ನ ಧ್ಯಾನಿಸಲು ಆಗಕೌಶೇಯ ಶೃಂಗಿ ಮಹಾಮತ್ಸ್ಯ ನೀ ಬರಲುಈಶ ನಿನ್ನಯ ಶೃಂಗಕ್ಕೆ ನೌಕವಕಟ್ಟಿಸಂಸ್ತುತಿಸಿದನು ಮಧುಸೂಧನನೇ ನಿನ್ನ 24ಶ್ರೀ ಭಾಗವತಾಷ್ಟಮ ತ್ರಯೋವಿಂಶತ್ ಅಧ್ಯಾಯಶುಭತಯವಿಜ್ಞಾನಬೋಧಕವು ಅದರಸೊಬಗರಿತು ಯೋಗ್ಯರು ಪಠಿಸೆ ಪ್ರೇರಿಸು ಸ್ವಾಮಿಸೌಭಾಗ್ಯಪ್ರದ ಶ್ರೀಶ ಮಾಂಪಾಹಿ 25ಏಕಶೃಂಗಧರ ಸ್ವರ್ಣ ಮತ್ಸ್ಯನಿಗೆ ಸರ್ಪದಿಂಲಕ್ಷ ಯೋಜನೆ ಮೇಲಿನ ವಿಸ್ತಾರದಿ ಬಂಧಿಸಿದಸತ್ಯವ್ರತ ರಾಜನು ಸಂತೋಷದಲಿ ಸ್ತುತಿಸಿದಅನಾದಿಅವಿದ್ಯಾಪೀಡಿತ ಜನ ಸಂರಕ್ಷನ್ನ26ಪರಮಹಂಸನ ಮೂಲ ಗುರೋ ಲಕ್ಷ್ಮೀಹಯವದನಮೇರು ಇತರಾ ದೇವಹೂತಿ - ಸುತ ಶರಣುಘೋರಸಂಸಾರ ಬಂಧಮೋಚಕಹರಿಯೇವರಸುಖಪ್ರದ ಸಂರಕ್ಷಕ ಮಾಂಪಾಹಿ27ಶಕ್ರಾದಿ ಜಗತ್ತಿಗೆಗುರುಗಂಗಾಧರನುಗಂಗಾಧರನಿಗೆಗುರುಪ್ರಾಣ ಪದ್ಮಜರುಪಂಕಜಾಸನ ಪ್ರಾಣರಿಗೆಗುರುರಮೇಶನು ಹರಿಯೇಆಗುರುಮೂಲಗುರು ಪರಮಗುರ್ರೋಗುರುವು28ನಿನ್ನ ಅನುಗ್ರಹ ಹೊಂದಿದರು ನೀ ಪರಮಗುರುಎಂದು ತಿಳಿದುಬದ್ಧಜೀವರ ಮೋಕ್ಷ ಪುರುಷಾರ್ಥಅವಿದ್ಯಾsಜ್ಞಾನ ಕಳೆದು ಪುಟವಿಟ್ಟಸ್ವರ್ಣರಜತಪೋಲ್ ಶುಚಿ ಆಗಿಸುವಿ ದಯದಿ 29ಸರ್ವಲೋಕ ಜನರಿಗೆ ಹಿತಕರ ಸುಹೃತ್ ನೀನೇಪ್ರಯೇಶ್ವರ ಆತ್ಮಾಗುರು ಜ್ಞಾನ ಅಭೀಷ್ಟಸಿದ್ಧಿಯುನೀ ಸುಹೃತ್ ಅಂದರೆ ಪ್ರತ್ಯುಪಕಾರ ಶೂನ್ಯನುಇನ್ನೂ ಬಹು ವಿಧದಿ ಪರಮಸಾಧು ಸ್ತುತಿಗೈದಿ 30ಸರ್ವಲೋಕಕೆ ನೀನೇ ಸುಹೃತ್ ಪ್ರಯೇಶ್ವರನುಶರ್ವಅಜಶಕ್ರಾದಿಗಳ ನಿಯಾಮಕನುಸರ್ವಾದಾನಂದಮಯ ಗುಣನಿಧಿ ಆತ್ಮನುಸರ್ವಾಭೀಷ್ಟಪ್ರದ ಜ್ಞಾನಸಿದ್ಧಿದನು 31ದೇವದೇವೋತ್ತಮನೇ ಆದಿಪೂರುಷ ಶ್ರೀಶವಿಶ್ವೇಶ್ವರ ಮತ್ಸ್ಯರೂಪ ಭಗವಂತನೀ ವಿಹಾರವು ಮಾಡಿ ಪ್ರಳಯಾರ್ಣವದಲಿಕವಿವರ್ಯ ರಾಜನಲಿ ಸುಪ್ರೀತನಾದಿ 32ವೇದ ಉದ್ಧರಿಸಿದಿ ಹಿಂದೆ ಅಸುರನ್ನ ಕೊಂದುಯುಕ್ತ ಕಾಲದಿ ಈಗ ಪ್ರಳಯವು ತೀರೆಸಾಧುವರ್ಯನು ಜ್ಞಾನವಿಜ್ಞಾನ ಕೋವಿದನುಸತ್ಯವ್ರತನಿಗೆ ಮನು ಪದವಿಯನು ಇತ್ತಿ 33ಮತ್ಸ್ಯಾವತಾರ ಸಂಕೀರ್ತನೆ ಮಾಳ್ಪರಿಗೆಸಿಧ್ಧಿ ಆಗುವುದು ಸರ್ವೇಷ್ಟ ಸದ್ಗತಿಯುಎಂದು ಪೇಳಿರುವಿ ಶುಕಪದ್ಮಭವಪತಿ ಶ್ರೀಶಸಾತ್ಯವತಿ ಮೀನ ವೇಧಪಿತ ಪ್ರಸನ್ನ ಶ್ರೀನಿವಾಸ 34- ಇತಿ ಶ್ರೀ ಮತ್ಸ್ಯಾವತಾರ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀವಿಜಯದಾಸಾರ್ಯ ಚರಿತ್ರೆ135ಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನೆ ಪ್ರಿಯತರ ದಾಸಾರ್ಯ ಪಅಶೇಷ ಗುಣಗಣಾರ್ಣವಅನಘಶ್ರೀರಮಣಶ್ರೀ ಶ್ರೀನಿವಾಸ ನರಹರಿ ವ್ಯಾಸ ಕೃಷ್ಣಹಂಸ ನಾಮಕ ಪರಂ ಬ್ರಹ್ಮವಿಧಿಸನಕಾದಿದಶಪ್ರಮತಿ ಗುರುವಂಶ ಸರ್ವರಿಗೂ ನಮಿಪೆ 1ವ್ಯಾಸರಾಜರ ಮುಖ ಕಮಲದಿಂದುಪದಿಷ್ಟದಾಸರಾಜರು ಪುರಂದರದಾಸಾರ್ಯವಸುಧೆಯಲ್ಲಿ ನಾರದರೇಪುರಂದರದಾಸರು ಎನಿಸಿಶ್ರೀಶನ್ನ ಸೇವಿಸುತ ಭಕ್ತÀನ್ನ ಕಾಯ್ತಿಹರು 2ಹರಿಸಮೀರರೂ ಸದಾ ಪ್ರಚುರರಾಗಿಹಪುರಂದರದಾಸಾರ್ಯರವರಶಿಷ್ಯರೇವೆಧರೆಯಲ್ಲಿ ಪ್ರಖ್ಯಾತ ವಿಜಯದಾಸಾರ್ಯರುಸುರವೃಂದ ಮಹಾ ಋಷಿಯು ಭೃಗು ಮಹಾ ಮುನಿಯು 3ಋಗ್ ಜಯಾಸಿತ ಯಜುಸ್ ಸಿತ ಯಜುಸ್ಸಾಮಅರ್ಥರ್ವಾಂಗಿರಸಕೆ ಕ್ರಮದಲಿ ಪ್ರವರ್ತಕರುಬಾಗುವೆ ಶಿರ ಪೈಲಗೆ ವೈಶಂಪಾಯನನಿಗೆಅರ್ಕಗೆ ಜೈಮಿನಿಗೆ ಸುಮಂತು ಸಿಂಧುಜಗೆ 4ನಮೋ ಬ್ರಹ್ಮ ವಾಯು ವಿಪ ಫಣಿಪಶುಕಸಂಕ್ರಂದಕಾಮಾರ್ಕ ನಾರದ ಭೃಗು ಸನತ್‍ಕುಮಾರಾದಿಕಾಮಯುಕ್ ಸೂತ ಗಂಧರ್ವನೃಪಶ್ರೇಷ್ಠರಿಗೆಭೂಮಿ ಸುರ ನರರಿಗೆ ಶ್ರೀಶ ಚಲಪ್ರತಿಕ 5ಸ್ವರ್ಣಾಂಡ ಬಹಿರಂತವ್ರ್ಯಾಪ್ತತೇಜಪುಂಜಜ್ಞಾನ ಸುಖ ಪೂರ್ಣ ಶ್ರೀಪತಿ ವೇದ ವ್ಯಾಸಜ್ಞಾನ ಸಂಯುತ ಕರ್ಮಯೋಗ ಪ್ರವರ್ತಿಸುವುದಕೆತಾನೇ ಸೇವಿಸಿದನು ಭೃಗು ಋಷಿಯು ಅಂದು 6ಸುರ ನದಿತೀರದಲಿ ಭೂಸುರರು ಋಷಿಗಳುಸತ್ರಯಾಗ ಎಂಬಂಥ ಜ್ಞಾನಕರ್ಮಚರಿಪೆ ಜಿಜ್ಞಾಸದಲಿ ನಾರದರು ಪ್ರೇರಿಸಿಹೊರಟರು ಭೃಗು ಮುನಿಯು ತತ್ವ ನಿರ್ಣಯಕೆ 7ಶೃತಿಸ್ಮøತಿಪುರಣೇತಿಹಾಸಾದಿಗಳಲ್ಲಿಅದ್ವಿತೀಯನು ಸರ್ವೋತ್ತಮಹರಿಶ್ರೀಶಪದುಮಭವ ರುದ್ರಾದಿಸುರರುತಾರ ತಮ್ಯದಲಿಸದಾ ಅವರಂಬುದನು ಪರಿಕ್ಷೆ ಮಾಡಿದರು 8ನೇರಲ್ಲಿ ತಾ ಪೋಗಿ ಅರಿತು ಪೇಳಿದರುಹರಿಃ ಸರ್ವೋತ್ತಮ ಸಾಕ್ಷಾತ್ ರಮಾದೇವಿ ತzನÀಂತರಸರಸಿಜಾಸನ ವಾಣಿ ರುದ್ರಾದಿಸುರರುತರತಮದಿ ಅವgವÀರು ಸಂಶಯವಿಲ್ಲ ಎಂದು 9ಈ ರೀತಿ ಹಿಂದೆ ಈ ಭೃಗು ಹರಿಯ ನಿಯಮನದಿಅರುಹಿದಂತೆ ಈಗವಿಜಯದಾಸಾರ್ಯನಾರದಪುರಂದರದಾಸಾರ್ಯರನ್ನನುಸರಿಸಿಹರಿಮಹಿಮೆ ಸತ್ ತತ್ವ ಅರುಹಿದರು ಜನಕ್ಕೆ10ವಿಜಯರಾಯರ ಶಿಷ್ಯ ಸೂರಿಗಳೊಳ್ ಪ್ರವರನುಧೂರ್ಜಟೆ ಉಮಾಸುತನುಕ್ಷಿಪ್ರಪ್ರಸಾದಗಜಮುಖನೆ ಗೋಪಾಲ ದಾಸಾರ್ಯರಾಗಿಪ್ರಜ್ವಲಿಸುತಿಹ ನಮೋ ಗುರುವರ್ಯ ಶರಣು 11ಪುರಂದರದಾಸಾರ್ಯರು ವಿಜಯರಾಯರಲ್ಲಿಇರುವರು ಒಂದಂಶದಿಂದ ಜ್ವಲಿಸುತ್ತಬರೆಸಿಹರು ಇಪ್ಪತ್ತು ಮೇಲೈದು ಸಾವಿರಶ್ರೀವರನ ಸಂಸ್ತುತಿ ತತ್ವ ಕವಿತೆಗಳ 12ಕೃತ ತ್ರೇತ ದ್ವಾಪರ ಕಲಿಯುಗ ನಾಲ್ಕಲ್ಲಿಯೂಸುತಪೋನಿಧಿ ಭೃಗು ಮೂಲ ರೂಪದಲುತ್ರೇತಾದಿ ಮೂರಲ್ಲಿಯೂ ಅವತಾರ ರೂಪದಲುಗಾಯತ್ರಿ ನಾಮನ್ನ ಸಂಸೇವಿಸುವರು 13ಪುರಂದರಾರ್ಯರ ಮನೆಯಲ್ಲಿ ಗೋವತ್ಸತರುವಾಯು ಸುಕುಮಾರ ಮಧ್ವಪತಿಯಾಗಿಸರಿದ್ವರ ಶ್ರೀ ತುಂಗಭದ್ರ ತೀರದಿ ಪುನಃಅರಳಿ ನೃಸಿಂಹ ಕ್ಷೇತ್ರದಲಿ ತೋರಿಹರು 14ಅಶ್ವತ್ಥ ನರಸಿಂಹ ಕ್ಷೇತ್ರಕ್ಕೆ ಮತ್ತೊಂದುಹೆಸರುಂಟು ರೂಢಿಯಲಿ ಚೀಕಲಾಪುರಿಯುಕುಸುಮಭವಪಿತಅಂಭ್ರಣಿಪತಿಎನ್ನಪ್ರಶಾಂತ ಚಿತ್ತದಿ ಧ್ಯಾನಿಸೆ ತಕ್ಕ ಸ್ಥಳವು 15ಶ್ರೀಪದ್ಮನಾಭತೀರ್ಥರಕರಕಂಜದಿಂದಉದ್ಭೂತ ಲಕ್ಷ್ಮೀಧರರ ವಂಶಜರುಶ್ರೀಪಾದ ರಾಜರೂ ಈ ಕ್ಷೇತ್ರದಲಿಸ್ಥಾಪಿಸಿದರು ಅಶ್ವತ್ಥÀ ನರಹರಿಯ 16ಹುಂಬೀಜ ಪ್ರತಿಪಾದ್ಯ ಭೂಪತಿಯ ವಕ್ತ್ರದಿಂಸಂಭೂತ ತುಂಗಾ ಸರಿದ್ವರದ ತೀರಗಂಭೀರ ಭೂ ಕಲ್ಪತರುವು ಅಶ್ವತ್ಥ್ಥವುಸಂರಕ್ಷಿಸುವ ನಾರಸಿಂಹ ಭದ್ರದನು 17ನಾರಾಯಣ ಬ್ರಹ್ಮರುದ್ರಾದಿ ದೇವರ್‍ಗಳುಇರುತಿಹರು ಅಶ್ವತ್ಥ್ಥ ಕಲ್ಪ ವೃಕ್ಷದಲಿನಾರಾಯಣ ಶ್ರೀ ನರಸಿಂಹ ಪುರುಷೋತ್ತಮನೆಶರಣಾದೆ ಪೊರೆಯುತಿಹವಾಂಛಿತಪ್ರದನು18ಕಾಶಿ ಬದರಿಯಂತೆ ಇರುವ ಈ ಕ್ಷೇತ್ರದಲಿಭೂಸುರವರರು ಶ್ರೀನಿವಾಸಾಚಾರ್ಯರಲಿಶ್ರೀ ಶ್ರೀನಿವಾಸನ ಪ್ರಸಾದದಿ ಜನಿಸಿಹರುಶ್ರೀಶ ಭಕ್ತಾಗ್ರಣಿ ಈ ಹರಿದಾಸವರರು 19ಕುಸುಮಾಲಯ ಪದ್ಮಾವತಿ ನೆನಪು ಕೊಡುವಕುಸುಮಕೋಮಲ ಮುಖಿ ಆದ ಕಾರಣದಿಕೂಸಮ್ಮ ನೆಂದು ಕರೆಯಲ್ಪಟ್ಟ ಸಾಧ್ವಿಯಈ ಶ್ರೀನಿವಾಸ ಆಚಾರ್ಯಕರಹಿಡಿದರು20ಪತಿವ್ರತಾ ಶಿರೋಮಣಿ ಕೂಸಮ್ಮನ ಗರ್ಭಅಬ್ಧಿಯಿಂ ಹುಟ್ಟಿತು ಉತ್ತಮ ರತ್ನಹತ್ತು ದಿಕ್ಕಲು ಪ್ರಕಾಶಿಸುವ (ದ್ಯುತಿವಂತ) ಕೀರ್ತಿಮಾನ್ಪುತ್ರ ರತ್ನನು ಬೆಳೆದ ದಾಸಪ್ಪ ನಾಮಾ 21ಕೂಸಮ್ಮ ಶ್ರೀನಿವಾಸಪ್ಪ ದಂಪತಿಗೆದಾಸಪ್ಪನಲ್ಲದೆ ಇನ್ನೂ ಕೆಲಪುತ್ರರುಕೇಶವಾನುಗ್ರಹದಿ ಹುಟ್ಟಿ ಸಂಸಾರದಿಈಜಿದರು ಯದೃಚ್ಛಾ ಲಾಭ ತುಷ್ಟಿಯಲಿ 22ಯಾರಲ್ಲೂ ಕೇಳದಲೇ ಅನಪೇಕ್ಷ ದಂಪತಿಯುಹರಿದತ್ತ ಧನದಲ್ಲಿ ತೃಪ್ತರಾಗುತ್ತಅರಳಿ ನೃಸಿಂಹನ್ನ ಸೇವಿಸುತ ಮಕ್ಕಳಲಿಹರಿಮಹಿಮೆ ಹೇಳುತ್ತ ಭಕ್ತಿ ಬೆಳಸಿದರು23ನಮ್ಮ ದಾಸಪ್ಪನಿಗೆ ಹದಿನಾಲ್ಕು ಮಯಸ್ಸಾಗೆಕರ್ಮಸುಳಿಯು ಮೆಲ್ಲ ಮೆಲ್ಲನೆ ತೋರಿಸಮುದ್ರ ಶಯನನ ಅಧೀನವು ಎಲ್ಲ ಎನ್ನುತ್ತಒಮ್ಮೆಗೂ ಲೆಕ್ಕಿಸಲಿಲ್ಲ ಬಡತನವನ್ನ 24ಬದರಮುಖ ಬ್ರಹ್ಮವರ್ಚಸ್ವಿ ದಾಸಪ್ಪಹದಿನಾರುವತ್ಸರದ ಬ್ರಹ್ಮಚಾರಿಮಾಧವನೆ ಹಾದಿ ತೋರುವ ತನಗೆ ಎಂದುಹೋದರು ಪೂರ್ವದಿಕ್ಕಿನ ಕ್ಷೇತ್ರಗಳಿಗೆ 25ಜಲರೂಪಿ ಕೃಷ್ಣನ್ನ ನೆನೆದು ಕೃಷ್ಣಾನದಿಯಲ್ಲಿ ಮಿಂದು ಅಲ್ಲಿಂದ ಮಂತ್ರಾಲಯಅಲ್ಲಿ ಶ್ರೀ ರಾಘವೇಂದ್ರರ ವಾದೀಂದ್ರರ ದಿವ್ಯಜಲಜಪಾದಗಳಿಗೆ ಬಾಗಿದರು ಶಿರವ 26ಆದವಾನಿನಗರನವಾಬನ ಸರ್ಕಾರಅಧಿಕಾರಿ ಡಾಂಭಿಕ ಓರ್ವನ ಗೃಹದಿಮದುವೆ ಪೂರ್ವದ ದೇವರ ಸಮಾರಾಧನೆಯುಹೋದರು ಆ ಮನೆಗೆ ದಾಸಪ್ಪ ಆರ್ಯ 27ಇತ್ತದ್ದು ಹರಿಯೆಂದು ತಂದೆ ಮಾಡುವ ಅತಿಥಿಸತ್ಕಾರ ನೋಡಿದ್ದ ದಾಸಪ್ಪಾರ್ಯನಿಗೆಇಂದುಆದವಾನಿ ಗೃಹಸ್ಥ ದಾಸಪ್ಪನಉದಾಸೀನ ಮಾಡಿದ್ದು ನೂತನಾನುಭವ 28ತೇನ ತ್ಯೆಕ್ತೇನ ಭುಂಜೀಥಾಃ ಮಾಗೃಥೆಃಕಸ್ಯ ಸ್ವಿದ್ಧನಂ ಎಂದು ಮನಸ್ಸಿಗೆ ತಂದುಆದವಾನೀಯಿಂದ ಹೊರಟು ಮಾರ್ಗದಲಿಇದ್ದ ಛಾಗಿ ಎಂಬ ಗ್ರಾಮ ಸೇರಿದರು 29ಉಪೋಷಣದಿ ತನುವು ಬಾಡಿದ್ದರೂ ಮುಖಸ್ವಲ್ಪವೂ ಮ್ಲಾನ ವಿಲ್ಲದೆ ಹರಿಯ ಸ್ಮರಿಸಿಬಪ್ಪ ದಾಸಪ್ಪನ್ನ ನೋಡಿ ಕೇಶವರಾಯಎಂಬ ವಿಪ್ರನು ಕರೆದ ತನ್ನ ಮನೆಗೆ 30ಛಾಗಿ ಗ್ರಾಮದ ಪ್ರಮುಖ ಕೇಶವರಾಯನುಆ ಗೃಹಸ್ಥನ ತಾಯಿ ಕುಟುಂಬಜನರೆಲ್ಲಾಭಗವಂತನ ಶ್ರೇಷ್ಠ ಪ್ರತೀಕ ಇವರೆಂದುಭಾಗಿ ಶಿರ ಆತಿಥ್ಯ ನೀಡಿದರು ಮುದದಿ 31ಆ ಮನೆಯ ದೊಡ್ಡ ಆಕೆಯು ಪಾಕ ಮಾಡಿಶ್ರೀ ಮನೋಹರನಿಗೆ ದಾಸಪ್ಪ ಅದನ್ನಸಂಮುದದಿ ನೈವೇದ್ಯ ಅರ್ಪಿಸಿ ಉಂಡರುರಮಾಪತಿನಿತ್ಯತೃಪ್ತಗೆ ತೃಪ್ತಿ ಆಯ್ತು32ಭಿನ್ನಸ್ವಭಾವಿಗಳು ಭಿನ್ನಜೀವರುಗಳಲಿಭಿನ್ನ ಕರ್ಮವ ಮಾಡಿ ಮಾಡಿಸುವಅನಘಘನ್ನ ಗುಣನಿಧಿ ಸರ್ವ ಜಡಜೀವ ಭಿನ್ನಶ್ರೀನಿಧಿಯ ಸ್ಮರಿಸುತ್ತೆ ಹೊರಟರು ವೇಂಕಟಕೆ 33ಭೂವೈಕುಂಠ ಈ ತಿರುಪತಿ ಕ್ಷೇತ್ರದಲಿದೇವದೇವೋತ್ತಮ ದೇವಶಿಖಾಮಣಿಯಮೂವತ್ತೆರಡು ಮುವತ್ತಾರುಬಾರಿಮೇಲೆಸೇವಿಸಿಹರು