ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೀನ ಪಾಲನೆ ಗಾನಲೋಲನೆ ಸುಜನ ಪ್ರಿಯನೇ ಪ ಈ ನರಜನ್ಮದ ಕಾನನದಲಿ ಬಲು ದೀನನಾಗಿ ಗುಣಗಾನ ಮಾಡುವೆನೊ ಅ.ಪ ದುಷ್ಟಭೋಗಗಳನುಭವಿಸುತ ಸದಾ ಭ್ರಷ್ಟನಾದೆ ನಾನು ಅಷ್ಟಿಷ್ಟಲ್ಲದೆ ಮರುಗುತಿರುವೆ ಪರ ಮೇಷ್ಟಿ ಜನಕ ಎನ್ನ ನಿಷ್ಠನ ಮಾಡೊ 1 ಜಪವ ಮಾಡಲಿಲ್ಲ ತಪವ ಮಾಡಲಿಲ್ಲ ಉಪವಾಸವ ಕಾಣೆ ತಪಿಸುತಿರುವೆ ಎನ್ನ ಅಪರಾಧಗಳಿಗೆ ಕುಪಿತನಾಗದಿರೊ ದ್ವಿಪ್ರವರ ವರದ 2 ಧರ್ಮವ ಬಿಟ್ಟು ಸತ್ಕರ್ಮವ ತ್ಯಜಿಸುತ ದುರ್ಮಾರ್ಗದಲಿ ಬಲು ಹೆಮ್ಮೆ ಮಾಡಿದ ನನ್ನ ಹಮ್ಮು ಮುರಿದಿಹುದು ಬೊಮ್ಮ ಜನಕ ಸುಪ್ರಸನ್ನನಾಗೆಲೊ 3
--------------
ವಿದ್ಯಾಪ್ರಸನ್ನತೀರ್ಥರು