ದಾಮೋದರ ವಿಠಲನೆ | ಸಲಹ ಬೇಕಿವಳಾ ಪ
ಸನ್ನುತ ಹರಿಯೆ | ಸ್ವಾಮಿ ಪಾಲಿಪುದೊ ಅ.ಪ.
ತರಳೆ ದ್ರೌಪತಿ ವರದ | ಕರಿಯು ಮೊರೆಯಿಡೆ ಕಾಯ್ದವರ ಅಹಲ್ಯೆಯ ಪೊರೆದ | ತರಳ ಧ್ರುವ ವರದಕರುಣದಿಂದಲಿ ಮನದ | ಪರಿಪರಿಯ ಸತ್ಕಾಮಗರೆದು ಪಾಲಿಪುದಿವಳ | ಶಿರಿ ರಾಮಚಂದ್ರಾ 1
ಪತಿ ಸೇವೆ ಪರಳೆನಿಸು | ಗತಿಗೋತ್ರ ನೀನೆನಿಸುಸತತ ನಿನ್ನಯ ನಾಮ | ಸ್ಮøತಿಗೊದಗಿಸೊತತುವೇಶರೊಲಿಮೆಯಲಿ | ಸತತ ಗೈಯ್ಯುವ ಕಾರ್ಯವಿತತವಾಗಲಿ ನಿನ್ನ | ಹಿತಸೇವೆ ಎಂದೂ 2
ಕಾಲ ಕಾಲಕೆ ನಿನ್ನಓಲಯಿಪ ಭಾಗ್ಯದಲಿ | ಕೀಲಿಪುದು ಮನವಾ 3
ಮೂರೆರಡು ಭೇದಗಳ | ತಾರತಮ್ಯವನರುಹಿತೋರೊ ತವರೂಪ ಹೃ | ದ್ವಾರಿಜದನಡುವೇಕಾರುಣಿಕ ನೀನೆಂದು | ಸಾರುತಿವೆ ವೇದಗಳುಮಾರಾರಿ ಸಖ ನಿನ್ನ | ಕಾರುಣ್ಯ ತೋರೋ 4
ಪಾವಮಾನಿಯ ಪ್ರೀಯ | ಭಾವದಲಿ ಪ್ರಾರ್ಥಿಸಲುಪೂವನಿತ್ತಭಯವನು | ಓದಿ ಪಾಲಿಸಿಹೇಕೇವಲಾ ನಂದಮಯ | ಗೋವಿದಾಂಪತಿಯೆ ಗುರುಗೋವಿಂದ ವಿಠ್ಠಲನೆ | ಭಿನ್ನಪವ ಸಲಿಸೋ 5