ಎಂದು ಕೇಳಿಹೆನು 34ದಾಸಪ್ಪ ನಾಮದಲೂ ವಿಜಯರಾಯರೆನಿಸಿಯೂದೇಶದೇಶದಿ ಹರಿಕ್ಷೇತ್ರ ಪೋಗಿಹರುಕಾಶೀಗೆ ಮೂರು ಸಲ ಪೋಗಿ ಬಂದಿರುವರುಕಾಶಿ ಬದರಿ ನಮಗೆ ಇವರ ಸಂಸ್ಮರಣೆ 35ಪಂಕೇರುಹೇಕ್ಷಣವರಾಹವೆಂಕಟ ಪತಿಯವೇಂಕಟಗಿರಿಯಲ್ಲಿ ಭಕ್ತಿಯಿಂ ಪುನಃತಾ ಕಂಡು ಆನಂದಪುಲಕಾಶ್ರು ಸುರಿಸಿಶಂಕೆಯಿಲ್ಲದೆ ಧನ್ಯ ಮನದಿ ತಿರುಗಿದರು 36ತಿರುಗಿ ಚೀಕಲಪುರಿ ಬಂದು ಹೆತ್ತವರಚರಣಪದ್ಮಗಳಲ್ಲಿ ನಮಿಸಿ ಅಲ್ಲಿನರಹರಿ ಶ್ರೀ ಶ್ರೀನಿವಾಸನ್ನ ಸೇವಿಸುತಪರಿತೋಷಿಸಿದರು ಗಾರ್ಹ ಧರ್ಮದಲಿ 37ರಾಜೀವಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸರಾಜೀವಾಲಯಾಪತಿಗೆ ಪ್ರಿಯತರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣಾದೇ ಸತತ 38-ಇತಿಃ ಪ್ರಥಮಾಧ್ಯಾಯಃ-ದ್ವಿತೀಯಾಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನ ಪ್ರಿಯತರ ದಾಸಾರ್ಯ ಪತಿರುಪತಿ ಘಟಿಕಾದ್ರಿ ಕಾಶಿ ಮೊದಲಾದಕ್ಷೇತ್ರಾಟನೆ ಮಾಡಿ ಬಂದ ಪುತ್ರನಿಗೆಭಾರಿಗುಣ ಸಾಧ್ವಿಯ ಮದುವೆ ಮಾಡಿಸಿದರುವಿಪ್ರರ ಮುಂದೆಶುಭಮುಹೂರ್ತದಲಿ ತಂದೆ1ಗುಣರೂಪವಂತಳು ವಧು ಅರಳಿಯಮ್ಮಘನಮಹಾ ಪತಿವ್ರತಾ ಶಿರೋಮಣಿಯು ಈಕೆತನ್ನ ಪತಿಸೇವೆಯ ಪೂರ್ಣ ಭಕ್ತಿಯಲಿಅನವರತಮಾಡುವ ಸೌಭಾಗ್ಯವಂತೆ2ಪುತ್ರೋತ್ಸವಾದಿಶುಭಸಂಭ್ರಮಗಳು ಆದುವುನಿತ್ಯಹರಿತುಳಸೀಗೆ ಪೂಜಾ ವೈಭವವುತ್ರಾತಹರಿ ಸಾನ್ನಿಧ್ಯ ಅನುಭವಕೆ ಬರುತ್ತಿತ್ತುಶ್ರೀದಹರಿವಿಠ್ಠಲನು ತಾನೇವೆ ಒಲಿದ 3ಧನಸಂಪಾದನೆಗಾಗಿ ಅನ್ಯರನು ಕಾಡದೆಅನಪೇಕ್ಷ ಮನದಿಂದ ಹರಿಕೊಟ್ಟದ್ದಲ್ಲೇದಿನಗಳ ಕಳೆದರು ಹೀಗೆ ಇರುವಾಗಫಣಿಪಗಿರಿವೇಂಕಟನು ಮನದಲ್ಲಿ ನಲಿದ 4ನರಹರಿಗೆ ಸನ್ನಮಿಸಿ ಅಪ್ಪಣೆ ಪಡೆದುಹೊರಟರು ವೇಂಕಟನಾಥನ್ನ ನೆನೆದುಸೇರಿದರು ಶೇಷಗಿರಿ ನಮಿಸಿ ಭಕ್ತಿಯಲಿಏರಿದರು ಎರಗಿದರು ನಾರಸಿಂಹನಿಗೆ 5ನರಸಿಂಹನಿಗೆ ಗುಡಿ ಗಾಳಿಗೋಪುರದಲ್ಲಿಕರೆವರು ಬಾಷಿಂಗನರಸಿಂಹನೆಂದುಹರಿದಾಸರಿಗೊಲಿವ ಕಾರುಣ್ಯಮೂರ್ತಿಯುಕರುಣಿಸಿದ ಜಗನ್ನಾಥದಾಸರಿಗೆ ಪೀಠ 6ದಾಸಪ್ಪ ವಿಜಯದಾಸರು ಆದ ತರುವಾಯಈಶಾನುಗ್ರಹವ ಬ್ಯಾಗವಟ್ಟಿಯವರ್ಗೆಶಿಷ್ಯರದ್ವಾರಾ ಒದಗಿ ಜಗನ್ನಾಥದಾಸರಾಗಿ ಮಾಡಿಹರು ಪರಮದಯದಿಂದ 7ನರಸಿಂಹನಪಾದ ಭಜಿಸಿ ಅಲ್ಲಿಂದಗಿರಿ ಅರೋಹಣವನ್ನ ಮುಂದುವರಿಸಿಶ್ರೀ ಶ್ರೀನಿವಾಸನ ಭೇಟಿ ಒದಗಿಸುವಂತೆವರಅಂಜನಾಸೂನು ಹನುಮಗೆರಗಿದರು8ಮಹಾತ್ಮ್ಯೆ ಶ್ರೀ ನಿಧಿ ಶ್ರೀ ಶ್ರೀನಿವಾಸನ್ನಮಹಾದ್ವಾರ ಗೋಪುರದಲ್ಲಿ ಸಂಸ್ಮರಿಸಿಮಹಾದ್ವಾರದಲಿ ಕರಮುಗಿದು ಉತ್ತರದಿಇಹ ಸ್ವಾಮಿತೀರ್ಥದಲಿ ಸ್ನಾನ ಮಾಡಿದರು 9ಭೂರ್ಭುವಃ ಸ್ವಃಪತಿಭೂಧರವರಾಹನ್ನಉದ್ಭಕ್ತಿ ಪೂರ್ವಕದಿ ವಂದಿಸಿ ಸರಸ್ಯಇಭರಾಜವರದನ್ನ ಸ್ಮರಿಸುತ್ತ ಸುತ್ತಿಶುಭಪ್ರದಪ್ರದಕ್ಷಿಣೆ ಮಾಡಿದರು ಮುದದಿ 10ಪ್ರದಕ್ಷಿಣೆಗತಿಯಲ್ಲಿ ಸಾಕ್ಷಿಅಶ್ವತ್ಥನ್ನಭೂಧರನ್ನ ನೋಡುತ್ತ ನಿಂತ ಹನುಮನ್ನವಂದಿಸಿ ಮಹಾದ್ವಾರ ಸೇರಿ ಕೈಮುಗಿದುಇಂದಿರೇಶನ ಆಲಯದೊಳು ಹೋದರು 11ಬಲಿಪೀಠ ಧ್ವಜಸ್ತಂಭ ತತ್ರಸ್ಥ ಹರಿಯನೆನೆದುಬೆಳ್ಳಿ ಬಾಗಿಲದಾಟಿ ಗರುಡಗೆ ನಮಿಸಿಒಳಹೋಗೆ ಅಪ್ಪಣೆ ಜಯವಿಜಯರಕೇಳಿಬಲಗಾಲ ಮುಂದಿಟ್ಟು ಹೋದರು ಒಳಗೆ 12ಬಂಗಾರ ಬಾಗಿಲ ದಾಟಲಾಕ್ಷಣವೇಕಂಗೊಳಿಸುವಂತ ಪ್ರಾಜ್ವಲ್ಯ ಕಿರೀಟಚಂಚಲಿಸುವ ತಟಿನ್ನಿಭಕರ್ಣಕುಂಡಲವಿಟ್ಟಗಂಗಾಜನಕವೆಂಕಟೇಶನ್ನ ನೋಡಿದರು13ಆನಂದಜ್ಞಾನಮಯ ಪಾದಪಂಕಜತತ್ರಸುನೂಪುರ ಉಡಿವಡ್ಯಾಣಕೌಶೇಯಮಿನುಗುವಾಂಬರ ಸಾಲಿಗ್ರಾಮದ ಹಾರಘನಮಹಾ ಹಾರಗಳು ಸರಿಗೆ ವನಮಾಲೆ14ಶ್ರೀವತ್ಸ ಕೌಸ್ತುಭಮಣಿ ವೈಜಯಂತೀದಿವ್ಯ ಪ್ರಜ್ವಲಿಸುವ ಪದಕಂಗಳುಕಿವಿಯಲ್ಲಿ ಮಿಂಚಿನಂದದಿ ಪೊಳೆವಕುಂಡಲಸರ್ವಾಭರಣಗಳ ವರ್ಣಿಸಲು ಅಳವೇ 15ಅಕಳಂಕ ಪೂರ್ಣೇಂದು ಮುಖಮುಗುಳುನಗೆಯುಕಂಗಳುಕಾರುಣ್ಯ ಸುರಿಸುವನೋಟಕಾಕುಇಲ್ಲದ ನೀಟಾದ ಫಣೆ ತಿಲಕವುಚೊಕ್ಕ ಚಿನ್ನದಿ ನವರತ್ನ ಜ್ವಲಿಪ ಕಿರೀಟ 16ಬ್ರಹ್ಮಪೂಜಿತಶ್ರೀ ಶ್ರೀನಿವಾಸನ್ನಮಹಾನಂದದಿ ನೋಡಿ ಸನ್ನಮಿಸಿ ಮುದದಿಬಹಿರದಿ ಬಂದು ಮತ್ತೊಮ್ಮೆ ಪ್ರದಕ್ಷಿಣೆ ಮಾಡಿಮಹಾಪ್ರಾಕಾರದಲಿ ಕೊಂಡರು ಪ್ರಸಾದ 17ಹೇಮಮಯ ಆನಂದನಿಲಯ ವಿಮಾನ ಗೋಪುರದಿಶ್ರೀಮನೋಹರ ಶ್ರೀ ಶ್ರೀನಿವಾಸನ್ನ ಪುನಃನೆಮ್ಮದಿದಿ ನೋಡಿ ಸನ್ನಮಿಸಿ ಶ್ರೀನಾರಸಿಂಹನ್ನ ವಂದಿಸಿ ಹೋದರು ಒಳಗೆ 18ಏಕಾಂತ ಸೇವೆ ಶಯ್ಯೋತ್ಸವವ ನೋಡಿಅಕಳಂಕ ಭಕ್ತಿಯಲಿ ಮನಸಾ ಸ್ತುತಿಸಿಶ್ರೀಕರಾಲಯ ಪ್ರಕಾರ ಮಂಟಪದಲ್ಲಿಭಕುತವತ್ಸಲನ್ನ ನೆನೆದು ಮಲಗಿದರು 19ಬಂಗಾರಬಾಗಿಲು