ವರಗುರು ತಂದೆ ಮುದ್ದು ಮೋಹನದಾಸರೆಗಿತ್ತರು ಲೇಸ
ಪರಮ ಸಂಭ್ರಮದೊಳಿವರ ಸಹವಾಸ ಕರುಣಿಸಿದನು ಶ್ರೀಶ ಪ
ರಾಗ ದ್ವೇಷಾದಿಗಳಿವರೊಳಗಿಲ್ಲ ಪಾಮರರಿವರಲ್ಲ
ಶ್ರೀ ಗುರುಗಳೆನಗಿವರೆಂದು ಸ್ತುತಿಪನಲ್ಲ ಲಾಲಿಪುದೆನಸೊಲ್ಲ 1
ಶುಭ ಚರಿತೆಯನು ಜ್ಞಾನಿಗಳೆಂಬುದನು
ಖುಲ್ಲ ಜನ ನಿಂದಿಸಿದರಾಗುವದೇನೊ ಅರಿಯೆನಯ್ಯ ನಾನು 2
ಪಾದ ಸರಸಿರುಹಕೆ ಭ್ರಮರರೆನಿಸುವ ಗುಣಯುತರ
ಕುಜನಗಳೇನು ಬಲ್ಲರಯ್ಯ ಇವರ ಮಹಿಮಂಗಳ ವಿವರ 3
ಕರಿಗಿರಿಯೆಂಬ ವರಕ್ಷೇತ್ರದಲ್ಲಿ ವರುಷಂಪ್ರತಿಯಲ್ಲಿ
ಹರಿದಾಸೋತ್ತಮ ಧರಣಿಸುರರನಲ್ಲಿ ಬಲು ಸೇವಿಪರಲ್ಲಿ 4
ಇಷ್ಟದೈವ ಅಪವರ್ಗಪ್ರದನೆಂಬ ಶ್ರೀ ನರಹರಿಯೆಂಬ
ದಿಟ್ಟ ಶ್ರೀ ರಂಗೇಶವಿಠಲನ ಬಿಂಬಾಕೃತಿಯ ಸದಾ ಕಾಂಬ 5