ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜನುಮ ಜನುಮದಲಿ ಎನಗಿರಲಿ ಪ ಹನುಮ ಭೀಮ ಮಧ್ವಮುನಿಗಳ ಸೇವೆಯು ಅ.ಪ ಮಾತರಿಶ್ವ ನೀ ಪ್ರೀತನಾಗೆ ಅಜ ತಾತನು ಸುಲಭದಿ ಒಲಿಯುವನು ಕೋತಿಯ ರೂಪದಿ ಭೂತಲದಲಿ ಬಲು ಖ್ಯಾತಿ ಪಡೆದ ರಾಮದೂತರ ಸೇವೆಯು 1 ಹರನ ಭಕುತ ಜರಾಸಂಧನ ಕಾಯುವ ಹರಿದು ಮುರಿದು ಬಲು ಸುಲಭದಲಿ ಹರಿಗಪರೋಕ್ಷದಿ ಅರ್ಪಣೆ ಮಾಡಿದ ಕುರುಕುಲಪತಿ ಬಲಭೀಮರ ಸೇವೆಯು 2 ಶುದ್ಧ ದ್ವಿಜಕುಲದಿ ಉದ್ಧವಿಸುತ ಅನಿ ರುದ್ಧನಿಗನುಮತವಾಗಿರುವ ಸಿದ್ಧಾಂತದ ಪದ್ಧತಿಯನು ತೋರಿದ ಮಧ್ವಮತದ ತತ್ವದಲಿ ಪ್ರಸನ್ನತೆ 3
--------------
ವಿದ್ಯಾಪ್ರಸನ್ನತೀರ್ಥರು