ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

--------ಹರಿಯೆನ್ನ ಕೂಡಿಸೊ ಬಿಡದಿನ್ನು ಕೂಡಿಸು ಕೃಪಾನಿಧಿಯೆ ಕೂಡಿಸೆನ್ನ ಧೊರಿಯೆ ಪ ಉದಯದಲಿ ಏಳುತಲಿ ಊರ್ವೀಶ ನಿಮ್ಮಸ್ಮರಣೆ ಹೃದಯದಲಿ ಅನುಗಾಲ ಉಚಿತನಾಗಿ ಪದುಮನಾಭ ನಿಮ್ಮ ಪಾದವನೆ ಪೂಜಿಸುವ ಸದಮಲ ಜ್ಞಾನಿಗಳ ಸಂಗದೊಳಗೆ ಎನ್ನ 1 ನಿತ್ಯನೇಮ ವ್ರತದಲ್ಲಿ ಬೇಕಾಗಿ ಇರುತಲಿ ಅತ್ಯಂತ ಪುರುಷ ಆನಂದದಲ್ಲಿ ಕರ್ತೃ ನೀನಲ್ಲದೆ ಸರ್ವೋತ್ತಮರು ದಾರೆಂದು ನಿತ್ಯ ನೀನೆಂದು ತಿಳಿಯುವ (ತಿಳಿಸುವ ) ಆತ್ಮಕರಸಂಗ 2 ಅನುದಿನವು ನಿಮ್ಮ ಧ್ಯಾನ ಮನದಲ್ಲಿ ಮರೆಯದೆ ದಿನಗಳನು ಕಳೆವಂಥಾ ದ್ವಿಜೋತ್ತಮರಾ ಅನುಸರಿಸಿ ಅವರನನು ಅತಿಮೋದದಿಂದ ಬೆರೆದು ವನಜನಾಭನೆ ನಿಮ್ಮ ಭಜನೆ ಮಾಡುವರ ಸಂಗ 3 ವೇದಶಾಸ್ತ್ರಾದಿಗಳ ಭೇದಗಳನರಿತು ಸತ್ಯ ಬೋಧಗುರು ಕರುಣದಲಿ ಪೂರ್ಣರಾಗಿ ಸಾಧು ಸಜ್ಜನರಾದಂಥ ಸತ್ಪುರುಷರಾ ಸಂಗ 4 ಉಪವಾಸವನೆ ಮಾಡಿ ಉಚಿತ ಕರ್ಮಗಳಿಂದ ತಪಗಳನೆ ಮಾಡುವಂಥ ಧನ್ಯಜನರಾ ಸುಫಲಂಗಳನೆ ಪಡೆದು ಸೂತುತಲಿ ಇರುವರಾ ಅಪರಿಮಿತ ಮಹಿಮ ನಿನ್ನ ಹಾಡಿ ಪಾಡುವರಸಂಗ 5 ಪರಮಾತ್ಮ ನಿನ್ನ ಮಹಿಮೆ ಭಾವದಲಿ ಶೋಧಿಸಿ ಪರಿಪರಿಯಲಿರುವಂಥ ಭಾವಜ್ಞರಾ- ಚರಣೆಯನು ಮಾಡಿ ನಿಮ್ಮ ಸೇವೆಯನು ಮಾಡುವಂಥ ಪರಮ ಭಕ್ತರಾದ ಪುಣ್ಯವಂತರ ಸಂಗ 6 ಗಂಗಾದಿ ಸಕಲ ತೀರ್ಥಂಗಳನು ಆಚರಿಸಿ ಅಂಗಾದಿ ದೋಷವ ಕಳೆದ ಅಧಿಕ ಜನರಾ ಸಂಗಸುಖ ಅಬ್ಧಿಯೊಳು ಸಂತತವು ಬೆರೆವಂಥರಂಗ ' ಹೊನ್ನ ವಿಠ್ಠಲ’ ರಾಯ ಗೋವಿಂದ 7
--------------
ಹೆನ್ನೆರಂಗದಾಸರು
ಕಮಲ ಸಂಭವೆ ಹಿಮನಗಜಾರಮಣ ಸನ್ನುತೆ ತಮರಿಪು ಶತ ಸಮಸನ್ನಿಭೆ ಇಭ ಇಂದಿರೆ ಶೋಭಾನೆ ಪ ಶೃಂಗಾರ ತರಂಗ ಹೆಳಲಾ ಬಂಗಾರವ ಪೊಂಗ್ಲಾದಿಗೆ ಬಲಿ ವಂಗನೆ ಶಿರೋಮಂಗಳ ಮಡಿ ಜಡ ಜಂಗಮ ವ್ಯಾಪ್ತಿ ಅಂಗಜ ಶರ ಕಂಗಳೆ ದ್ವಿಜೋ ತ್ತುಂಗಮ ರಂಗನ ನಿಜ ಅ ರ್ಧಾಂಗಿನಿಯೆ ಬಾ ಹಸಿಯ ಜಗುಲೀಗೆ 1 ಪೊಸುಕುಸುಮ ಶಿರಸದಲೊಪ್ಪುವ ನೊಸಲಲಿ ರಂಜಿಸುವ ಕಸ್ತೂರಿ ದಿಶದುಂಬಿದ ಬಿಸಿಜಾನನ ಪ್ರಭೆ ಎಸೆವ ಕಂಧರ ಕಕ್ಕಜ ಕುಚಕು ಪ್ಪುಸದಲ್ಲತಿ ಶೋಭಿಸುತಿಹ ಪವಳ ದಾ ಸರವ ತೂಗುವ ಅಸಮೇ ಬಾ ಹಸೆಯ ಜಗುಲೀಗೆ 2 ಕರಿಸೊಂಡಿಲುತೆರ ಚತುರಕರ ವರ ಅಭಯಸರಸಿಜಯುಗಧರ ಜಠರಾ ವರತ್ರಿವಳಿ ಗಂಭೀರನಾಭಿ ಕ ಟಸೂತರೆ ಹೇಮಾಂಬರೆ ಚರಣಂದಿಗಿ ಸಪಳಿ ಪೊಂಗೆಜ್ಜೆಯಾ ಮೆರೆಯುತ ಸರಸಳೆ ಬಾಹಸಿಯ ಜಗುಲೀಗೆ 3 ಮೃಗಲಾಂಛನೆ ಮಿಗೆ ಶೋಭಿಪ ಪದ ನಖ ಪಂಕ್ತಿಗಳೊಪ್ಪುವ ಗತ ಅಗಣಿತ ಮಹಿಮಳೆ ಸುಗುಣ ಸಂಪನ್ನೆ ಭಗವಂತನ ಜಘನದಿ ಪೊಳೆಯುತ ಖಗರಾಜನ ಪೆಗಲನೇರಿ ಅಮ ರ ಗಣವ ಚಿರ ಬಾ ಹಸಿಯ ಜಗಲೀಗೆ 4 ಅಂಭೃಣಿ ಸ್ವಾಯಂಭೂ ಸುರ ನಿಕು ರುಂಬಕರ ಅಂಬುಜ ಪೂಜಿತೆ ನಂಬಿದ ಜನರ್ಹಂಬಲಿಸುವ ಫಲ ಸಂಭ್ರಮದಿ ಕೊಡುವಾ ಗಂಭೀರಾ ಸು ಖಾಂಬೋಧಿ ಹರಿ ನಿತಂಬೆ ಪ ಯಾಂಬೋಧಿ ಸುತೆ ಜಗದಂಬೆ ಬಾ ಹಸಿಯ ಜಗುಲೀಗೆ 5 ಮಾಯೆ ನಾರಾಯಣಿ ಶ್ರೀ ಭೂ ಕೃತಿ ಆಯತಾಕ್ಷಳೆ ಕಾಯಜನ ತಾಯೆ ಶರಣೆ ಪ್ರಿಯ ಪಾವನ್ನೆ ವಾಯುಭುಕು ಶಾಯಿ ಅಮರಾಧೇಯಾ ಜಗನ್ನಾಥವಿಠಲನ ಜಾಯೆ ಬಾ ಹಸಿಯ ಜಗುಲೀಗೆ 6
--------------
ಜಗನ್ನಾಥದಾಸರು
ಪಾಲಿಸೆನ್ನ ಮಂದಬಾಲಿಶನ್ನಪಾಲಗಡಲೊಡೆಯ ಸಿರಿಲೋಲ ಪ.ಅಂಬುರುಹಸಂಭವ ತ್ರಿಯಂಬಕ ಶೇಷಾಂಬರಗದಂಭೋಳಿಸಂಭೃತನುತಾಂಘ್ರಿ 1ಅಷ್ಟಕೃತ್ಯ ಅಷ್ಟವಿಭವ ಅಷ್ಟ ಭೋಗ್ಯಥೇಷ್ಟ ಶಕ್ತಅಷ್ಟಹರಿತ ಶ್ರೇಷ್ಠವರ್ಯ ಶ್ರೇಷ್ಠ 2ದ್ಯುಗ ಶಶಿಭಾಯುಗನಯನ ಜಗಜಠರಘಹರಾಹಿನಗನಿಲಯ ಜಘನಕಟಿಪಾಣಿ 3ಕಿರೀಟ ಕುಂಡಲರಿದರಕೇಯೂರಕೌಸ್ತುಭಸಿರಿವತ್ಸವರಾಂಬರ ಮನೋಹರ ಮೇಖಲಧಾರಿ 4ದ್ರೌಪದಿ ಮುನಿವಧು ಬಾಲಧ್ರುವ ಪ್ರಹ್ಲಾದ ವಿಭೀಷಣೋದ್ಧವಾಕ್ರೂರ ಮುಖ್ಯವಮಾನಹಾರಿ 5ಋಗ್ಯಜುಸಾಮನಿಗಮಧರವಗೋಚರ ಮುನಿಗಣ ಸುಮನಗೇಹನಂತ ಸುಗುಣಾನಂದ ಪೂರ್ಣ 6ಮಧು ಕೈಟಭ ಮದನೇಮಿ ಜಲಂಧರಕಂಬುಸದನಖಳಾಬುಧಿ ಕುಲಾಂತಕ ದ್ವಿಜೋಪಕಾರಿ 7ಋಷಿ ಹನುಮ ರಸಗಾಯನ ತೋಷಭರಿತ ಹಾಸವದನಪ್ರಸನ್ನ ವೆಂಕಟೇಶ ನಮೋ ಸ್ವಾಮಿ 8
--------------
ಪ್ರಸನ್ನವೆಂಕಟದಾಸರು