ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ಅಂಜಬ್ಯಾಡ ಅಂಜಬ್ಯಾಡೆಲೋ ಜೀವ ಭವ ಭಂಜನ ಹರಿ ಶರಣರ ಕಾವಾ ಪ ಮಾತ ಹೇಳುವೆ ನಿನಗೊಂದ ಪರರಜ್ಯೋತಿ ಕಾಣುವತನಕೀ ಬಂಧ ಭೂತ ಭೇತಾಳಗಳಿಂದ ನಿನಗೆ ಭೀತಿ ಪುಟ್ಟಲಿಲ್ಲೋ ಮತಿಮಂದ 1 ಛೇದ ಭೇದಗಳು ನಿನಗೆಲ್ಲಿ ನೀ ಅ- ನಾದಿ ನಿತ್ಯವೆಂಬುದ ಬಲ್ಲಿ ವೇದ ಬಾಹ್ಯರಾಗದೆ ಇಲ್ಲಿ ಹರಿ ಪಾದ ಇನ್ಯಾಕೆ ಪೂಜಿಸಲೊಲ್ಲಿ 2 ನೀನು ನಿನ್ನದು ಅಲ್ಲವೋ ನೋಡಾ ದೇಹ ನಾನು ನನ್ನದೆಂಬರೋ ಮೂಢಾ ಮಾನಹಾನಿ ಮಾಡಿಕೊಳಬೇಡ ಬಿಡು ಸಾನುಬಂಧಿಗಳ ಸ್ನೇಹವ ಗಾಢ 3 ಅಹಿತಾದಿ ವಿಭೂತಿಯ ನೋಡೋ ಸೋಹಂ ಎಂಬರೆ ವಿಘಾತಿಯ ನೇಹವ ಪಡೆವರೆ ಗೀತೆಯ ಕೇಳಿ ಮೋಹವ ಕಳಕೋ ವಿಜಾತಿಯ 4 ಮಧ್ವವಲ್ಲಭ ಮಾಡಿದ ಗ್ರಂಥ ದೊಳಗದ್ವೈತತ್ರಯ ತಿಳಿದಂಥ ವಿದ್ವಾಂಸರು ಚರಿಸುವ ಪಂಥವನ್ನು ಸದ್ಭಕ್ತಿಲಿ ಸಾಧಿಸು ಭ್ರಾಂತ 5 ಜಾಗರ ಸ್ವಪ್ನ ಸುಷುಪ್ತಿಗಳೊಳು ವರ ಭೋಗಿಶಯನನ ರೂಪಗಳೇಳು ಭಾಗವತ ಬಲ್ಲವರ ಕೇಳು ಬೃಹ- ದ್ಯಾಗವ ಹರಿಗರ್ಪಿಸಿ ಬಾಳು 6 ಪಂಚಾತುಮ ಸಿಲುಕವ ಷಟ್ ಪಂಚ ಪಂಚಿಕೆಗಳ ಕರ್ಮವ ಮೀಟಿ ಪಂಚಿಕೆ ತಿಳಿದುಕೊಂಡರೆ ನಿಷ್ಪ್ರ ಪಂಚನಾಗಿ ನೀ ಕಡೆದಾಟಿ7 ಜ್ಞಾನೇಚ್ಛಾ ಕ್ರಿಯಾ ಶಕ್ತಿಗಳೆಂಬ ಈ ಮ- ಹಾನುಭಾವದಿ ನಿನ್ನ ಬಿಂಬ ತಾನೇ ಸರ್ವತ್ರದಲಿ ಕಾಂಬ ಇದ- ಕೇನು ಸಂದೇಹವಿಲ್ಲವೋ ಶುಂಭ 8 ತಾಪತ್ರಯಂಗಳು ನಿನಗೆಲ್ಲಿ ಪುಣ್ಯ ಪಾಪಕ್ಕೆ ಲೇಪನಾಗೋಕೆ ಹೊಲ್ಲ ಪ್ರಾಪಕ ಸ್ಥಾಪಕ ಹರಿಯೆಲ್ಲ ಜಗ ದ್ವ್ಯಾಪಕನೆಂದರಿತರೆ ಕೊಲ್ಲ 9 ಡಿಂಭದೊಳಗೆ ಚೇತನವಿಟ್ಟು ಜಗ- ದಂಬಾರಮಣ ಮಾಡಿದ ಕಟ್ಟು ಉಂಬುಡುವ ಕ್ರಿಯೆಗಳನಷ್ಟು ನಿನ್ನ ಬಿಂಬನಾಧೀನನಾದರೆ ಇಷ್ಟ 10 ಲಕ್ಕುಮಿ ಅವನ ಪಟ್ಟದ ರಾಣಿ ದೇ- ವರ್ಕಳು ಪರಿಚಾರಕ ಶ್ರೇಣಿ ವಕ್ಕಲು ನಾವೆಲ್ಲರು ಪ್ರಾಣಿ ದಶ- ದಿಕ್ಕುನಾಳುವ ನಮ್ಮ ದೊರೆಯ ನೀ 11 ಮತ್ರ್ಯಲೋಕದ ಸಂಪದ ಪೊಳ್ಳು ಜಗ ಮಿಥ್ಯಮತವೆಂದಿಗು ಜೊಳ್ಳು ಶ್ರುತ್ಯನ್ನರ್ಥ ಪೇಳ್ವದೇ ಸುಳ್ಳು ನೀ ಭೃತ್ಯನು ಕರ್ತನಾಗದಿರೆಲೋ ಕೇಳು12 ಮಾಧವನಲಿ ತನುಮನ ಮೆಚ್ಚು ಕ್ರೋಧರೂಪದ ಕಲಿಮಲ ಕೊಚ್ಚು ಮೋದತೀರ್ಥರ ವಚನವ ಮೆಚ್ಚು ವಾದಿ ಮತಕ್ಕೆ ಬೆಂಕಿಯ ಹಚ್ಚು 13 ಸವಿವುಳ್ಳರೆ ಕೇಳೆನ್ನಯ ಸೊಲ್ಲ ನಮ್ಮ ಪವನನಯ್ಯನ ಪ್ರೇರಣೆಯಿಲ್ಲ ಎವೆಯಿಕ್ಕಲರಿಯದೀ ಜಗವೆಲ್ಲ ಎಂದು ಶಿವ ತನ್ನ ಸತಿಗೆ ಹೇಳಿದನಲ್ಲ 14 ಧ್ರುವ ಬಲ್ಯಾದಿ ರಾಯರ ನೋಡು ನಿನ್ನ ಅವಗುಣಗಳನೆಲ್ಲಾ ಈಡ್ಯಾಡೋ ಅವಶ್ಯವಾಗಿ ಕರ್ಮವ ಮಾಡೋ ಮಾ- ಧವ ನಿನ್ನವನೆಂದು ನಲಿದಾಡೋ 15 ನಿಂದಾ ಸ್ತುತಿಗಳ ತಾಳಿಕೋ ಬಲು ಸಂದೇಹ ಬಂದಲ್ಲಿ ಕೇಳಿಕೋ ಬಂದವರಿಂದಲಿ ಬಾಳಿಕೋ ಗೋ- ವಿಂದ ನಿನ್ನವನೆಂದು ಹೇಳಿಕೋ 16 ತತ್ವವಿಚಾರವ ಮಾಡಿಕೋ ನಿನ್ನ ಭಕ್ತಿಯ ಆಳವ ಅಳಿದುಕೋ ಮಾಯಾ ಮೋಹ ಕಳೆದುಕೋ ನಿನ್ನ ಹತ್ತಿರ ಹರಿಯಿರುವ ನೋಡಿಕೋ 17 ಹಿಂಡು ದೈವಗಳಿಂದ್ಹಿರಿಯನೀತ ತನ್ನ ತೊಂಡನೆಂದದವರಿಗೆ ತಾ ಸೋತಾ ದಂಡಿಸಿ ದಯಮಾಡುವ ದಾತಾ ಭೂ- ಮಂಡಲದೊಳಗೆಲ್ಲ ಪ್ರಣ್ಯತಾ 18 ನಾಡ ಖೋಡಿ ದೈವಗಳಂತೆ ತನ್ನ ಬೇಡಲು ತಾ ಬೇಡಿಕೊಳನಂತೆ ನೀಡುವ ನಿಖಿಳಾರ್ಥವದಂತೆ ನಿಜ ನೋಡಿಕೋ ನಿನಗ್ಯಾತರ ಚಿಂತೆ 19 ಏನು ಕೊಟ್ಟರೆ ಕೈಚಾಚುವ ತನ್ನಾ- ಧೀನವೆಂದರೆ ನಸುನಾಚುವಾ ದಾನವ ಕೊಡಲೂರಿ ಗೀಚುವ ತನ್ನಲಿ ತಾನೇವೇ ಮನದೊಳು ಸೂಚುವ20 ಕರಕರದಲ್ಲಿ ತಾ ಬರುವಾನು ಮರತುಬಿಟ್ಟವರ ತಾ ಮರೆಯಾನು ನಿಜ ಶರಣರ ಕಾದುಕೊಂಡಿರುವಾನು