ಶ್ರೀನಿವಾಸ ಪಾಹಿಮಾಂ ಸದಾ ಶ್ರಿತಜನಾಮೋದ
ಮೌನಿಜನ ಚಾತಕಾಂಭೋದ ಪ
ಸಾನುರಾಗ ಯುಗಮುನಿ ಮಾನಿತಾವರಾರವಿಂದ
ಭಾನುಕೋಟಿ ತೇಜ ಸಾಮಗಾನಲೋಲ ಶ್ರೀಮುಕುಂದ ಅ.ಪ
ವಾರಿಜಾಸನಾರ್ಚಿತ ಪ್ರಭೋ ವಂ
ದಾರುಜನ ಪಾರಿಜಾತ ಧೃತಕೌಸ್ತುಭ
ಶಾರದೇಂದೀವರನೇತ್ರ ಶ್ಯಾಮಳನೀರದ ಗಾತ್ರ
ಸಾರ ಸನ್ಮಣಿ ಕೇಯೂರ ಹಾರ ಭೂಷಾ ಸುಪವಿತ್ರ 1
ಸರ್ವಲೋಕಪಾಲಕೇಶ್ವರಸೇವಿತಸುಪರ್ವಗಣಸದ್ಗುಣಾಕಾರ
ಶರ್ವ ಸುರಪತಿ ಮುಖ್ಯ ಸರ್ವದೇವವರವರ್ಯ
ಸೂರ್ಯ ಪರ್ವತಾಧಿರಾಜ ಧೈರ್ಯ 2
ಸೃಷ್ಟಿ ರಕ್ಷಣಾಂತಕಾರಕ ಸರ್ವಾತ್ಮಕ ಶಿಷ್ಟದೇವ ದ್ವಿಜರಕ್ಷಕ
ಅಷ್ಟಸಿದ್ಧಿಪ್ರದಾ ಸರ್ವೋತ್ಕøಷ್ಟ ಕಷ್ಟನಿವಾರಣ
ಅಷ್ಟಮೂರ್ತಿ ಪ್ರಿಯ ಸರ್ವಾಭೀಷ್ಟದ ಗೋಪಾಲಕೃಷ್ಣ 3
ಶ್ರೀಕರ ಶೃಂಗಾರಶೇಖರ ಶ್ರೀಕರಗೃಹ ಶ್ರೀಕರಧಾರಿತ ಮಂದರ
ಪಾಕವೈರಿ ಮಣಿನೀಲ ಪಾವನ ಸುಗುಣಶೀಲ
ಶೋಕ ಮೋಹ ಸುವಿವೇಕ ನಿತ್ಯೋದಾರ ಶೂರ 4
ಮಾರಜನಕ ಮಂಗಳಾಕಾರ ಮಾರಶತಕೋಟಿ ಸುಂದರ
ಸಾರವಸ್ತುಚಯಪರಿಪೂರ ವ್ಯಾಘ್ರಾಧ್ರಿವಿಹಾರ
ಧೀರ ವರದವಿಠಲ ಸುರಾಸುರಾರ್ಚಿತಾಂಘ್ರಿಕಮಲ 5