ಅರ್ಧಮಂಟಪವುಪುರಂದರದಾಸಾರ್ಯರುಯೋಗ ನಾರಸಿಂಹನ ಸ್ಥಾನ ಬಲಪಾಶ್ರ್ವಏಕಾಂತ ಮಂಟಪವುಪುರಂದರದಾಸಾರ್ಯರುಶ್ರೀಕರನ ಭಜಿಸುತ್ತಾ ಇರುವರು ಅಲ್ಲಿ 20ಅರ್ಧ ಮಂಟಪ ಹೊರಗೆ ಉತ್ತರ ಪ್ರಾಕಾರದಿಎತ್ತರ ಮಂಟಪದ ಜಗುಲಿಯಲ್ಲೂಆಸ್ಥಾನ ಮಂಟಪಕೆ ಪಶ್ಚಿಮ ಮಂಟಪದಲ್ಲೂಆಸ್ಥಾನ ಶ್ರೇಷ್ಠರು ಕುಳಿತದ್ದು ಉಂಟು 21ಮನುಷ್ಯ ಲೋಕದಿ ಹುಟ್ಟಿ ಮಾನುಷಾನ್ನವನುಂಡುಮಾನುಷಾನ್ನದ ಸೂಕ್ಷ್ಮ ಭಾಗ ಪರಿಣಮಿಸಿಮನಖಿನ್ನನಾದಂತೆ ಇದ್ದ ದಾಸಪ್ಪನಿಗೆಶ್ರೀ ಶ್ರೀನಿವಾಸನು ಬಂದು ತಾ ಒಲಿದ 22ಶ್ರೀನಿಧಿಃ ಶ್ರೀ ಶ್ರೀನಿವಾಸವೇಂಕಟಪತಿಘನದಯದಿ ಸೂಚಿಸಿದ್ದು ತಿಳಕೊಂಡರುಸ್ವಪ್ನದಿ ಭಾಗೀರಥಿಯಪುರಂದರದಾಸಾರ್ಯರಬಿಂದುಮಾಧವ ಅಂಭ್ರಣೀಶನ್ನ ನೋಡಿದರು 23ಭೂವರಾಹವೆಂಕಟರಮಣನ್ನ ಮರುದಿನಸೇವಿಸಿ ಹನುಮಂತನಿಗೆ ನಮಸ್ಕರಿಸಿದೇವಾನುಗ್ರಹದಿ ಐದಿದರು ವಾರಣಾಸಿದೇವ ತಟಿನೀಸ್ನಾನ ಮೂರ್ತೀ ದರ್ಶನವು 24ಜಾಗ್ರತೆ ಅಲ್ಲ ನಿದ್ರೆಯೂ ಅಲ್ಲ ಸಂಧಿಆ ಕಾಲದಲಿ ಆನಂದ ಅನುಭವವುಹೇಗೆಂದರೆ ವಿಠ್ಠಲ ಶ್ರೀನಿವಾಸನುಝಗಿಝಗಿಸಿ ತೋರ್ವನು ವಿಜಯಸಾರಥಿಯು 25ತೃಟಿಮಾತ್ರದಲಿ ಮುಂದೆ ನಿಂತರುಪುರಂದರವಿಟ್ಠಲ ದಾಸರು ಕೃಪೆಯ ಬೀರುತ್ತತಟ್ಟನೇ ಎದ್ದರು ದಾಸಪ್ಪ ಆರ್ಯರುಸಾಷ್ಠಾಂಗ ನಮಿಸಿದರು ಗುರುವರ್ಯರೆಂದು 26ಕರಕೊಂಡು ಹೋದರು ಆಚೆದಡದಲ್ಲಿರುವಕ್ಷೇತ್ರಕ್ಕೆ ಅಲ್ಲಿ ಶ್ರೀಪತಿವ್ಯಾಸನ್ನತೋರಿಸಿದರು ಆ ವ್ಯಾಸ ಮೂರ್ತಿಯಲ್ಲಿಸುಪ್ರಕಾಶಿಪಹರಿರೂಪಗಳ ಕಂಡರು27ವಿಜಯಸಾರಥಿಕೃಷ್ಣ ವಾಶಿಷ್ಠಮಾಧವಅಜಭುಜಗಭೂಷಣಾದಿಗಳಿಂದಸೇವ್ಯರಾಜರಾಜೇಶ್ವರಿ ಶ್ರೀನಿಧಿಯ ಮನದಣಿಯಭಜಿಸಿ ಸ್ತುತಿಸಲು ಯತ್ನಿಸಿದರು ದಾಸಪ್ಪ 28ಸೌದಾಮಿನಿಗಮಿತ ರಂಜಿಸುವ ಜ್ಯೋತಿಯುಬದರೀಶನಿಂ ಪುರಂದರದಾಸರ ದ್ವಾರಬಂದು ನೆಲಸಿತು ದಾಸಪ್ಪನ ಜಿಹ್ವೆಯತುದಿಯಲ್ಲಿ ವಿಜಯಾಖ್ಯ ಸುಶುಭನಾಮ 29ರಾಜೀವಜಾಂಡದೊರೆ ರಾಜೀವಾಲಯಪತಿವಿಜಯವಿಠ್ಠಲ ನಿಮ್ಮ ಹೃದ್‍ರಾಜೀವದಲಿಪ್ರಜ್ವಲಿಸುತಿಹ ಸರ್ವತೋಮುಖನೆಂದುನೈಜವಾತ್ಸಲ್ಯದಿ ಪೇಳಿದರು ಗುರುವು 30ಗುರುಗತುರಗಾಸ್ಯ ವಿಠ್ಯಲವ್ಯಾಸ ತನ್ನ ಹೊರವೊಳುಪ್ರಕಾಶಿಪುದು ಅನುಭವಕೆ ಬಂತುಎರಗಿದರುವಿಜಯದಾಸರು ಪುರಂದರಾರ್ಯರಿಗೆಸರಿ ಏಳು ಎಂದರು ಗುರುವರ್ಯ ಹಿತದಿ 31ಎದ್ದರು ಎಚ್ಚರಿಕೆ ಆಗಿ ವಿಜಯಾರ್ಯರುವೇದ್ಯವಾಯಿತು ಶ್ರೀಯಃಪತಿಯು ಗುರುವುಹಿತದಿ ತಾವೇ ಬಂದು ಅನುಗ್ರಹ ಮಾಡಿದ್ದುಇಂಥ ಭಾಗ್ಯವು ಎಲ್ಲರಿಗೂ ಲಭಿಸುವುದೇ 32ಶ್ರೀಕಾಂತ ಕಪಿಲ ಶ್ರೀ ಶ್ರೀನಿವಾಸನ್ನಹಿಂಕಾರ ಪ್ರತಿಪಾದ್ಯ ಕೃತಿಪತಿ ಪ್ರದ್ಯುಮ್ನಶ್ರೀಕರ ವಿಠ್ಠಲ ವ್ಯಾಸಹಯಮುಖನ್ನ ಸ್ಮರಿಸುತ್ತಗಂಗೆಯ ಸೇರಿದರು ಮಿಂದರು ಮುದದಿ 33ವಿಧಿಪೂರ್ವಕ ಸ್ನಾನ ಅಘ್ರ್ಯಾಧಿಗಳಿತ್ತು ಅಘ್ರ್ಯಾದಿಆ ದೇವತಟನೀಯ ದಡದಲ್ಲಿ ಕುಳಿತುಸದ್ವೈಷ್ಣವಚಿನ್ನಾಲಂಕೃತರು ಜಪಿಸಿದರುಮಧ್ವಸ್ಥ ವಿಜಯವಿಠ್ಠಲಶ್ರೀಪತಿಯ 34ಪದುಮಜನ ಸುತ ಭೃಗುವೆ ಅವನಿಯಲಿ ಅವತರಿಸಿಬಂದಿಹನು ಮಾಧವನು ಒಲಿದಿಹನು ಎಂದುಮಂದಾಕಿನಿವ್ಯಜನಚಾಮರಗಳ್ ಬೀಸುವಂತೆಬಂದು ಪ್ರವಹಿಸಿದಳು ದಾಸರ ಆವರಿಸಿ 35ಜನರೆಲ್ಲ ನೋಡುತಿರೆ ಪ್ರವಾಹವು ಉಕ್ಕಿಪೂರ್ಣ ಆವರಿಸಿತು ವಿಜಯರಾಯರನ್ನಏನು ಅದ್ಭುತ ಇದು ಶಾಂತವಾಗಲು ಕ್ಷಣದಿನೆನೆಯಲಿಲ್ಲ ವಸ್ತ್ರ ಊಧ್ರ್ವ ಪುಂಡ್ರಗಳು 37ಹರಿಆಜೆÕಯಲಿಸುರರುಸಜ್ಜನೋದ್ಧಾರಕ್ಕೂಪ್ರಾರಬ್ಧಕರ್ಮ ಕಳೆಯಲು ಜನಿಪರು ಭುವಿಯೋಳ್ಇರುವುವು ಅಣಿಮಾದಿಗಳು ಶಕ್ತ್ಯಾತ್ಮನಾಗುರುಒಲಿಯೆ ವ್ಯಕ್ತವಾಗುವುವು ಆಗಾಗಾ38ಸುರರುಭೃಗುದಾಸಪ್ಪ ಜಾತಾಪರೋಕ್ಷಿಗೆಪುರಂದರದಾಸ ನಾರದರೊಲಿದ ಮೇಲೆಇರುತ್ತಿದ್ದಅಪರೋಕ್ಷಅಣಿಮಾದಿ ಮಹಿಮೆಯುಸುಪ್ರಕಟವಾದವು ಶ್ರೀಶನ ದಯದಿ 39ವರ್ಣಪ್ರತಿಪಾದ್ಯಹರಿಒಲಿಯೆ ವರ್ಣಂಗಳುಆಮ್ನಾಯನಿಗಮತತಿ ಸತ್‍ತತ್ವಜ್ಞಾನಅನಾಯಸದಿಂದೊದಗಿ ವಿಜಯದಾಸಾರ್ಯರುಅನಿಲಸ್ಥ ಶ್ರೀವರನ್ನ ಸ್ತುತಿಸಿ ಹಾಡಿದರು 40ಜನಗಳು ವಿಜಯದಾಸಾರ್ಯರು ಶ್ರೀಹರಿಯಧ್ಯಾನಿಸಿ ಶ್ರೀಪತಿಯ ರೂಪಕ್ರಿಯೆಗಳನ್ನುಗುಣಗಳನ್ನು ಗಂಗಾದಡದಲ್ಲಿ ಕುಳಿತುಗಾನಮಾಡುವುದನ್ನ ಕೇಳಿದರು ಮುದದಿ 41ಘನಮಹಾತ್ಮರು- ಇವರು ಸಜ್ಜನೋದ್ಧಾರಕರುಶ್ರೀನಿಧಿಯ ಸತ್‍ತತ್ವಜ್ಞಾನ ಪೂರ್ವಕದಿಗಾನಮಾಡಿ ಲೋಕಕ್ಷೇಮಕೆÀ್ಕೂದಗುವರೆಂದುಧನ ದ್ರವ್ಯಕಾಣಿಕೆಇತ್ತರು ಜನರು42ಪೋದಕಡೆ ಎಲ್ಲೆಲ್ಲೂ ಮರ್ಯದೆ ಪೂಜೆಗಳುಸಾಧುಸಜ್ಜನರ ಕೈಯಿಂದ ತಾ ಕೊಂಡುಮಾಧವಮಧ್ವಮುನಿ ಪುರಂದರಾರ್ಯರ ಭಾಗ್ಯಎಂದು ಶ್ರಿ ಕೃಷ್ಣಂದೇ ಸರ್ವವೆಂಬುವರು 43ಭಾರಿ ಬಹು ಬಹುವುಂಟು