ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಲ ಕುಲ ಕುಲವೆನ್ನುತಿಹರು ಪ ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ ಅ ಕೆಸರೊಳು ತಾವರೆ ಪುಟ್ಟಲು ಅದ ತಂದುಬಿಸಜನಾಭನಿಗರ್ಪಿಸಲಿಲ್ಲವೆಹಸುವಿನ ಮಾಂಸದೊಳುತ್ಪತ್ತಿ ಕ್ಷೀರವವಸುಧೆಯೊಳಗೆ ಭೂಸುರರುಣಲಿಲ್ಲವೆ1 ಮೃಗಗಳ ಮೈಯಲಿ ಪುಟ್ಟಿದ ಕತ್ತುರಿಯತೆಗೆದು ಪೂಸುವರು ದ್ವಿಜರೆಲ್ಲರುಬಗೆಯಿಂದ ನಾರಾಯಣನ್ಯಾವ ಕುಲಅಗಜ ವಲ್ಲಭನ್ಯಾತರ ಕುಲದವನು 2 ಆತ್ಮ ಯಾವ ಕುಲ ಜೀವ ಯಾವ ಕುಲತತ್ತ್ವೇಂದ್ರಿಯಗಳ ಕುಲ ಪೇಳಿರಯ್ಯಆತ್ಮಾಂತರಾತ್ಮ ನೆಲೆಯಾದಿಕೇಶವನುಆತನೊಲಿದ ಮೇಲೆ ಯಾತರ ಕುಲವಯ್ಯ 3
--------------
ಕನಕದಾಸ
ಶ್ರೀ ತುಳಸಿ ಜಯ ತುಳಸಿ ಜಯ ಜಯಾ ಜಯತು ತುಳಸಿ ಶ್ರೀ ಕೃಷ್ಣನ ಅರಸಿ ಜಯತು ಜಯತು ಜಯ ಶುಭಕರಿ ಪ. ಪಾಲಗಡಲನು ಮಥಿಸೆ ಶ್ರೀಲೋಲ ಅಮೃತವನ್ಹಂಚೆ ಬಾಲ ಶ್ರೀ ಕೃಷ್ಣನ ಲೋಲ ಲೋಚನದಿ ಬಾಲೆ ನೀನುದಿಸಲುತ್ಸವದಿಂದ ಸುರರೆಲ್ಲ ಮೇಲೆ ಅಂಬರದಿಂದ ಪುಷ್ಪವೃಷ್ಟಿಯನು ಕರೆಯೆ ಜಯ ಜಯ ವಾದ್ಯದಿ 1 ದ್ವಿಜರೆಲ್ಲ ವೇದ ಘೋಷದಿ ನಿನ್ನ ಸ್ತುತಿಸಲು ಅಜಭವಾದಿಗಳೆಲ್ಲ ಸ್ತೋತ್ರವನು ಗೈಯ್ಯೆ ಭುಜಗಭೂಷಣಸಖನು ತ್ರಿಜಗವಂದಿತ ನಿನ್ನ ಭಜಕ ಜನರಾಪ್ತ ಶ್ರೀ ಕೃಷ್ಣ ವರಿಸಿದನೆ ಜಯ ಜಯ ಕಲ್ಯಾಣಿ 2 ದೇವಸ್ತ್ರೀಯರು ಬಂದು ದೇವ ಉಡುಪ ತಂದು ದೇವಕಿತನಯನ ಸಹಿತ ನಿನ್ನ ಪಾವನದರಿಶಿಣ ಕುಂಕುಮ ಪರಿಮಳ ಗಂಧದಿ ದೇವಿ ಪುಷ್ಪಮಾಲೆಯ ಪೂಜಿಸಿದರು ಸತಿ 3
--------------
ಸರಸ್ವತಿ ಬಾಯಿ