ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮಿಪ ಸುಜನರಿಗೆ ಅಪಾರ ಮಹಿಮ ಪ ಕಮಲ ಸಂಭವ ಸುಮನಸೇಂದ್ರ ಪ್ರಮುಖ ನಮಿತ ಸುಮಹಿಮ ಗಜರಿಪು ಗಮನ ಗುಣ ನಿಧಿ ಮಲೆಯಳ ಮುಖ ಕುಮುದ ಹಿಮಕರ ಅ.ಪ ಜಾತರಹಿತ ಜಗದೀಶ ದನು ಜಾತ ವ್ರಾತಾರಸ್ಯ ಜಾತವೇದನ ಶೀತಾಂಶು ಭಾನು ಸಂಕಾಶ ಭೂನಾಥ ಭೂತೇಶ ಹೃತ್ವಾದೋದಕ ವಾಸ ಶಾತಕುಂಭ ಕಶ್ಯಪನ ಗರ್ವಜೀ ಮೂತವೃಂದಕೆ ವಾತನೆನಿಸುತ ಪೋತ ಪ್ರಹ್ಲಾದನಿಗೆ ಒಲಿದು ಸು ಪ್ರೀತಿಯಲಿ ವೊರೆದಾತ ದಾತನೆ 1 ಗೀತ ಸಂಪ್ರೀತ ಶ್ರೀ ರುಕ್ಮಿಣಿ ಲೋಲ ಧಾತಾಂಡೋದರ ವನಮಾಲಾಧೃತ ಪೂತನ ಬಕ ಶಕಟಾರಿ ಹೃತ್ ಶೂರ ಪಾತರೌದ್ರಿ ಶತಧಾರ ಶುಭಕರ ಶ್ವೇತ ದ್ವೀಪಾನಂತ ಪೀಠ ಪು ನೀತ ವರವೈಕುಂಠ ಘನ ಸು ಭವ ಭಯಹರ 2 ಮಾರ ಜನಕ ಶುಭಕಾಯ ಕೃಷ್ಣಾ ತೀರ ಸುಶೋಭಿತ ಕಾರ್ಪರ ನಿಲಯ ದೂರ ನೋಡದೆ ಪಿಡಿ ಕೈಯ್ಯ ಶ್ರೀಸ ಸನ್ನುತ ಶಾಮಸುಂದರರೇಯ ವಾರಿಚರ ಗಿರಿ ಭಾರಧರ ಭೂ- ಚೋರ ಹರ ಗಂಭೀರ ವಟು ಕು ಠಾರಕರ ರಘುವೀರ ನಂದ ಕುಮಾರ ವಸನವಿದೂರ ಹಯಧ್ವಜ 3
--------------
ಶಾಮಸುಂದರ ವಿಠಲ
ರಥವನೇರಿದ ರಥಿಕನಾರೇ ಪೇಳಮ್ಮಯ್ಯ ಕಥಿತಧ್ಯಾತ ಸಂಸ್ತುತ ವಿತತಾನತ ಹಿತಕರ ದಿವಿಷÀತ್ಪತಿ ಕಾಣಮ್ಮ ಪ ಕೋಟಿ ಭಾಸ್ಕರ ಪ್ರಭಾಟೋಪದಿ ರಾಜಿಸುವ ಪೇಳಮ್ಮಯ್ಯ ಅ.ಪ. ತಾಟಂಕಯುತ ವಧೂಟಿಯರಿಕ್ಕೆಲದಲಿಹ ನೋಡಮ್ಮಯ್ಯ ಆಟದೆ ಕುರುಜ ಮಹಾಟವಿ ಸವರಿ ಕಿ ರೀಟಯ ಸಲಹಿದ ಖೇಟವಾಹನನೇ ಕೇಳಮ್ಮಯ್ಯ 1 ಭುಜಗರಾಜ ಫಣಿಮಣಿ ಮಂಡಲ ಮಂಡಿತನೇ ನೋಡಮ್ಮಯ್ಯ ವಿಜಯವರದ ಅರಿಗದಾಂಬುಜಧರ ಭುಜನೇ ನೋಡಮ್ಮಯ್ಯ ಗಜಚರ್ಮಧರಾದ್ಯನಿಮಿಷಗಣಸೇವಿತನ ನೋಡಮ್ಮಯ್ಯ ಅಜನ ನಾಭಿಯಲಿ ಪಡೆದು ಚರಾಚರ ಸೃಜಿಸಿ ಪೇಳ್ದ ನೀರಜಲೋಚನ ಕಾಣಮ್ಮ 2 ಏತಾದೃಶ ಮಹಾಮಹಿಮ ರಮಾವಲ್ಲಭನೆ ಪೇಳಮ್ಮಯ್ಯ ಶ್ವೇತ ದ್ವೀಪಾನಂತಾಸನ ವೈಕುಂಠನುಳಿದು ಪೇಳಮ್ಮಯ್ಯ ವೀತಭಯ ಜಗನ್ನಾಥವಿಠಲ ಬರಲೇಕೆ ಪೇಳಮ್ಮಯ್ಯ ಭೂತಳ ಜನರಭಿಲಾಷೆ ಸಲಿಸಲು ವಾತಾಶನ ಗಿರಿಗಿಳಿದ ಕಾಣಮ್ಮಯ್ಯ 3
--------------
ಜಗನ್ನಾಥದಾಸರು
ಸರ್ವಾಂತರ್ಯಾಮಿ ನಿನಗೆ ಪ ದೇವತಿರ್ಯಗ್ ಮನುಷ್ಯಾದಿ ಜಂತುಗಳಲ್ಲಿ ದಿವಿಭುವಿ ಪಾತಾಳದೊಳ ಹೊರಗಿರುವಗೆ ಅ.ಪ ಪ್ರಾಣ ಪ್ರತಿಷ್ಟೆಗೋಳಕತ್ರಯ ಚಿಂತನೆ ನೀನೆ ಕರುಣದಿ ಮನ್ಮಾನಸದೊಳು ಪೊಳ- ದೇನೇನು ಮಾಡಿಸಲದು ನಿನಗರ್ಪಿತ 1 ಅಣುವಿನೊಳಣುವಾಗಿ ಮಹತ್ತಿನೊಳ್ಮಹತ್ತಾಗಿ ಎಣÉಸಲೆನ್ನಳವೆ ನಿನ್ನಯ ಮಹಾಮಹಿಮೆಯ ವಿನುತಿಸುವುದು ಕೊನೆಗಾಣದೆ ಶೃತಿ ತತಿ 2 ಶ್ವೇತದ್ವೀಪಾನಂತಾಸನ ವೈಕುಂಠ ಆ- ಪ್ರೀತಿಯಿಂದಲಿ ನಿನ್ನ ಭಜಿಸುತಿರುವ ಭಕ್ತ- ವ್ರಾತವ ಸಲಹುವ ಗುರುರಾಮವಿಠಲನೆ 3
--------------
ಗುರುರಾಮವಿಠಲ