ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಗಿ ಬೇಡುವೆ ಪಿಡಿಯೊ ಬೇಗ ಕೈಯಾ ಭಾಗವತ ಜನಪ್ರೀಯ ಭಾಗಣ್ಣದಾಸಾರ್ಯ ಪ ದ್ವಿಜ ಕುಲಾಬ್ಧಿಗೆ ಪೂರ್ಣ | ದ್ವಿಜರಾಜನೆಂದೆನಿಪ ವಿಜಯವಿಠಲದಾಸರೊಲುಮೆ ಪಾತ್ರ || ನಿಜಮನದಿ ನಿತ್ಯದಲಿ | ಭುಜಗಶಯನನಪಾದ ಭಜಿಪ ಭಾಗ್ಯದಿನಲಿವ | ಸುಜನರೊಳಿಡು ಎಂದು 1 ನೀನೇವೆ ಗತಿಯೆಂದ | ದೀನರಿಗೆ ನಾನೆಂಬ ಹೀನಮತಿ ಕಳೆದು ಪವಮಾನ ಪಿತನ | ಧ್ಯಾನಗೈಯ್ಯುವ ದಿವ್ಯ ಜ್ಞಾನ ಮಾರ್ಗವ ತೋರಿ | ಸಾನುರಾಗದಿ ಪೊರೆವ | ದಾನಿ ದಯಾವಾರಿಧಿಯೆ 2 ಮಂದಜನ ಸಂದೋಹ | ಮಂದಾರ ತರುವಿಜಿತ || ಕಂದರ್ಪ ಕಾರುಣ್ಯಸಿಂಧು ಬಂಧೋ || ಕಂದನಂದರಿದೆನ್ನ | ಕುಂದು ಎಣಿಸದೆ ಹೃದಯ ಮಂದಿರದಿ ಶ್ರೀ ಶಾಮಸುಂದರನ ತೋರೆಂದು 3
--------------
ಶಾಮಸುಂದರ ವಿಠಲ