ತನ್ನ ಸರಿಯಂದವರ ಹಲ್ಲು ಮುರಿದಾನು 21 ಆರು ಮುನಿದು ಮಾಡುವದೇನು ಪ್ರೇರ್ಯ ಪ್ರೇರಕರೊಳಗಿದ್ದು ಹರಿ ತಾನು ಓರಂತೆ ಕಾರ್ಯವ ನಡೆಸೋನು ಮುಖ್ಯ ಕಾರಣ ಶ್ರೀಹರಿ ಅಲ್ಲವೇನೋ 22 ಹಲವು ಹಂಬಲಿಸಲ್ಯಾತಕೆ ಹುಚ್ಚಾ ವಿದ್ಯಾ ಕುಲಶೀಲಧನದಿಂದ ಹರಿ ಮೆಚ್ಚಾ ಕಲಿಯುಗದೊಳಗಾರ್ಯರ ಪೆಚ್ಚಾ ತಿಳಿ ಸುಲಭೋಪಾಯಾದಿಗಳ ನಿಚ್ಯಾ 23 ದುರ್ಜನರೊಳು ದೈನ್ಯ ಬಡದಿರು ಸಾಧು ಸಜ್ಜನರೊಳು ವೈರ ತೊಡದಿರು ಅರ್ಜುನಸಖನಂಘ್ರಿ ಬಿಡದಿರು ನಿ- ರ್ಲಜ್ಜನಾಗಿ ಬಾಯ್ಬಿಡದಿರು 24 ಭಯರೂಪದಿ ಒಳಹೊರಗಿದ್ದು ನಿ- ರ್ಭಯ ನಾಮಕನು ಧೈರ್ಯವನೆ ಗೆದ್ದು ಭಯದೋರುವನೆಂಬುದೆ ಮದ್ದು ಮಹಾ ಭಯಕೃದ್ಭಯಹಾರಿಯನೆ ಪೊಂದು 25 ಪರಸತಿಯರ ಸಂಗವ ಬಿಡು ಹರಿ ಸರ್ವೋತ್ತಮನೆಂದು ಕೊಂಡಾಡು ಪರಮಾತ್ಮನ ಧ್ಯಾನವ ಮಾಡು ನರ ಹರಿದಾಸರಂಗಳ ಒಡಗೂಡು 26 ಸೃಷ್ಟಿಗೊಡೆಯ ಶ್ರೀದವಿಠಲ ವಿಷ್ಟಾವಿಷ್ಟನಾಗಿದ್ದೆಲ್ಲ ಇಷ್ಟಾನಿಷ್ಟವ ಕೊಡಬಲ್ಲ ಮನ- ಮುಟ್ಟಿದವರ ಬೆಂಬಿಡನಲ್ಲಾ 27
--------------
ಶ್ರೀದವಿಠಲರು
ಕಷ್ಟ ಕಷ್ಟವೋ ಕೃಷ್ಣ ದೃಷ್ಟಿಯಲಿ ನೋಡದಿರೆ ತುಷ್ಟಿಪಡಿಸಲು ನಿನ್ನ ನಾನೆಷ್ಟರವನಯ್ಯ ಪ ಭ್ರಷ್ಟನಾಗಿಹೆ ನಾ ಅಷ್ಟಾಂಗಯೋಗವ ತಿಳಿಯೆ ಒಂ- ದಿಷ್ಟು ಭಕುತಿಯ ಕೊಟ್ಟು ಕಡೆಹಾಯಿಸಯ್ಯ ಅ.ಪ ಸತ್ಯ ಅಸ್ತೇಯ ಬ್ರಹ್ಮಚರ್ಯ ಅಹಿಂಸಾ ಧೃತಿ ದಯಾ ಕ್ಷಮಾರ್ಜಿತ ಮಿತಭುಕ್ತವು ನಿತ್ಯ ಬಾಹ್ಯಾಂತರ ಶೌಚಾದಿ ದಶಗುಣ ಯುತವಾದಯಮ ಉಪಾಸನೆಗಳಿನಿತಿಲ್ಲವೋ ದೇವಾ 1 ನಿಯಮ ಮೊದಲಿಲ್ಲ ಜಪತಪ ಸಂತೃಪ್ತಿ ನಿಯತ ಸಿದ್ಧಾಂತ ಶ್ರವಣ ಲಜ್ಜಮತಿಯು ಶ್ರೀಯಃಪತಿಯ ಪೂಜನ ಆಸ್ತಿಕ್ಯವ್ರತ ದಾನೋ- ಪಾಯವಿಲ್ಲದೇ ಕಡೆ ಹಾಯ್ವುದೆಂತಯ್ಯ 2 