ಬÁಳು ಸೌಖ್ಯದಿಂ ತನುಜೆಯೆ ಬÁಳು ಸೌಖ್ಯದಿಂ ಪ
ಲೀಲೆಯೊಳನು ದಿನ ಸಂತಸವಾಂತು ನೀಂ ಅ.ಪ.
ಸೌಭಾಗ್ಯವ ಕೊಡಲಿ ಸುರಪಿತ ರಮಣಿಯು ಸಲಹಲಿ ನಿನ್ನನು 1
ಇಂದ್ರನ ಸತಿಯಂದದಿ ಸುಖದಿಂದಿರು
ಮಂದಿರಕಾನಂದವನಿತ್ತು 2
ಪುಟ್ಟಿದ ಮನೆಗೆ ನೀಂ ಕೀರ್ತಿಯ ತರುವುದು
ಭೋಗ ಭಾಗ್ಯವ ಪೊಂದುತ 3
ಸುಂದರ ಪತಿಯಿಂದ ನೀಂ ಕೂಡುತ
ಪತಿಸೇವೆಯ ಗೈಯುತ 4
ಅತ್ತೆ ಮಾವಂದಿರ ಸೇವೆಯ ಗೈಯುತ
ನಿತ್ಯ ದಾನಧರ್ಮವ ನೀಂ ಗೈಯುತ 5
ದೇವದ್ವಿಜರನು ಭಾವನೆ ಗೈಯುತ
ಗುರುಹಿರಿಯರ ನಿತ್ಯವು 6
ಮೌನಿಜನಂಗಳು ನಿನ್ನನು ಹರಸಲಿ
ಧೇನುಪುರೀಶನ ಸೇವಿಸಿ ಸಂತತ 7