ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಈ) ಸರ್ವದೇವತಾ ಸ್ತುತಿಗಳು 1. ವಿನಾಯಕ 261 ಗಜಮುಖನೇ ಮಾಂಪಾಲಯ ಗೌರೀತನಯಾ ಪ ಭುಜಗಾಪವೀತನೆ ದ್ವಿಜಗಣನಾಥನೆ ಅಜಿಮಹಾರಾಜನೆಂದು ಭಜಿಸುವೆನೆಲ್ಲೋ ದೇವ 1 ತ್ರಿಗುಣಾ ವಿರಾಜಿತ ತ್ರಿಶರ ವಿನೋದಿತಾ ಜಗದೊಡೆಯನೇ ಬಾರೊ ಮೃಗವದನದವನ್ಯಾರೊ 2 ಕೋಲೂಪುರೀಶನೆ ಬಾಲಗಣೇಶನೇ ಕಾಲವೈರಿಯೆ ಬಾರೊ ತುಲಶೀರಾಮ ತಾನ್ಯಾರೋ 3
--------------
ಚನ್ನಪಟ್ಟಣದ ಅಹೋಬಲದಾಸರು
ದೇವ ನೀ ದಯಮಾಡಿ ಕರುಣಿಪುದೂ ಪ ಮಮದುರಿತಹರಣ ಜೀಯ ಅ.ಪ ಕಾಲ ಪಾವಕಾಸನನೇ ದೇವ ಪ್ರತ್ಯಂಗನದ್ಯಾರೊ ತೋರೋ ಸಾವಧಾನ ಸರ್ವಾತ್ಮಕ ತ್ರಿಗುಣನೆಬಾರೊ ಬಾವ ಜಾರಿ ಸಖ ಭಜಕ ಜನ ವಿಹತ ಸರ್ವಜನರಿಗಾದರದಿ ಸಂಪದವು ನೀವ ಸುಂದರನೆ ನಿಜಪರ ಬ್ರಹ್ಮನೆ 1 ಪ್ರಣವನಾದ ಪಂಡಿತಜನ ಶಿಖರನೆ ಫಣಿಪಾಸನ ಹರಿಯೆ ಧೊರೆಯೆ ಅಣಿದು ಬರುವ ದುರ್ನಡೆಗಳ ಕಡಿಯದೆ ಯೆಣಿಪುದು ನಿನಗಿದು ಸರಿಯೇ ತ್ರಿಣೆಯೆಸಖನೆ ತ್ರಿಗುಣೇಶನೆ ಕೇಶವ ಅಣಿದು ಬಾರೊ ದಯಕೋರೆಲೊ ಮಹಾ 2 ದ್ವಿಜಗಣ ಮಣಿಯಹುದೋ ಅಜ ಮಹರಾಜನೆ ದು:ಖವ ನೀ ತ್ಯಜಿಸಬೇಕಹುದಹುದೋ ವಿಜಯಸಾರಥಿಯೆ ನಿಜ ಭಗವಂತನೆ ಸುಜನರೊಡನೆ ಸುಖಿಸುವದೆನಗದು ಕೊಡೊ 3 ನಿಗಮವಿನುತ ನಿಖಿಲಾಂಡಕೋಟಿ ಬ್ರಹ್ಮಾಂಡ ಜಗದಾದಿ ನಾಯಕ ಕನ್ಯಾರೊ ಬಾರೊ ಸುಗುಣರೂಪ ಸಾಕ್ಷಾತ್ ಪರಮಪದ ತೋರೋ ಅಗಣ ಸಹಜ ಮತ್ಕುಗುಣ ಕಾಲನೆ ಕಲಿ ನೆಗುರು ಮಂಗಳಪುರಿಧಾಮಾ 4
--------------
ಚನ್ನಪಟ್ಟಣದ ಅಹೋಬಲದಾಸರು
ಭೀಮಶೇನಾರ್ಯರು | ಭೂಮಿತ್ಯಜಿಸಿ ಪರಂ ಧಾಮವ ಸೇರಿದರು || ಶ್ರೀಮತ್ ಕಾರ್ಪರ ಕ್ಷೇತ್ರ | ಸ್ವಾಮಿಯ ಸಂಪೂರ್ಣ ಪ್ರೇಮ ಪಡೆದವರು | ಕೇಳಿದವರು ಪ ಪರಿಮಳ ಗಾತ್ರರ ಕರುಣ ಪ್ರಸಾದದಿ ಧರೆ ಸುರಾಗ್ರಣಿ ಎನಿಪ ವರ ಜಯಾರ್ಯರ ಪತ್ನಿ | ನರಸಾಂಬೆಯಗರ್ಭ ಶರಧಿಗೆ ಹರಿಣಾಂಕರು ಸುಶಾಂತರು 1 ಎಡರೇಸು ಬಂದರೂ ಬಿಡದೆ ಸ್ವಧರ್ಮವ ಕಡುಭಕ್ತಿ ಪೂರ್ವಕದಿ ಹುಡುಗನ ಮಾತಿಗೆ | ಒಡೆದುಸ್ತಂಭದಿ ಬಂದ ಒಡೆಯನರ್ಚಿಸಿದವರು | ಕೋವಿದರು 2 ಪಂಚಬಾಣನ ಗೆದ್ದು | ಪಂಚ ಭೇದವನರಿತು ಪಂಚಾಸ್ಸನುತ ಮಾನವ ಪಂಚಾಶ್ಯದಯದಿ ಪ್ರಪಂಚ ಸಾಗಿಸುವಂಥ ಪಾಂಚಾಲಿಪತಿ ಪ್ರಿಯರು | ನಿಷ್ಕಿಂಚನರು 3 ವತ್ಸರ ಪರಿಯಂತ ನಿಷ್ಟೆಯಲಿ ನಿರುತ ತಪ ಚಳಿ ಮಳೆ ಸಹಿಸಿ ಪರಮೇಷ್ಟಿ ಜನಕನ ನಿರುತ ಸೇವಿಸಿದವರು | ನಿರ್ಮಮರು 4 ವಿನಯ ಸುಶೀಲ ಸದ್ಗುಣದಿ ಭೂಷಿತರಾದ ತನಯರೀರ್ವರ ಕರೆದು ರಿಣವಿನು ತೀರಿತು ಎನುತ ಪೇಳುತ ದ್ವಿಜಗಣಿಕೆ ದಕ್ಷಿಣೆ ನೀಡಿ ನಮನ ಮಾಡಿ 5 ಹರುಷ ಭರಿತರಾಗಿ ಸರ್ವಜಿತು ನಾಮದ ವರುಷದೊಳ್ ಯುಗ ಮಾಸದಿ | ಶರದಪಕ್ಷ ಪ್ರತಿಪದ ಪ್ರಥಮ ಕಾಯ 6 ವರುಷಂ ಪ್ರತಿ ತಪ್ಪದೆ | ಚರಿಸುತ ದೇಶದೋ ಳಿರುವ ಸದ್ಭಕ್ತರಿಗೆ | ವರಶಾಮ ಸುಂದರ ನರಹರಿದರುಶನ | ಗರೆದ ಪಾಲಿಸಿದವರು ಪಾವನ್ನರು 7
--------------
ಶಾಮಸುಂದರ ವಿಠಲ