ಘಾಸಿಯಾಗಿಹುದಯ್ಯ ಷಡ್ವಿಧಾಸನಗಳೂ ಸ್ವಸ್ತಿಕ ಭದ್ರಪದ್ಮ ಅರ್ಧಾಂಗಾಸನದಿ ಸಿದ್ಧ ಪರ್ಯಂಕಗಳೆಂಬ ಆಸನದಿ ಕುಳಿತು ನಾ ಧೇನಿಸಲರಿಯೆ ಹರಿಯೇ 3 ಪ್ರಾಣಾಯಾಮವ ಕ್ರಮವು ರೇಚಕ ಪೂರಕವು ದಣಿವಿಲ್ಲದೆ ಕುಂಭಕದ ಕ್ರಮವಿಲ್ಲ ತ್ರಾಣವಿಲ್ಲವೋ ವಾಯುಬಂಧ ಮಾಡಲರಿಯೆ ಪ್ರಾಣಪತಿ ನಿನ್ನ ಕರುಣವಿಲ್ಲದಾತನಕ 4 ವಿಷಯಾಭಿಲಾಷೆಯಿಂದ್ಹರಿದು ಹೋಯಿತು ಮನಸು ವಿಷಮವಾಗಿಹುದಯ್ಯ ಮತ್ಸಾಧನ ಪ್ರತ್ಯಾಹಾರ ಸಾಧನವಿಲ್ಲ ಕೃಷಿಮಾಡಿ ಸ್ಥಿರಮನದಿ ಧೇನಿಸಲು ನಾನರಿಯೆ 5 ಧಾರಣೋಪಾಯದೊಳು ಅಣುಮಾತ್ರ ನಾನರಿಯೆ ನರಕ್ರಿಮಿಯಾಗಿ ನಾ ಧರೆಯೊಳುಳಿದೆ ಅರಿಯೆ ಬಾಹ್ಯಾಂತರದಿ ಭೂತಪಂಚಕವಿರುವ ಪರಿ ತಿಳಿದು ಪ್ರಾಣವಾಯು ಸಡಿಲಬಿಡಲರಿಯೆ 6 ಧ್ಯಾನಿಸಲು ಏಕಾಗ್ರಚಿತ್ತವೇ ಎನಗಿಲ್ಲ ಸಂಸ್ತುತಿಸೆ ಸಂಪ್ರಜ್ಞಾ ಅಸಂಪ್ರಜ್ಞವೆಂಬ ಘನಸಮಾಧಿಯೊಳ್ ಪರಿವಿಲ್ಲದಲೆ ನಿನ್ನ ಕರುಣವೆಂತಾಗುವುದೋ ಶ್ರೀ ವೇಂಕಟೇಶಾ 7 ಶುದ್ಧವಾದ ದ್ವೈತತ್ರಯ ತಿಳಿಯದಲೆ ಮುಗ್ಧನಾಗಿಹೆ ನಾನಪರಿಶುದ್ಧನೊ ಶಬ್ದಗೋಚರ ನಿನ್ನ ಪರಿಶುದ್ಧ ಭಾವದಿಂ ಬುದ್ಧಿಪೂರ್ವಕ ತಿಳಿಯೆ ಬದ್ಧಪಾಮರನಯ್ಯ 8 ಕರಣತ್ರಯದಲಿ ಮಾಳ್ವ ಕ್ರಿಯೆಗಳೆಲ್ಲವು ಸತತ ಹರಿಯೇ ಬಿಂಬಕ್ರಿಯವ ನಾನರಿಯದೇ ಕರುಣಶರಧಿಯೆ ನೀ ಕೃಪೆಮಾಡಿ ಪೊರೆಯದಿರೆ ಉರಗಾದ್ರಿವಾಸವಿಠಲ ನಿನ್ನ್ಹ್ಹೊರತು ಗತಿಯುಂಟೆ 9
--------------
ಉರಗಾದ್ರಿವಾಸವಿಠಲದಾಸರು
ನಿನ್ನ ಕರುಣಕೆಯ ಕಾಣೆನಾ | ವಿಠಲರಾಯಮನ್ನುಜನ್ನ ರೂಪ ಧರಿಪನಾಅನ್ನ ವಸನವಿತ್ತು ಪಿತಗೆ | ಚನ್ನ ಸೇವೆ ಮಾಳ್ಪದೇವೆಘನ್ನ ಸಾಧ್ಯ ಸಾಧನವೆಂದು | ಮನ್ನಣೆಯ ತೋರ್ದೆ ಜಗಕೆ ಅ.ಪ. ಪಂಥ ಜನರ ಸಂದಣೀಯಲಿ | ಮೆರೆಯುತ್ತಿದ್ದಪಂಢರಪುರದ ಸುಪ್ರದೇಶದಿಪುಂಡರೀಕ ನಯನ ಭಕ್ತ | ಬಂಡುಣೀಯ ಮನವ ನೋಡೆಅಂಡಾ ನಂತಕೀಶ ಮನುಜ | ದಿಂಡು ಧರಿಸಿ ಬಂದು ನಿಂತ 1 ಇಂದು ಭಾಗ ಸರಿತು ತೀರದಿ | ಪುಂಡಲೀಕತಂದೆ ಪಾದಸೇವೆ ಭರದಲಿ |ಬಂದ ಮನುಜ ವೇಷ ಹರಿಗೆ | ನಿಂದಿರೆಂದು ಪ್ರಾರ್ಥಿಸುತ್ತಅಂದ ಅನ್ಯ ಪೀಠವಿರದೆ | ಒಂದು ಇಟ್ಟಗಿ ಪೀಠವಿತ್ತ2 ಸಿಂಧು | ಸುಷ್ಠು ಒತ್ತಿಪ ದಯಾಸಿಂಧು3 ಶಾಸ್ತ್ರ ಬಹಳ ಶೃತನು ಎನುತಲೂ | ಶುದ್ಧಮೇಧ ಶಕ್ತಿ ಬಹಳ ಯುತನು ಎನುತಲೂ | ಯುಕ್ತಿಗಾಗ್ಯ ವಲಿವನಲ್ಲ | ಮುಕ್ತಿದಾತ ಲಕ್ಷ್ಮೀನಲ್ಲಭಕ್ತಿ ಮುಡುಪು ಯಿತ್ತು ತುತಿಪ | ಭಕ್ತ ಜನರ ಬಿಡದೆ ಪಾಲಿಪ4 ಭಾವ ದ್ರವ್ಯ ಕ್ರಿಯವು ಎಂಬುದಾ | ಮಹತು ಎನಿಪಈ ವಿಧ ದ್ವೈತತ್ರಯಗಳಾ |ಭಾವದಲ್ಲಿ ಚರಿಸುವಂಥ | ಭಾವವಿತ್ತು ಸಲಹೊ ಗುರುಗೋವಿಂದ ವಿಠಲ ಭಕ್ತಿಪಂಥ | ದೇವನೆಂದು ಮೆರೆವ ವಿಠಲ 5
--------------
ಗುರುಗೋವಿಂದವಿಠಲರು
ಸರ್ಪಾದ್ರಿ ವಾಸ ವಿಠಲ | ಅರ್ಪಿಸುವೆನಿವಳಾ ಪ ಶೂರ್ಪಕರ್ಣನ ಪಿತಗೆ | ಸಖ ನೆನಿಪ ಹರಿಯೇ ಅ.ಪ. ನೊಂದು ಸಂಸಾರದಲಿ | ಬಂಧನವ ಕಳೆಯಲ್ಕೆನಂದ ನಂದನನನ್ನು | ವಂದಿಸುತ ಬಹಳಾಕಂದರ್ಪನುಪಟಳವೇ | ಛಂದದಿಂ ದೂರಿರಿಸಿನಂದಾದ್ರಿ ನಿಯಲ ತವ | ಪಾದಕಾಂಕ್ಷಿಪಳಾ 1 ಪಾದ | ಶತಪತ್ರಕೀವಾ 2 ಪತಿ ಪ್ರೀಯಾ 3 ಪತಿ ಕರ್ಮ | ತುಂಬಿಸೆಂದಿವಳಲ್ಲಿಪೊಂಬಸಿರ ವಂದ್ಯ ಮ | ದ್ಭಿಂಭ ಪ್ರಾರ್ಥಿಸುವೆ 4 ಭಾವದ್ರವ್ಯ ಕ್ರಿಯವು | ಈ ವಿಧಾದ್ವೈತತ್ರಯತೀವ್ರುಪಾಸನೆ ಪಲಿಸಿ | ಹೃದ್ಗುಹದಿ ನಿನ್ನಾಆವ ತವ ಭವ್ಯ ಸ | ದ್ರೂಪ ತೋರಿಸು ಎಂದುಓವಿ ಪ್ರಾರ್ಥಿಪೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು