ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬರಿದಿದೇಕೆಲೋ ನಿನ್ನಂತರಿರವು ಸಿರಿಯರರಸ ಅರಿಯನೇನೆಲೋ ಪ ಮರೆಯ ಮೋಸದಿ ಕುಕ್ಕಲು ಮೀನ ಹರಿವ ಉದಕದಿ ಬಕನು ಮೌನ ಧರಿಸಿದಂದದಿ ಪರಮಮೌನ ಧರಿಸಿ ಕುಳಿತು ಮರುಳುಗೊಳಿಸಿ ಪರರ ಕೊರಳ ಮುರಿವ ದುರುಳತನದ ಕೃತಿಗೆ ಹರಿಯು ಒಲಿಯುವನೇನು ಮರುಳೆ1 ಕಪಟ ನೀಗದೆ ಹುಚ್ಚು ಬಿಡದೆ ಗುಪಿತ ತಿಳಿಸದೆ ಮುಚ್ಚಿ ಕಣ್ಣು ತಪಸಿಯಂದದಿ ಕುಪಿತ ಮಾನಿಸನಾಗಿ ಕುಳಿತು ತಪಸಿಯಂತೆ ತೋರಿ ಜನರ ಅಪಾಯಮಾಳ್ಪ ಕಪಟವೇಷಕೆ ಸುಫಲ ದೊರೆಯುವುದೇನು ಮರುಳೆ 2 ಉದಯದೇಳುತ ಓಡಿ ಹೋಗಿ ನದಿಯ ಮುಳುಗುತ ತೀಡಿಗಂಧ ಹದದಿ ಬರೆಯುತ ವಿಧವಿಧಮಂತ್ರೊದರಿ ಇತರರ ಸದನ ಮುರಿದು ಸತಿಯ ಸುತರ ಮುದದಿ ಪೊರೆವ ಅಧಮ ವ್ರತಕೆ ಸದಮಲಾಂಗೊಲಿವನೆ ಮರುಳೆ 3 ಕಪಟ ನೀಗದೆ ಜಟೆಯ ಬೆಳಸಿನ್ನು ಚಪಲತನದಿಂ ದುಟ್ಟು ಕೌಪೀನ ನಿಟಿಲದಲ್ಲಿ ಭಸ್ಮಧರಿಸಿ ನಟಿಸಿ ಸಾಧುವರ್ತನದಿಂ ದ್ಹೊಟ್ಟೆ ಹೊರೆವ ಭ್ರಷ್ಟತನಕೆ ಕೆಟ್ಟ ಬವಣಳಿಯುವುದೆ ಮರುಳೆ 4 ತತ್ವದರ್ಥವ ಬೋಧಿಸುತ್ತ ಭೃತ್ಯ ಸಮೂಹವ ಸಂಪಾದಿಸುತ್ತ ನಿತ್ಯಸತ್ಯವ ವಿತ್ತದಾಸೆಗುತ್ತರಿಸುವಸತ್ಯಭ್ರಷ್ಟ ವರ್ತನಕೆ ಮುಕ್ತಿದಾಯಕ ಸಿರಿಯರಾಮ ಮುಕ್ತಿಸುಖ ನೀಡುವನೆ ಮರುಳೆ 5
--------------
ರಾಮದಾಸರು