ವಿಜಯರಾಯರ ಮಹಿಮೆಅರಿಯೆನಾ ಅಲ್ಪಮತಿ ಹೇಗೆ ವರ್ಣಿಸಲಿಹರಿಗೆ ಪ್ರಿಯತರ ಈ ಸುಮಹಾತ್ಮರು ತನಗೆಎರಗಿದವರನ್ನ ಕಾಯ್ವರು ಕೈಬಿಡದೆ 44ವಾರಣಾಸಿರಾಜ ಪೂಜಿಸಿದ ಇವರನ್ನಎರಗಿ ಜನರು ಶಿಷ್ಯ ರಾದರಲ್ಲಲ್ಲಿಊರಿಗೆ ಬರುವಷ್ಟರಲ್ಲೇ ಇವರ ಕೀರ್ತಿಹರಡಿತು ಹರಿದಾಸಜ್ಞಾನಿವರರೆಂದು 45ರಾಜೀವಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸರಾಜೀವಾಲಯಾಪತಿಗೆ ಪ್ರಿಯತರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣಾದೇ ಸತತ 46-ಇತಿಃ ದ್ವಿತಿಯಾಧ್ಯಾಯಃ-ತೃತೀಯಾಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನೆ ಪ್ರಿಯತರ ದಾಸಾರ್ಯ ಪಕಾಶಿ ಗಯಾ ಪಿತೃಕಾರ್ಯ ಪೂರೈಸಿ ಬರುವಾಗದೇಶ ದೇಶದಿ ಹರಿಯ ಮಹಿಮೆ ತೋರುತ್ತಾಅಸಚ್ಚಾಸ್ತ್ರ ವಾದಗಳ ಕತ್ತರಿಸಿ ಬಿಸುಡುತ್ತಸುಚ್ಛಾಸ್ತ್ರ ಬೋದಿಸುತ್ತ ಬಂದರು ಮನೆಗೆ 1ಸಕುಟಂಬ ತಿರುಪತಿಗೆ ಪೋಗಿ ಶ್ರೀನಿಧಿಯಭಕುತಿಯಿಂದಲಿ ಸ್ತುತಿಸಿ ಊರಿಗೆ ತಿರುಗಿಶ್ರೀಕರನ ಪ್ರೀತಿಕರ ಶಿಷ್ಯೋದ್ಧಾರಕ್ಕೆಬೇಕಾದ ಯತ್ನಗೈದರು ದಾಸ ಆರ್ಯ 2ಈ ಪುಣ್ಯ ಶ್ಲೋಕರು ಷಷ್ಠ್ಯುಪರಿಸಂಖ್ಯಾಸುಪುಣ್ಯ ಶಿಷ್ಯರಿಗೆ ಬಲುದಯದಿಂದಅಪರೋಕ್ಷಒದಗಲು ಉಪದೇಶವಿತ್ತಿಹರುಅಪವರ್ಗಯೋಗ್ಯರಿಗೆಮಾರ್ಗತೋರಿಹರು3ಮೊದಲು ಗೋಪಾಲ ವೇದವ್ಯಾಸ ಹಯವದನಶ್ರೀದನ ಈ ಮೂರು ಉತ್ಕøಷ್ಠನಾಮಅಂಕಿತವ ನಾಲ್ವರಿಗೆ ವಿಜಯದಾಸಾರ್ಯರುಉತ್ತುಂಗಮಹಿಮರು ಇತ್ತಿಹರು ದಯದಿ 4ಸಾಧುವರ್ಯ ತಮ್ಮನಿಗೆ ಹಯವದನಾಂಕಿತ ನಾಮಉತ್ತನೂರು ಭಾಗಣ್ಣ ರಾಯರ್ಗೆ ಗೋಪಾಲಆದವಾಣಿ ತಿಮ್ಮಣ್ಣರ್ಗೆ ವೇಣುಗೋಪಾಲಆದವಾಣಿಯವರದ್ವಾರಾ ವ್ಯಾಸ ಸುಬ್ಬಣ್ಣರ್ಗೆ 5ಗುರುವರ್ಯ ಗೋಪಾಲದಾಸಾರ್ಯರಚರಣಸರಸಿಜಯುಗ್ಮನಾ ನಂಬಿದೆ ನಿಶ್ಚಯದಿಕಾರುಣ್ಯ ಔದಾರ್ಯ ನಿಧಿಗಳು ಇವರಲ್ಲಿಶರಣಾದೆ ಸಂತತಸ್ಮರಿಸೆ ಪಾಲಿಪರು 6ಗಾಯತ್ರಿಯಲಿ ಕೇಶವಾದಿ ಇಪ್ಪತ್ತನಾಲ್ಕುಹಯಗ್ರೀವರೂಪಗಳು ಆರನ್ನೂ ಸ್ಮರಿಸಿಗಾಯತ್ರಿನಾಮ ಶ್ರೀವೇಂಕಟಕೃಷ್ಣನಿಗೆಪ್ರಿಯಗಾಯತ್ರಿಮಂತ್ರ ಸಿದ್ಧಿಪಡೆದವರು 7ಇಂಥಾ ಮಹಾಭಕ್ತ ಭಾಗಣ್ಣನ ಬಳಿಬಂದು ವಿಜಯಾರ್ಯರು ಇತ್ತರು ದಯದಿಸೌಂದರ್ಯಸಾರ ಗೋಪಾಲವಿಠ್ಠಲ ನಾಮಇಂದಿರಾಪತಿ ಅಖಿಳಪ್ರದನ ಅಂಕಿತವ 8ಆದವಾಣಿಸುಲ್ತಾನನ ಮಂತ್ರಿಯುಸಾಧುಶೀಲನು ತಿಮ್ಮಣ್ಣರಾಯಈತನು ವೀರ ವೈಷ್ಣವಮಾಧ್ವಬ್ರಾಹ್ಮಣನುಭಕ್ತಿಮಾನ್ ಜ್ಞಾನವಾನ್ ವೈರಾಗ್ಯಶಾಲಿ 9ಹಿಂದಿನ ಜನ್ಮದಿ ಆದಿಕೇಶವನನ್ನವಂದಿಸಿ ಸ್ತುತಿಸಿದ ರಾಮಾನುಜೀಯಇಂದುಸದ್ವೈಷ್ಣವಕುಲದಲ್ಲಿ ಹುಟ್ಟಿಹನುಇಂದಿರೇಶನ ನಾಮಾಂಕಿತ ಬೇಡಿದ್ದ ಮೊದಲೇ 10ಮೊದಲೇವೆ ತಾಳೆಂದು ಹೇಳಿ ಈಗ ವಿಜಯಾರ್ಯಇತ್ತರೂ ಶ್ರೀ ವೇಣುಗೋಪಾಲವಿಠ್ಠಲ ಈಉತ್ತಮ ಈ ನಾಮ ಉಪದೇಶ ಮಾಡಿದರುಈ ತಿಮ್ಮಣ್ಣ ರಾಯರಿಗೆ ನಮೋ ನಮೋ ಎಂಬೆ 11ಕಲ್ಲೂರು ಸುಬ್ಬಣ್ಣಾಚಾರ್ಯರು ನ್ಯಾಯಸುಧಾಮಂಗಳ ಅನುವಾದ ಚರಿಸಿ ವಿಜಯಾರ್ಯಅಲ್ಲಿ ಪಾಚಕ ವೇಷದಲಿ ಪೋಗಿ ಮಂಡಿಗೆಗಳಮಾಡಿದರು ಮಧುಸೂದನನ ಪ್ರೀತಿಗೆ12ಸುಬ್ಬಣ್ಣಾಚಾರ್ಯರು ಮಹಾದೊಡ್ಡ ಪಂಡಿತರುಶುಭತಮಸುಧಾಮಂಗಳದ ಅನುವಾದಸಂಭ್ರಮದಿ ಕದಡಿದ್ದ ಬಹು ಬಹು ಮಂದಿಯಸಭೆಯೊಳು ಪ್ರವೇಶಿಸಿದರು ವಿಜಯಾರ್ಯ 13ನೆರೆದಿದ್ದವರಲ್ಲಿ ವಿಜಯರಾಯರ ಮಹಿಮೆಅರಿತಿದ್ದಜನ ನಮ್ರಭಾವದಲಿ ಎದ್ದುಮರ್ಯಾದೆ ಮಾಡಿದರು ಅದನೋಡಿ ಆಚಾರ್ಯಪ್ರಾಕೃತಹಾಡುವವಗೆ ಪೂಜೆಯೇ ಎಂದ14ವ್ಯಾಸಪೀಠದ ಮುಂದೆ ವಿಜಯರಾಯರು ಪೋಗಿವ್ಯಾಸಗೆ ಮಧ್ವಗೆ ಜಯಾರ್ಯಗೆ ನಮಿಸಿಸಂಶಯ ಕಳೆದು ಯಥಾರ್ಥಜ್ಞಾನವನೀವಶ್ರೀಸುಧಾ ಕೇಳುವೆ ಎಂದು ಪೇಳಿದರು 15ಕನ್ನಡ ಕವನಮಾಡುವ ನಿಮಗೆ ಈ ಸುಧಾಘನವಿಷಯಗಳು ತಿಳಿಯಲಿಕೆ ಬೇಕಾದಜ್ಞಾನನಿಮಗೆ ಏನು ಇದೆ ಹೇಳಿ ಎಂದು ಆಚಾರ್ಯತನ್ನ ಪಾಂಡಿತ್ಯದ ಗರ್ವದಿ ಕೇಳಿದನು 16ಸುಬ್ಬಣ್ಣಾಚಾರ್ಯನ ಈ ಮಾತುಕೇಳಿಒಬ್ಬ ಪರಿಚಾರಕನ ಕರೆದು ವಿಜಯಾರ್ಯಅವನಿಗೆ ವಿಧ್ಯಾಭ್ಯಾಸ ಉಂಟೇ ಎನ್ನೆಅಪದ್ಧಅಡದೇ ಅವ ವಿದ್ಯಾಹೀನನೆಂದ17ಸಭ್ಯರು ನೋಡುತಿರೆ ವಿಜಯದಾಸಾರ್ಯರುಕಪಿಲ ಖಪತಿ ಗರುಡಾಸನ ಘರ್ಮಶ್ರೀಪತಿ ಆಜ್ಞಾಸಾರ ವರಾಹನ್ನ ಸ್ಮರಿಸಿದರುಆ ಪರಮದಡ್ಡನ ಶಿರದಿ ಕರವಿಟ್ಟು 18ಕರವಿಡಲು ವಿಜಯರಾಯರ ಜ್ಞಾನಪೀಯೂಷಧಾರೆ ಆ ಪುರುಷನ ಶರೀರದೊಳು ಪೊಕ್ಕುರುಧಿರನಾಳಂಗಳು ತನುನರನಾಡಿ ಶಾಖೆಗಳುತೀವ್ರಸುಪವಿತ್ರವಾದವು ತತ್ಕಾಲ 19ವರ್ಣಾಭಿಮಾನಿಗಳು ಭಾರತೀ ಸಹವಾಯುವರ್ಣಪ್ರತಿಪಾದ್ಯ ಹರಿರಮಾಸಮೇತತನು ಮನವಾಕ್ಕಲ್ಲಿ ಪ್ರಚುರರಾಗಿ ಅವನುಘನತರ ಸುಧಾಪಂಕ್ತಿಗಳ ಒಪ್ಪಿಸಿದನು 