ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯವದೋರೋ ದೇವ ಭಕುತ ಭಯನಿವಾರ ಅಭವ ಪ ದಯವದೋರೋ ನಿನ್ನ ಪಾವನಪಾದ ಸು ಸೇವಕ ಜನಮಹಜೀವ ಜಾನಕೀಧವ ಅ.ಪ ಪಾಪಗೆಲಿಯ ಬಂದೆ ಸಂಸಾರ ಕೂಪದೊಳಗೆ ನಿಂದೆ ಕೋಪಜ್ವಾಲದಿ ಬೆಂದೆ ವಿಷಯ ತಾಪತ್ರಯದಿನೊಂದೆ ಆ ಪರಲೋಕದ ವ್ಯಾಪಾರ ಮರೆದಿಹ್ಯ ದ್ವ್ಯಾಪಕನಾಗಿ ಬಲುತಾಪಬಡುವೆ ತಂದೆ 1 ಅಂಗಮೋಹವ ಬಿಡಿಸೋ ನಿನ್ನವರ ಸಂಗವ ಕರುಣಿಸೊ ಭಂಗವ ಪರಹರಿಸೊ ಜಗದವ ರ್ಹಂಗಹನು ತಪ್ಪಿಸೊ ಮಂಗಳಾತ್ಮ ನಿನ್ನ ಮಂಗಳಾಮೂರ್ತಿ ಎನ್ನ ಕಂಗಳೋಳ್ನಿಲ್ಲಿಸಿ ಹಿಂಗದಾನಂದ ನೀಡು 2 ದೋಷದಾರಿದ್ರ್ಯ ಹರಿಸೊ ಮನದ ಅಶಾಪಾಶ ಬಿಡಿಸೊ ಹೇಸಿಪ್ರಪಂಚ ಗೆಲಿಸೊ ಸುಜನರಾ ವಾಸ ತೀವ್ರ ಪಾಲಿಸೊ ದೋಷನಾಶ ಜಗದೀಶ ಶ್ರೀರಾಮ ನಿನ್ನ ದಾಸಾನುದಾಸೆನಿಸಿ ಪೋಷಿಸು ಸತತ 3
--------------
ರಾಮದಾಸರು