ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನಸ ಪೂಜೆಯನು ಮಾಡು | ಧ್ಯಾನ ಪೂರ್ವದಿಂದ ಕುಳಿತು ಪ ಜ್ಞಾನ ಭಕುತಿಯ ವಿಡಿದು ಲಕುಮಿ | ಪ್ರಾಣನಾಥನ ಪ್ರೇರಣೆಯಿಂದ ಅ.ಪ ಕಾಮ ಕ್ರೋಧವ ಹಳಿದು ವಿಷಾದವೆಂಬೋ | ಸ್ತೋಮಗಳನು ತೊರೆದು ರಜೋ ಮೊದಲಾದ || ತಾಮಸದ ಬುದ್ಧಿ ಬಿಟ್ಟು ನೇಮನಿತ್ಯ ತೀರಿಸಿಕೊಂಡು | ಈ ಮನಸ್ಸು ಇಟ್ಟು 1 ಹೃದಯ ಪದುಮದೊಳಗೆ ಹರಿಯ ಪದುಮ ಪದಗಳಿಟ್ಟು | ದೇಹ ಕದಲದಂತೆ ಇದ್ದು ಜ್ಞಾನ ಉದಿತವಾದ ದೃಷ್ಟಿಯ || ಹದುಳದಿಂದ ತಿಳಿದು ಅಂತರವೆಲ್ಲವನು ನೋಡಿ | ಕದವ ತೆರೆದು ಕೊಟ್ಟ ಮುದದಿ ದೃಢವ ಸಂಪಾದಿಸಿ2 ನೀಲ ರತುನದಂತೆ ಹೊಳೆವ ಪಾಲಸಾಗರತನುಜೆ | ಮೇಲು ಮಂಗಳರಮಣನಾದ ಮೇಲುಗಿರಿಯ ತಿಮ್ಮನ || ತವಕ ಬೀಳದಲೆ ಪೂಜೆ ವಿಧಾ | ಸಾಲುಗಳನು ತಿಳಿದು ವಿಶಾಲ ಬುದ್ಧಿ ಯುಕುತಿಯಿಂದ 3 ವೇದ ಮಂತ್ರಗಳನು ಪೇಳಿ ಆದಿಯಲ್ಲಿ ಪೀಠಪೂಜೆ- | ಯಾದ ತರುವಾಯ ವಿನೋದದಿಂದಲಾವರಣ || ಆದರಣೆಯಿಂದ ಬಳಿಕ ಮಾಧÀವರಿಗೆ ಸಕಲ ಭೂಷ- | ಣಾದಿಗಳನು ರಚಿಸಿ ಪುಣ್ಯಹಾದಿಯನು ತಪ್ಪದೆ 4 ದೋಷರಾಶಿಗೆ ದ್ವೇಷನಾಗಿ ಈ ಶರೀರವÀ ಘಾಸಿಮಾಡದೆ | ಪಾದ || ಲೇಸಿನಿಂದ ಭಜನೆಗೈದು ವಾಸವಾಗು ಪದದಲ್ಲಿ | ಶ್ರೀಶ ವಿಜಯವಿಠ್ಠಲರನ್ನ ದಾಸ-ದಾಸರ ದಾಸನೆಂದು5
--------------
ವಿಜಯದಾಸ