20ಅಣುವ್ಯಾಖ್ಯಾನ ಸುಧಾ ನ್ಯಾಯ ರತ್ನಾವಳೀಇನ್ನು ಬಹುಗ್ರಂಥಗಳ ವಾಕ್ಪ್ರವಾಹದಲಿಘನಮಹ ವಿಷಯಗಳಸಂದೇಹಪರಿಹರಿಪಅನುವಾದಮಾಡಿದ ಅದ್ಭುತ ರೀತಿಯಲ್ಲಿ 22ಸುಬ್ಬಣ್ಣಾಚಾರ್ಯರು ದಾಸಾರ್ಯರಲ್ಲಿಉದ್ಭಕ್ತಿಗುರುಭಾವದಿಂದೆದ್ದು ನಿಲ್ಲೆಸೌಭಾಗ್ಯ ಪ್ರದಸುಧಾ ಮಂಗಳವ ಪೂರೈಸುಶುಭೋದಯವು ನಿನಗೆಂದು ಪೇಳಿದರು ದಾಸಾರ್ಯ 23ಮಂಗಳಪ್ರಸಾದವ ಸಭ್ಯರಿಗೆ ಕೊಟ್ಟಮೇಲ್ಕಂಗಳಲಿ ಭಕ್ತಿಸುಖ ಬಾಷ್ಪ ಸುರಿಸುತ್ತಗಂಗಾಜನಕಪ್ರಿಯ ವಿಜಯರಾಯರಪಾದಪಂಕಜದಿ ಶರಣಾದರು ಸುಬ್ಬಣ್ಣಾರ್ಯ 24ರಾಜೀವಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸರಾಜೀವಾಲಯಾಪತಿಗೆ ಪ್ರಿಯತರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣಾದೆ ಶರಣು 25-ಇತಿಃ ತೃತೀಯಾಧ್ಯಾಯಃ-ಚತುರ್ಥ ಅಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನ ಪ್ರಿಯತರ ದಾಸಾರ್ಯ ಪರಾಜರು ಸ, ಂಸ್ಥಾನ ಮಂಡಲೇಶ್ವರರೆಲ್ಲವಿಜಯದಾಸಾರ್ಯರಿಗೆ ಎರಗಿ ತಮ್ಮರಾಜಧಾನಿಗೆ ಕರೆದು ಕೃತಕೃತ್ಯರಾದರುವಿಜಯಸಾರಥಿಒಲುಮೆ ಏನೆಂಬೆ ಇವರೊಳ್1ಅಲ್ಲಲ್ಲಿ ಪೋದ ಸ್ಥಳದಲ್ಲಿ ನರಹರಿ ಮಹಿಮೆಎಲ್ಲ ಸಜ್ಜನರಿಗೂ ಕೀರ್ತಿಸಿ ತೋರಿಸಿಕಲಿಕಲ್ಮಷ ಪೀಡಿತ ಜನರ ಕಷ್ಟಗಳಎಲ್ಲವ ಪರಿಹಾರ ಮಾಡಿ ಕಾಯ್ದಿಹರು 2ಹರಿನಾಮಾ ಐನೂರು ಸಾವಿರ ಕೀರ್ತನೆ ಗ್ರಂಥಗಳೊಳುತಾನೇ ಸ್ವತಮಾಡಿದ್ದಲ್ಲದೆ ಮಿಕಿಲಾದ್ದುಇನ್ನೂರೈವತ್ತುನೂರು ವಿಜಯರಾಯರಲಿ ನಿಂತುಪೂರ್ಣ ಮಾಡಿಸಿಹರು ಶ್ರೀ ಪುರಂದರದಾಸಾರ್ಯ 3ಹರಿನಾಮ ಜಿಹ್ವೆಯಲಿ ಭೂತದಯಾ ಮನಸಿನಲ್ಲಿಹರಿಮೂರ್ತಿ ಗುಣರೂಪ ಅಂತಃಕರಣದಲಿಪುರಂದರಾರ್ಯರು ಇವರು ರಚಿಸಲೆ ಬಿಟ್ಟಿದ್ದಭಾರಿ ಸಂಕೀರ್ತನೆಗಳನ್ನ ಹಾಡಿಹರು 4ಪ್ರಿಯತಮ ಶಿಷ್ಯರು ಗೋಪಾಲ ದಾಸರೊಡೆತೋಯಜಾಕ್ಷನ ಸ್ಮರಿಸಿ ನಡಿಯುತಿರುವಾಗಬಾಯಾರಿಕೆ ಪೀಡಿತ ಕತ್ತೇಗೆ ದಯಮಾಡಿತೋಯವನು ಕುಡಿಸಿಹರು ಕಾರುಣ್ಯಶರಧಿ5ಬಹುಕಾಲದ ಹಿಂದೆ ತಾ ಕೇಶವರಾಯನಗೃಹದಲ್ಲಿ ಹುಗ್ಗಿಯ ಉಂಡದ್ದು ನೆನಪಾಗಿಆ ಗೃಹಕ್ಕೆ ಪೋದರು ಗೋಪಾಲ ದಾಸರ ಸಹಹಾಹಾ ಅಲ್ಲಿಸ್ಥಿತಿ ಏನೆಂಬೆ ಆಗ 6ಏಳು ಜನ್ಮದಕರ್ಮಗತಿಸುಳಿಯಲ್ಲಿಸಿಲುಕಿ ಆ ಮನೆಯ ಯುವಕನುಅಸುಬಿಟ್ಟತಲೆ ಸ್ಫೋಟನವಾಗಿ ತಾಕಿ ಬೋದಿಗೆಗೆಅಳುತ್ತಿದ್ದರು ಜನರು ದುಃಖದಲಿ ಮುಳಗಿ 7ಕರುಣಾ ಸಮುದ್ರರು ಭೂತದಯಾ ಪರರುಎರದರು ತಮ್ಮ ಆಯುಷ್ಯದಿ ಮೂರು ವರುಷವರಾಹಭಿಷಕ್ ನರಹರಿಯ ಜಪವನ್ನು ಗೈದುನರಸಿಂಹನ ಸ್ತುತಿಸಿ ಬದಕಿಸಿದರು ಯುವಕನ್ನ 8ಅಳುತ್ತಿದ್ದ ಜನರೆಲ್ಲ ಆನಂದ ಬಾಷ್ಪದಮಳೆ ಸುರಿಸಿ ಬಲು ಕೃತಜÕತೆ ಭಾವದಿಂದಮಾಲೋಲ ಪ್ರಿಯವಿಜಯದಾಸರ ಪದಯುಗಳನಳಿನದಲಿ ನಮಿಸಿದರು ಭಕ್ತಿ ಪೂರ್ವಕದಿ 9ಚೀಕಲ ಪರವಿಯಿಂದಲಿ ನಾಲಕು ಕ್ರೋಶನಗರವು ಮಾನವಿ ಎಂಬುದು ಅಲ್ಲಿಪ್ರಖ್ಯಾತ ಪಂಡಿತನು ಶ್ರೀನಿವಾಸಾಚಾರ್ಯನುಪುಷ್ಕಲ ಶ್ರೀಮಂತ ಬಹು ಶಿಷ್ಯಸೇವ್ಯ10ಸುರಗಂಧರ್ವಾಂಶರು ಬ್ಯಾಗವಟ್ಟೀಯವರುನರಸಿಂಹ ದಾಸರುಅವರಮಗನುಈ ಶ್ರೀನಿವಾಸನು ಕೇಳಿದ್ದ ಮೊದಲೇವೇಹರಿದಾಸವರ್ಯ ವಿಜಯಾರ್ಯರ ಪ್ರಭಾವ 11ಹರಿಭಕ್ತಾಗ್ರಣಿ ಪ್ರಹ್ಲಾದನ ಭ್ರಾತನುಧೀರ ಸಂಹ್ಲಾದನೆ ಈ ಧೀರ ಶ್ರೀನಿವಾಸಭಾರಿ ಸಾಧÀನೆ ಇವಗೆ ಒದಗಿಸ ಬೇಕೆಂದುಹರಿದಾಸವರ್ಯರು ಪೋದರು ಮಾನವಿಗೆ 12ಮಾನವಿಯಲ್ಲಿ ವಿಜಯಾರ್ಯರು ಮುಖಾಂ ಹಾಕಿಜನರಲ್ಲಿ ಹರಿಭಕ್ತಿ ಜ್ಞಾನ ಬೆಳಸುತ್ತದೀನರಿಗೆ ಯೋಗ್ಯ ವಾಂಛಿತವ ಒದಗಿಸುತ್ತಘನಮಹಿಮಹರಿಸೇವೆ ಮಾಡುತ್ತ ಇದ್ದರು13ಶ್ರೀನಿವಾಸಾಚಾರ್ಯನಿಗೆ ಉದ್ಧಾರ ಕಾಲವುಶ್ರೀನಿಧಿಯ ನಿಯಮನದಿ ಬಂದಿಹುದು ಎಂದುಶ್ರೀನಿವಾಸಾಚಾರ್ಯನಲಿ ಪೋಗಿ ವಿಜಯಾರ್ಯರುಬನ್ನಿರಿ ಹರಿಪ್ರಸಾದ ಕೊಳ್ಳಿರಿ ಎಂದರು 14ವಿಜಯದಾಸಾರ್ಯರ ಆಹ್ವಾನ ಲೆಕ್ಕಿಸದೆರಾಜಸದಿ ತಾನು ಪಂಡಿತನೆಂಬ ಗರ್ವದಿವಿಜಯಾರ್ಯರ ಕುರಿತು ಅವಜÕ ಮಾಡಿದನುಬೊಜ್ಜೆಯಲಿ ರೋಗವು ತನ್ನಿಮಿತ್ತ ಬಂತು 15ಸೋತ್ತಮಾಪರಾಧದಿಂ ವ್ಯಾಧಿ ಪೀಡಿತನಾಗಿಸೋತು ತತ್ ಪರಿಹಾರ ಯತ್ನ ಸರ್ವದಲೂಬಂದು ವಿಜಯಾರ್ಯರಲಿ ಶರಣಾಗಿ ಕ್ಷಮಿಸೆನ್ನೆಹಿತದಿಂದ ವಿಜಯಾರ್ಯರು ಕರುಣಿಸಿದರು 16ಗೋಪಾಲ ದಾಸರು ಉದ್ಧರಿಸುವರು ಪೋಗೆಂದುಕೃಪೆಯಿಂದಲಿ ವಿಜಯಾರ್ಯರು ಪೇಳಿ ಶ್ರೀನಿವಾಸಗೋಪಾಲದಾಸರಲಿ ಪೋಗಿ ಶರಣಾಗಲು ದಾಸಾರ್ಯರಲಿಶ್ರೀಪನ್ನ ಸ್ತುತಿಸೆ ಗುರುಗಳು ಒಲಿದರು ಆಗ 17ಗೋಪಾಲವಿಜಯವಿಠ್ಠಲನನ್ನ ವಿಜಯಾರ್ಯಸುಪವಿತ್ರ ಚೀಕಲಪರವಿಯಲಿ ಸ್ತುತಿಸೆಗೋಪಾಲ ದಾಸಾರ್ಯರು ಅರಿತು ಶ್ರೀನಿವಾಸನಿಗೆಉಪದೇಶ ಮಾಡಿದರು ತನ್ನಗುರುಪೇಳ್ದ ರೀತಿ18ಶ್ರೀನಿವಾಸಾಚಾರ್ಯರು ಗೋಪಾಲ ದಾಸಾರ್ಯರ ದಯದಿಪುನರಾರೋಗ್ಯ ಆಯುಷ್ಯವು ಹೊಂದಿಶ್ರೀನಿಧಿ ಭೀಮರತಿ ತೀರಸ್ಥ ವಿಠ್ಠಲನ್ನಸನ್ನಮಿಸಿ ಸಂಸ್ತುತಿಸಿ ಖ್ಯಾತರಾದರು ಜಗನ್ನಾಥ ದಾಸರೆಂದು 19ವಿಜಯನಗರಾದಿ ರಾಜ ಜಮೀನುದಾರಗಳುವಿಜಯರಾಯರನ್ನ ತಮ್ಮ ಸ್ಥಳಕ್ಕೆ ಕರೆತಂದುನಿಜಭಕ್ತಿಯಲಿ ಮರ್ಯಾದೆಗಳ ಮಾಡಿದರುವಿಜಯದಾಸರ ಮಹಿಮೆ ನೇರಲ್ಲಿ ಕಂಡು 20ತಿರುಗಿ ಬರುವಾಗ ಶ್ರೀದಾಸ ಮಹಂತರುಚಕ್ರತೀರ್ಥದಿ ಸತ್ರಯಾಗ ಮಾಡಿದರುಪುರಂದರದಾಸಾರ್ಯರು ಇದ್ದ ಸ್ಥಳ ಈ ಕ್ಷೇತ್ರಹರಿಶಿರಿಗೆ ಹನುಮಗೆ ಶಿವಗೆ ಆನಮಿಪೆ 21ಸತ್ರಯಾಗ ಕಾಲದಲಿ ಒಂದು ದಿನ ರಾತ್ರಿವಿಧವೆ ಓರ್ವಳು ತನ್ನ ಕಜ್ಜಿ ಮಗು ಸಹಿತನದಿಯಲ್ಲಿ ಬೀಳಲು ಯತ್ನಿಸಲು ಅದು ಕಂಡುಇತ್ತು ಅಭಯವ ವಿಜಯಾರ್ಯರು ಕಾಯ್ದರು 22ಭೀಮಪ್ಪನಾಯಕಧನವಂತ ಬ್ರಾಹ್ಮಣನಧರ್ಮಪತ್ನಿಯು ಆಕೆ ಪತಿಯ ಕಳಕೊಂಡ್ಲುತಾಮಸಪ್ರಚುರಮೈದುನ ಬಂದು ಬಹಳ ಕ್ರೂರಹಿಂಸೆ ಕೂಡಲು ನದಿಯೊಳು ಬೀಳೆ ಬಂದಿಹಳು 23ಸಾಧ್ವಿಯೂ ಆಕೆಯೂ ಶಿಶು ಮಹಾಭಾಗವತಎಂದು ಜ್ಞಾನ ದೃಷ್ಟಿಯಲಿ ಅರಿತರು ವಿಜಯಾರ್ಯಎಂಥವರು ಆದರೂ ಆತ್ಮಹತ್ಯೆ ಶಿಶುಹತ್ಯಯತ್ನ ತಡೆದು ರಕ್ಷಿಪುದು ಭೂತದಯವು 24ತಾಯಿಶಿಶು ಈರ್ವರನು ಮಠಕೆ ಕರಕೊಂಡು ಹೋಗಿಭಾರ್ಯೆ ಅರಳಿಯಮ್ಮ ಕೈಲಿ ಒಪ್ಪಿಸಿ ಆಕೆಹಯವದನ ಆಕೆಯ ಮೃತಮಗನ ಪ್ರತಿಯಾಗಿದಯದಿ ಕೊಟ್ಟಿಹ ಶಿಶುವ ಎಂದು ಪೋಷಿಸಿದಳು 25ಔದಾರ್ಯ ಕರುಣದಿ ಶಿಶುವನ್ನು ತಾಯಿಯನ್ನುಆದರಿಸಿ ದಾಸಾರ್ಯೆ ದಂಪತಿಯು ಮಗುವಹಿತದಿ ಮೋಹನನೆಂದು ಹೆಸರಿಟ್ಟು ಆಶಿಸಿಒದಗಿದರು ಇಹಪರಉದ್ಧಾರವಾಗೆ26ಯುಕ್ತ ಕಾಲದಿ ಮುಂಜಿ ಮದುವೆ ಮೋಹ ಮೋಹನನಿಗೆಶ್ರೀಕರನ್ನ ಅನುಗ್ರಹದಿ ಮಾಡಿಸಿ ಹರಿಯುಉತ್ಕøಷ್ಠ ನಾಮಾಂಕಿತ ಮೋಹನ ವಿಠಲ ಎಂದುಕೃಪಾಕರ ದಾಸಾರ್ಯರು ಇತ್ತರು ಮುದದಿ 27ಒಂದು ಸಮಯದಿ ಮೋಹನನಿಗೆ ಅಪಮೃತ್ಯು ಬರಲಿರಲುಶ್ರೀ ದಾಸರಾಯರು ಮೊದಲೇ ಹೇಳಿದರುಶ್ರೀ ಬಿಂದು ಮಾಧವನ್ನು ಸೇವಿಸೆ ಹೋಗಿ ನಾ ಬರುವೆಮೃತನಾದ ದೇಹವ ಕಾಪಾಡು ಹರಿಯ ಸ್ಮರಿಸೆಂದು 28ಅದರಂತೆ ಮೋಹನಗೆ ಅಪಮೃತ್ಯು ಸೋಕಲುಸಾಧ್ವಿಸತಿ ದೇಹವ ಹೊರತಂದು ರಕ್ಷಿಸೆಕದನಗೈದು ಓರ್ವ ಸಾಗಿಸಲು ಯತ್ನಿಸೆಸತಿಯು ವಿಜಯಾರ್ಯರನ್ನು ಸ್ಮರಿಸಿ ಮೊರೆಯಿಟ್ಟಳು 29ಶ್ರಿಬಿಂದುಮಾಧವನ್ನ ಸೇವಿಸಿ ದಾಸಾರ್ಯರುತಾಪೋಗಿ ಧರ್ಮರಾಜನಲಿ ಅರಿಕೆ ಮಾಡಿಕ್ಷಿಪ್ರದಲಿಅಸುತಿರುಗಿ ತÀರಿಸಿ ಬದುಕಿಸಿದರುಆರ್ಭಟದಿ ಬಲುತ್ಕಾರ ಮಾಡಿದವ ಬಿದ್ದ 30ಈ ರೀತಿ ಅಪಮೃತ್ಯು ಪರಿಹರಿಸಿದ್ದನ್ನಕೇಳಿಮೋಹನಭಾರಿ ಕರುಣಾಳು ವಿಜಯಾರ್ಯರ ಸ್ತುತಿಸಿಉತ್ಕøಷ್ಟ ಕೀರ್ತನೆ ಹಾಡಿರುವುದು ಲೋಕಅರಿವುದು ಅದ್ಯಾಪಿ ಹೋಗಳುವರು ಜನರು 31ಶ್ರೀ ವಿಜಯದಾಸರ ಅನುಗ್ರಹದಿ ಮೋಹನಕೋವಿದವರ್ಯನು ಶ್ರುತಿಯುಕ್ತ ಯುತವಾದತತ್ವಬೋಧಕ ಕೀರ್ತನೆಗಳು ಶ್ರೀಹರಿಯಅವತಾರಲೀಲಾನು ವರ್ಣನ ಮಾಡಿಹರು 32ರಾಜೀವಾಸನ ಪಿತ ಪ್ರಸನ್ನ ಶ್ರೀನಿವಾಸ ಶ್ರೀರಾಜೀವಾಲಯ ಪತಿಗೆ ಪ್ರಿಯಕರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣು ಶರಣಾದೆ 33- ಇತಿ ಚತುರ್ಥಾಧ್ಯಾಯ ಸಮಾಪ್ತಿ -ಪಂಚಮ ಅಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿವಿನುತಶಿರಿವರಸರ್ವೋತ್ತಮನೆ ಪ್ರಿಯತರ ದಾಸಾರ್ಯ ಪವಿಜಯದಾಸಾರ್ಯರು ದೇವ ವೃಂದದವರೆಂದುನಿಜವಾಗಿ ಅರಿವುದಕೆ ಇತಿಹಾಸ ಬಹು ಉಂಟುನಿಜಭಕ್ತರಲ್ಲದೆ ಪಾಮರರು ಸಹ ಅರಿತಸಜ್ಜನರು ಹೊಗಳುವ ಇತಿಹಾಸಕೇಳಿ1ಬಾಲ ವಿಧವೆಯುಕರ್ಮಸುಳಿಯಲ್ಲಿ ಸಿಲುಕಿಬಲು ನೀಚ ವೃತ್ತಿಯವಳಂತೆ ತೋರಿಕಲುಷವಂತಳು ಎಂದು ಬಹಿಷ್ಕøತಳಾದವಳಆಲಯದಿ ವಿಜಯಾರ್ಯ ಕೊಂಡರು ಅವತನವ 2ತಮ್ಮ ಆಹ್ವಾನವ ಲೆಕ್ಕಿಸದೆ ಮೊದಲೇ ಈಆಧಮಳ ಆಹ್ವಾನ ಮನ್ನಣೆÉ ಮಾಡಿಆ ಮನೆಯಲ್ಲಿ ಪೂಜಾನೈವೇದ್ಯ ಮಾಡಿದರೆಂದುಶ್ರೀಮಠದ ಭೂಸುರರು ಕೋಪ ಹೊಂದಿದರು 3ಶ್ರೀವರನು ವಿಧಿವಾಯು ಅಮರ ಶ್ರೇಷ್ಠರ ಸಹಯಾವ ದಾಸಾರ್ಯರಲಿ ಪ್ರಚುರನಾಗಿಹನೋಯಾರನ್ನ ಸ್ಮರಿಸಲು ದುರಿತಹರ ಪುಣ್ಯದವೋಅವರು ಭೋಜನ ಮಾಡುತಿರೆ ನಿಂತಳು ಬಾಲೆ 4ಮಹಾನ್ ದಾಸರಿಗೆ ಆಕೆ ಮಾಡಿಸಿದ ಪೂಜೆಯಿಂದೇಹಜದುರಿತಗಳು ಪರಿಹಾರವಾಗಿಶ್ರೀ ಹರಿಯದಾಸರಿಗೆ ಮನಸಾ ಸನ್ನಮಿಸಿದೇಹೇಂದ್ರಿಯಗಳ ಲಯವ ಚಿಂತಿಸಿದಳು 5ದಾಸಾರ್ಯರು ಭೋಜನವ ಪೂರೈಸಲುಅಸುಆಕೆಗಾತ್ರಬಿಟ್ಟು ಹೊರಟು ಹೋಯಿತುದಾಸವರ್ಯರು ತಾವೇ ಆಕೆಗೆ ಸಂಸ್ಕಾರಶ್ರೀಶಹರಿಪ್ರೀತಿಯಾಗಲಿಕೆ ಮಾಡಿದರು6ದೂಷಿತ ಬಹಿಷ್ಕøತ ಸ್ತ್ರೀ ಮನೆಯಲ್ಲಿ ಉಂಡುದೂಷಣಾರ್ಹ ಕ್ರಿಯಾ ಚರಿಸಿಹರು ಎಂದುದೀಕ್ಷಾ ಪ್ರವರ್ಧಕ ಶ್ರೀ ಮಠಾಧಿಕಾರಿಗಳುಬಹಿಷ್ಕಾರ ಮಾಡಿದರಂತೆ ದಾಸಾರ್ಯರಿಗೆ 7ತಪೋನಿಧಿಗಳುಸೂರಿವರಸ್ವಾಮಿಗಳುಶ್ರೀಪನ್ನ ಪೂಜಿಸಿ ಪ್ರತಿಮೆಯಲ್ಲಿಅಪರೋಕ್ಷಜ್ಞಾನದಿ ಸರ್ವವ ಅರಿತುಶ್ರೀಪ ಪ್ರಿಯ ವಿಜಯಾರ್ಯರನ್ನು ಬರಮಾಡಿದರು 8ಜ್ಞಾನಿವರ್ಯ ದಾಸಾರ್ಯರು ಇದು ಮೊದಲೇ ಅರಿತುತನ್ನ ಶಿಷ್ಯರೊಡೆ ಹೇಳೆ ಆಹ್ವಾನ ಬಂದುತನ್ನವರ ಸಹ ಶ್ರೀ ಮಠಕೆ ಪೋಗಿ ಸ್ವಾಮಿಗಳಅನುಗ್ರಹ ಹೊಂದಿ ಸಂಭಾಷಿಸಿದರು ಮುದದಿ 9ಪ್ರತಿಮೆಯಲಿ ಶ್ರೀಹರಿಯ ಸಾನ್ನಿಧ್ಯ ಲಕ್ಷಣವೇದ್ಯವಾಗುವಿಕೆ ದಾಸಾರ್ಯರು ಒದಗಲಿಕ್ಕೇ ಎಂದುಸುತಪೋನಿಧಿ ಸ್ವಾಮಿಗಳು ಹೇಳಿ ದಾಸಾರ್ಯರುಇಂದಿರೇಶ ಸುಪ್ರಚುರ ವ್ಯಾಪ್ತನೂ ಎಂದರು 10ಪ್ರತಿಮೆಯಲಿ ಹಿಂದಿನ ದಿನಕ್ಕಿಂತ ಆಗಆದಿಯಂತೇವೆಯೇ ಶ್ರೀಯಃಪತಿ ಜ್ವಲಿಸಿಮುದಮನದಿ ಶ್ರೀಗಳು ಪೂಜಾದಿ ಪೂರೈಸಿಕೇಳ್ದರು ದಾಸರನ್ನ ಬಾಲೆಯ ವೃತ್ತಾಂತವ 11ದಾಸವರ್ಯರು ಹೇಳಿದರು ಆ ಬಾಲೆಯುಸುಮನಸವೃಂದದಿ ಓರ್ವಳು ಪೂರ್ವವಸುಧೆಯಲಿ ಪುಟ್ಟುವೆನು ಎನ್ನನುದ್ಧರಿಸಿರಿವಾತ್ಸಲ್ಯದಿ ಎಂದು ಬೇಡಿದ್ದಳೆಂದು 12ತತ್ಕಾಲ ಮುಗಿಯಬೇಕಾದ ಪ್ರಾರಬ್ಧಕರ್ಮಆಕೆಗೆ ಮುಗಿಯುವ ಸಮಯ ವಿಜಯಾರ್ಯಆಕೆ ಮನೆಗೆ ಹೋಗಿ ಸಾಧನ ಸಂಪತ್ತೊದಗಿಆಕೆಗೆ ಗತಿಯ ಕಲ್ಪಿಸಿಹರು ದಯದಿ 13ಪ್ರಾರಬ್ಧ ಕಳೆಯಲಿಕೋ ಶಾಪ ನಿಮಿತ್ತವೋಸುರರುಭುವಿಯಲ್ಲಿ ಪುಟ್ಟಿ ಒಮ್ಮೊಮ್ಮೆ ನಿಷಿದ್ದಕರ್ಮಚರಿಸಿದರೂ ಪಾಪ ಲೇಪವಾಗವುಇತರರಿಗೆ ಲೇಪವುಂಟುಹರಿಪರಾನ್ಮುಖರ್ಗೆ14ಹರಿಗೆ ಪ್ರಿಯಕರ ವಿಜಯರಾಯ ಪ್ರಭಾವತೋರಿಸಿದ ಈವೃತ್ತಾಂತದಿಕ್ಕು ದಿಕ್ಕುಹರಡಿತು ಜನರೆಲ್ಲ ವಿಜಯದಾಸಾರ್ಯರುಸುರರೇವೇ ನರರಲ್ಲೆಂದು ನಿಶ್ಚಯಿಸಿದರು 15ತಿರುಪತಿಯಲ್ಲಿ ಶ್ರೀ ಶ್ರೀನಿವಾಸನ ರಥದಾರಿಯಲ್ಲಿ ನಿಲ್ಲಲು ವಿಜಯದಾಸಾರ್ಯರುಹರಿತತ್ವ ಮಹಿಮೆಯ ಕವನ ರೂಪದಿ ಸ್ತುತಿಸೆಗರುಡ ಗಮನನು ರಥದಿ ಸರಸರನೆ ಬಂದ 16ಮೂರುಬಾರಿಕಾಶಿಗೆ ಹೋದಾಗಲೂ ಗಂಗೆಅರಿತು ಭೃಗುಮುನಿ ಅವತಾರವೆಂದುಹರುಷ ತೋರಿ ಉಕ್ಕಿದಳು ಭೃಗು ವಿಜಯರಾಯರುವರಅತಿಥಿ ಶಿವತಾತ ಪ್ರಿಯರೆಂದು17ವೇದ ವೇದಾಂತ ಪುರಾಣಾರ್ಥ ರಹಸ್ಯಗಳುಸದಾಗಮ ಸರ್ವರ್ಥಗಳ ಸಾರೋದ್ಧಾರವುಈ ದಾಸ ಮಹಂತರ ಗ್ರಂಥ ಸುಳಾದಿಗಳುಓದಿ ಕೇಳ್ವವರಿಗೆ ಇಹಪರಉದ್ಧಾರ18ಇಂದ್ರಾದಿ ಜಗದ್ಗುರು ಸದಾಶಿವನ್ನ ಸೇವಿಸುತ್ತರುದ್ರಾಂತರ್ಯಾಮಿ ನರಹರಿಯ ಅರ್ಚಿಸುತ್ತವಂದಿಸುತ್ತ ಚಿಪ್ಪಗಿರಿ ವಾಸಿಷ್ಠ ವಿಜಯವಿಠ್ಠಲ ಕೃಷ್ಣನ್ನಹೊಂದಿದರು ದಾನವಾಗಿ ಆಕ್ಷೇತ್ರವನ್ನು ಮೂರ್ತಿಯನ್ನು 19ಪಾಲಸಾಗರಪೋಲು ಆ ವಾಪಿ ಸುಪವಿತ್ರತಟದಲ್ಲಿಯೇ ವಾಸಸ್ಥಾನ ಮಾಡಿಕೊಂಡುಅಲ್ಲೇ ಇದ್ದರು ದಾಸಾರ್ಯರು ಪಾಠ ಪ್ರವಚನ ಭಜನೆಮಾಲೋಲ ಸುಪ್ರೀತಿಕರವಾಗಿ ಮಾಡುತ್ತ 20ಮೋದಮಯ ಶ್ರೀ ಶ್ರೀನಿವಾಸನ್ನ ಸೇವಿಸುತಮೇದಿನಿಯಲಿ ಸುಜರನ್ನ ಉದ್ಧರಿಸಿಕಾರ್ತೀಕ ಶುಧ್ಧ ದಶಮಿಯಲ್ಲಿ ಸ್ವಸ್ಥಾನಯೈದಿದರು ಹರಿಪಾದ ಧ್ಯಾನಿಸುತ್ತ ಧೀರ 21ವಿಜಯರಾಯರ ನೆನೆದರೆ ಆಯುಷ್ಯ ಆರೋಗ್ಯಶ್ರೀನಿಜಭಕ್ತಿ ಜ್ಞಾನವುವಿಜಯಎಲ್ಲೆಲ್ಲೂವಿಜಯದಾಸಾಂತಸ್ಥ ಮಧ್ವಾಂತರ್ಗತ ಶ್ರೀಶವಿಜಯಸಾರಥಿ ಶ್ರೀನಿವಾಸನುಈವ22ಧೀರ ಭಕ್ತಾಗ್ರಣಿ ಶ್ರೀಮದ್ ಗುರುವರ್ಯರುಭೂರಿಕರುಣಿಯು ಗೋಪಾಲದಾಸಾರ್ಯಹರಿದಾಸವರ ಹಯವದನ ವಿಠ್ಠಲವಿರಾಗಿ ವೇಣುಗೋಪಾಲ ಜಗನ್ನಾಥದಾಸರು 23ಹರಿದಾಸ ವೃಂದದಿ ಖ್ಯಾತ ಸೂರಿಗಳೆಲ್ಲರೂಗುರುಶ್ರೀಶ ವಿಠ್ಠಲಾಂಕಿತ ಕುಂಠೋಜಿ ಆರ್ಯಶ್ರೀ ರಘುಪತಿ ವಿಠ್ಠಲ ಇಂಥ ಸರ್ವರೂನೂಪರಿಪರಿ ವಿಧದಿ ಸ್ತುತಿಸಿಹರು ವಿಜಯಾರ್ಯರನ್ನ 24ವಿಜಯಾರ್ಯ ರಕ್ಷಿತ ಪೋಷಿತ ಉಪದಿಷ್ಟನಿಜದಾಸವರ್ಯ ಮೋಹನ್ನ ದಾಸಾರ್ಯವಿಜಯದಾಸಾರ್ಯನುಗ್ರಹದಿ ಬಹುಕವನಗಳಭುಜಗಭೂಷಣ ಈಡ್ಯನ್ನ ಸ್ತುತಿಸಿ ರಚಿಸಿಹರು25ಉತ್ತಮಶ್ಲೋಕ ಸ್ತುತಿಶತ ಸಹಕೀರ್ತನೆಗಳ್ಭಕ್ತಿಜ್ಞಾನ ವರ್ಧಿಪುದು ಮಹಾನ್ ಮೋಹನ್ನ ರಚಿಸಿದ್ದುಗ್ರಂಥಗಳುಪಂಡಿತಪಾಮರರಿಗೂ ಸಹ ಸುಬೋಧಕವುಸುಧಾರಸ ಪೋಲು ಹಾಡಿ ರಸಿಕರೇ ಪಠಿಸಿ 26ನಿರ್ಮತ್ಸರ ಸಾತ್ವಿಕನು ಹರಿಭಕ್ತನುವಿಮಲ ಹರಿದಾಸ ಸಾಹಿತ್ಯ ಸೂತ್ರಭಾಷ್ಯಕ್ರಮದಿ ಕಲಿತ ಆನಂದಾಚಾರ್ಯ ಎನ್ನಲಿ ಬಂದುಪ್ರೇಮದಿಂ ಪಠಿಸೆ ನಾಕೇಳಿಸುಖಿಸಿಹೆನು27ಪ್ರಸನ್ನರಾಮ ಶ್ರೀನಿವಾಸಅಖಿಳಸದ್ಗುಣನಿಧಿಯೇದೋಷದೂರನೇ ಗುರಗ ದಯದಿ ಸಲಹೋ ಇವನ್ನದಾಸದೀಕ್ಷೆ ಜ್ಞಾನ ಪ್ರವಚನ ಪಟುತ್ವವೀಯೋಕುಸುಮಭವ ಪಿತ ನಮೋ ಶ್ರೀ ಪ್ರಸನ್ನ ಶ್ರೀನಿವಾಸ 28 ಪ- ಇತಿ ಪಂಚಮೋದ್ಯಾಯ ಸಮಾಪ್ತ-
--------------
ಪ್ರಸನ್ನ ಶ್ರೀನಿವಾಸದಾಸರು