ಭೀಮರಾಯನ ನಂಬಿ ಭೀಮಸೇನನಭೀಮಭವವಾರಿಧಿಯ ಬೇಗದಾಟುವರೆ ನಮ್ಮ ಪ.
ಬಕ ಮೊದಲಾದ ಹಿಡಿಂಬಕ ದುರ್ಜನರ ಕೊಂದುಸುಖಪಡಿಸಿದನಂದು ದ್ವಿಜಕುಲಜರಾಗ ಕೂಡ 1
ಜರಾಸಂಧನ ಕೂಡೆ ವರ ಯುದ್ಧವನ್ನೆ ಮಾಡಿಸರಕು ಮಾಡದೆ ಕೊಂದ ಧಾರುಣಿಯೊಳಗೆ ನಿಂದ 2
ಸತಿ ಕೃಷ್ಣೆಯಬಾಧಿಸೆ ಘಾಸಿಮಾಡಲು ವಂದ್ಯರ ಹೇಸದೆ ಮೋಸದಿ ಕೊಂದ3
ಕಡುತೃಷೆಗೆ ದುಶ್ಶಾಸನನೊಡಲ ಬಗಿದು ರಕ್ತಕುಡಿದಂತೆ ತೋರ್ದ ನಮ್ಮೊಡೆಯ ದ್ರೌಪದಿಪ್ರಿಯ 4
ಭೀಮ ತನ್ನ ಮರೆಹೊಕ್ಕ ಸುಜನರ ಕಾವಸ್ವಾಮಿ ಶ್ರೀಹಯವದನ ರಾಮನಾಣೆ ಸತ್ಯವಿದು 5