ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಹಹ ಮರುಳನಾದೆ ಸುಮ್ಮನೆ ಪೂರ್ವ ಮಹಿಮ ಹರಿಯ ಸೇವೆಯನ್ನು ಸಹಿಸಿಕೊಂಡು ಗ್ರಹದೊಳಿರದೆ ಪ. ಇಂದಿರೇಶನಿರವನರಿಯದ ಮೂರ್ಖರಾದ ಮಂದಮತಿಗಳಾದ ಕುಜನರ ಬಂದು ಸೇರಿ ಬುದ್ಧಿಹೀನರೆಂದ ನುಡಿಯ ಕೇಳಿ ಬಹಳ ಮೂರ್ತಿ ಬಿಟ್ಟು 1 ತರಣಿ ತಿಮಿರವಟ್ಟಿಲಿರುವದೆ ಸಿಂಹರಾಜ ಮರಿಯ ಕೂಡೆ ನರಿಯು ಬರುವುದೆ ಮರುಳತನದ ಭಾಗ್ಯವೆಂಬೀ ನರಕ ಪಾತ್ರರಾದ ಜನರು ಪಾದ ಪದ್ಮದಾಸ ಚರಿಯವೆಂದು ತಿಳಿವರುಂಟೆ 2 ನೀರಗುಳ್ಳೆಕಿಂತ ಲಘುತರವಾದ ಸಂಸಾರ ಸಂಬದ್ಧ ಪರಿಸರ ಸೇರಿ ಹಿಂದೆ ನಡೆದ ತಪ್ಪ ನೀರಜಾಕ್ಷ ಕ್ಷಮಿಸಿ ಮಹಾ- ದ್ವಾರದೆಡೆಗೆ ಕರಸಿಕೊಳ್ಳೊ ಭೂರಮೇಶ ವೆಂಕಟೇಶ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಂಡೆ ಕನಸಿನಲಿ ನಾ ಪಾಂಡುರಂಗನ ಮಂಡೆ ಇಡುತಲಿ ಪುಂಡಲೀಕ ಚರಣದಲೀ ಪ. ಪಂಡರೀಕ್ಷೇತ್ರದಲಿ ವಿಠ್ಠಲನ ದರ್ಶನಕೆ ದಂಡೆ ಹಾರ ಕೊಂಡು ಪೋಗುತಿರಲೂ ಹಿಂಡು ಜನ ಊಟಕೆಡೆ ಅಣಿಮಾಡುತಿರಲಲ್ಲಿ ಕಂಡು ಸಾಗುತ ಮುಂದೆ ದ್ವಾರದೆಡೆ ಬಂದು 1 ನಂತರದಿ ದ್ವಾರಗಳು ಮುಚ್ಚಿರಲು ಕಂಡು ಬಹು ಚಿಂತಿಸಲು ಅಲ್ಲೊಬ್ಬ ಬರಲು ಅವಗೇ ಅಂತರಂಗವನುಸುರೆ ಕದ ತೆರೆದು ನೋಡೆನಲು ಸಂತೋಷದಿಂದೆರಡು ದ್ವಾರಗಳ ತೆರೆದೇ 2 ರತಿಪತಿಯ ಬಿಂಬ ಶ್ರೀ ಪ್ರದ್ಯುಮ್ನವಿಠ್ಠಲನ ಮೂರ್ತಿಯನೆ ಕಂಡು ಹಾರವನ್ಹಾಕಿ ನಮಿಸಿ ಅತಿ ಪ್ರೀತಿ ಭಕ್ತಿಯಲಿ ಅಪ್ಪಿ ನಾ ಮೈ ಮರತೆ ಸ್ತುತಿಸುತಲಿ ಗೋಪಾಲಕೃಷ್ಣವಿಠ್ಠಲನನಾ 3
--------------
ಅಂಬಾಬಾಯಿ