ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೇಲಿದೆ ಅಯ್ಯಾ ತೇಲಿದೆ ಪ ತೇಲಿಬಾರದಂಥ ಸುಳಿಯ ಮಡುವುಮುಳುಗಿ ನೀಲಶಾಮನ ಪಾದಕಮಲಕರುಣದಿಂದ ಅ.ಪ ಪಾರಾವಾರಿಲ್ಲದ ಮಡುವು ಕಾಲು ಜಾರಿ ಬಿದ್ದಿದ್ದೆ ತಪ್ಪಿದಡವು ಬಲು ಮೇರೆದಪ್ಪಿದ ತೆರೆ ಸೆಳವು ಉಲಿ ದ್ಹಾರಿಬರುವ ಜಲಚರವು ಆಹ ಮೀರಿದಂಧಕಾರ ನೀರಿನ ಸುಳಿಯೊಳು ಘೋರಬಡುತಲಿರ್ದೆ ಮುಳುಮುಳುಗೇಳುತ 1 ತಂಡತಂಡದಿ ಒದಗುವ ಬಲು ಗಂಡಸುಳಿಯು ತಿರುಗುವ ಒಳ ಗೊಂಡ ಮತ್ಸ್ಯಮಕರಿಭಯವ ಆಹ ಕಂಡು ಕಾಣದೆ ಬಿದ್ದು ಗುಂಡಿಗೊಡೆದು ನಾನು ಬೆಂಡಾದೆ ಕಂಗೆಟ್ಟು ಮುಳುಮುಳುಗೇಳುತ 2 ಹಿಂದಕ್ಕೆ ಏನಾದದ್ದಾಯ್ತು ಶ್ರೀಶ ಮುಂದೆ ಎನ್ನಗೆ ಇಂಥ ಹೊತ್ತು ಈಶ ಎಂದೆಂದು ತರದಿರು ಮತ್ತು ಕೇಶ ಕಂದನ ಸನ್ಮಾರ್ಗಕ್ಹೊತ್ತು ಆಹ ಸಿಂಧುಶಯನ ಎನ್ನ ತಂದೆ ಶ್ರೀರಾಮ ನಿನ್ನ ಬಂಧುರಂಘ್ರಿಯ ಕೃಪೆಯಿಂದ ನಾ ಉಳಕೊಂಡೆ 3
--------------
ರಾಮದಾಸರು
ಬಯಸಿ ಕರೆದರೆ ಬರುವರೇನಯ್ಯಾ ನರಹರಿಯ ದಾಸರು ಬಯಸಿ ಕರೆದರೆ ಬರುವರೇನಯ್ಯಾ ಪ ಬಯಸಿಕರೆದರೆ ಬರುವರೇನೋ ಜಯಶ್ರೀ ಮುರಹರಿಯ ನಾಮ ಓದಿ ಕಳೆದುಕೊಂಡ ಶೂರರು ಅ.ಪ ಮಹ ವಿಷಯಲಂಪಟ ಬಿನುಗು ತ್ರಿಗುಣೆಂಬ್ಹೇಸಿಕೆಯ ಬಳಿದು ಸುಸ್ಸಂಗಶ್ರವಣ ಮನನದಿಂ ನಿಜಮೂಲ ಮರ್ಮರಿದು ಆಸನವ ಬಲಿದು ಲೇಖ್ಯದಮೇಲೆ ಘನ ಅನಂದದಿರುವರು 1 ಆರು ದ್ವಯಗಜ ಇಕ್ಕಡಿಯ ಗೈದು ಬಿಡದ್ಹಾರಿಬರುವ ಆರು ಹುಲಿಗಳ ತಾರ ಸೀಳೊಗೆದು ಬಲುಘೋರಬಡಿಪ ಆರುನಾಲ್ಕು ಶುನಕಗಳು ತುಳಿದು ಸತ್ಪಥವ ಪಿಡಿದು ಸಾರಾಸಾರ ಸುವಿಚಾರಪರರಾಗಿ ಮಾರನಯ್ಯನ - ಪಾರಮಹಿಮೆಯ ಅಮೃತ ಪೀರುವವರು 2 ತಾಸಿನ ಜಗಮಾಯವೆಂದರಿದು ಇದು ಸತ್ಯವಲ್ಲೆಂದು ಬೇಸರಿಲ್ಲದೆನುಭವದಿ ದಿನಗಳೆದು ಸುಚಿಂತದನುದಿನ ದಾಸದಾಸರ ಸಾಕ್ಷಿಗಳ ತಿಳಿದು ನಿಜಧ್ಯಾಸದ್ಹುಡಿಕ್ಹಿಡಿದು ನಾಶನಭವದ್ವಾಸನೆಯ ನೀಗಿ ಸಾಸಿರನಾಮದೊಡೆಯ ನಮ್ಮ ಶ್ರೀಶ ಶ್ರೀರಾಮಚರಣಕಮಲದಾಸರಾಗಿ ಸಂತೋಷದಿರುವರು 3
--------------
ರಾಮದಾಸರು