ಒಟ್ಟು 7 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದು ಮಧುರೆಗೆ ತಾ ಕೊಂದು ಮಾತುಳನ ಬಂಧನ ರಹಿತವಾಗಲು ಮಾತಾಪಿತರು 1 ಜರೆಯಸುತನ ಬಾಧೆಯು ಘನವಾಗುತಿರಲು ಜಲದೊಳು ದ್ವಾರಕಾಪುರವ ನಿರ್ಮಿಸಿದ 2 ಯದುನಂದನ ತನ್ನಗ್ರಜ ಬಲರಾಮನ ಕೂಡ ಮುದದಿಂದಾವಾಸ ಯಾದವರ ಸಹಿತಾಗಿ3 ಇರುತಿರೆ ರುಕುಮ ತನ್ನನುಜೆ ಸಹಿತಾಗಿ ಚೆಲುವ ಸುಂದರಿಗೆ ಬ್ಯಾಗ್ವಿವಾಹದುತ್ಸವವು 4 ಅಕ್ಕರದನುಜೆ ರುಕ್ಮಿಣೀದೇವಿಗಿನ್ನು ಚಿಕ್ಕ ಚೆನ್ನಿಗನಾದ ತಕ್ಕ ವರನ್ಯಾರು 5 ವಸುಧೆಪಾಲರ ಮಧ್ಯ ಶಿಶುಪಾಲನೀಗಧಿಕ ಕುಸುಮಗಂಧಿನಿಗೆ ನಿಶ್ಚಯವ ಮಾಡಿದರು 6 ಅಗ್ರಜನ್ವಾಕ್ಯವ ಕೇಳಿ ಮನದಲ್ಯೋಚಿಸುತ ಘನಮಹಿಮಗೆ ಓಲೆ ಬರೆದಳು ಲಿಖಿತ 7 ಹರಿ ನೀನೆ ಮುರವೈರಿ ಸರುವಾಂತರಯಾಮಿ ನಿನ್ನ ಸ್ಮರಣೆ ದರುಶನ ಮಾತ್ರಕೆ ಪರಮಲಾಭೆನಗೆ 8 ಎಂದೆಂದಿಗೆನ ಕೂಡಾನಂದವ ಬಟ್ಟು ಇಂದೆ ಕೈಬಿಟ್ಟು ದೂರಿಂದ ನೋಡುವರೆ 9 ಪ್ರಾಣಪತಿ ನೀ ಪಾಣಿಗ್ರಾಣ (ಗ್ರಹಣ?) ಮಾಡದಲೆ ಇರೆ ಪ್ರಾಣ ಉಳಿಯದು ಕೇಳೆನ್ನಾಸೆ ಹುಸಿಯಲ್ಲ 10 ಸರ್ವರ್ವಂದಿತ ನಿನ್ನ ಅರಮನೆದ್ವಾರ ಕಾದಿರುವೋ ಭೃತ್ಯರಿಗೊಪ್ಪಿಸಿಕೊಡದೆ ಕರುಣಾಳು 11 ದೇಶಕಾಲಕೆ ನಾ ನಿನ್ನ ಸಮಳ್ವಾಸುದೇವ ಗುಣಕಸಮಳೆಂದು ಉದಾಸೀನ ಮಾಡಬ್ಯಾಡ 12 ವಕ್ಷಸ್ಥಳದ ವಾಸಿಯ ತುಚ್ಛಮಾಡದಲೆ ಲಕ್ಷೀಲೆ ಕರೆದೊಯ್ಯೊ ಪಕ್ಷಿವಾಹನನೆ 13 ಎನ್ನ ಬಿನ್ನಪ ಕೇಳಿ ಮನ್ನಿಸೊ ಕೃಷ್ಣ ಪನ್ನಂಗಶಯನ ನಿನ್ನ ಪಾದಕ್ಕೆರಗುವೆನು 14 ಪಾದ ಉರಗ ಮೆಟ್ಟಿದ ಪಾದ ನಿನ್ನ ಧ್ವಜವಜ್ರಾಂಕುಶ ಪಾದಕ್ಕೆರಗಿ ನಮಿಸುವೆನು 15 ಬರೆದ ಓಲೆಗೆ ಹಚ್ಚಿ ಅರೆದರಿಷಿಣವ ಕರವ ಜೋಡಿಸಿ ಕೊಟ್ಟು ಕಳುಹೆ ದ್ವಾರಕೆಗೆ16 ಜಗದೀಶಗೆ ಪತ್ರವ ಜಾಣೆ ತಾ ಬರೆದು ದ್ವಿಜನ ಕೈಯಲಿ ಕೊಟ್ಟು ಕಳುಹೆ ದ್ವಾರಕೆಗೆ 17 ವ್ಯಾಳ್ಯ ಮೀರುವುದೆಂದು ಎದ್ದಾಗ ರುಕುಮ ಭೇರಿ ತಾಡನ ಮಾಡಿಸೆ ಭೋರೆಂಬೊ ರಭಸ 18 ಎರೆದು ಮುಡಿಯನ್ಹಿಕ್ಕಿ ಜಡೆಯಬಂಗಾರ ಚೌರಿ ರಾಗಟೆ ಗೊಂಡ್ಯ ಧರೆಗೆ ಮುಟ್ಟುತಿರೆ 19 ಅಚ್ಚ ಜರತಾರಿ ಹೊಳೆವಷ್ಟಪತ್ರಿಕೆಯು ಮ್ಯಾಲೊಪ್ಪುವೊ ಪಟ್ಟೀನೊಡ್ಯಾಣ ಸರಿಸಿಟ್ಟು 20 ಕಂಕಣ ಚೂಡ್ಯ ದ್ವಾರ್ಯ ್ಹರಡಿ ಕೈಕಟ್ಟು ಮ್ಯಾ- ಕಂಚುಕ ತೊಟ್ಟು 21 ಹರಳು ಮಾಣಿಕ್ಯದ್ವಾಲೆ ಬುಗುಡಿ ಬಾವುಲಿಯು ಹೊಳೆವೊ ಮುತ್ತಿನ ಮೂಗುತಿ ಥಳಥಳಸುತಲಿ 22 ಹಾರ ಪದಕದ ಮಧ್ಯ ಮೇಲಾದೇಕಾವಳಿಯು ತೋರ ಮುತ್ತಿನ ದಂಡೆ ಲೋಲ್ಯಾಡುತಿರಲು 23 ಕನ್ನಡ್ಯಂದದಿ ಗಲ್ಲ ಕಳೆಯ ಸುರಿಸುತಲಿ ಸಣ್ಣಮುತ್ತಿನ ಗೊಂಚಲು ಸರಗಳಲೆಯುತಲಿ 24 ಝಗಝಗಿಸುತ ಬಂದಳು ಜಗದ ಮೋಹಿನಿಯು ಮುಗುಳು ನಗೆಯಿಂದ ಮೂರ್ಜಗವ ಮೋಹಿಸುತ 25 25 ಗೆಜ್ಜೆ ಸರಪಳಿ ಅಂದಿಗೆ ಹೆಜ್ಜೆಸರಿಸಿಡುತ ನಿರ್ಜರೇಶನ ಮಾರ್ಗದ ನಿರೀಕ್ಷಣದಿಂದ 26 ಸುತ್ತ ಮುತ್ತೈದೇರು ಕತ್ತಿಕೈ ಭಟರು ತುತ್ತೂರಿ ವಾದ್ಯ ಭೇರಿ ತಮ್ಮಟೆ ಕಾ(ಕಹ?) ಳೆ 27 ನಡೆದು ರುಕ್ಮಿಣಿ ಹೊಕ್ಕಳು ಗುಡಿಯ ಮಹಾದ್ವಾರ ಮೃಡನರಸಿಯ ಪೂಜಿಸಿ ದೃಢಭಕ್ತಿಯಲಾಗ 28 ಹಿರಿಯ ಮುತ್ತೈದೇರಿಗೆ ಮರದ ಬಾಗಿನವ ಅರೆದರಿಷಿಣ ಕುಂಕುಮ ಕರದಲ್ಲಿ ಗಂಧ 29 ಕಡಲೆ ಕಬ್ಬು ಕಾಯಿ ಉಡಿಯ ತುಂಬುತಲಿ ಕಡಲಶಯನನ ಮಾರ್ಗವ ಬಿಡದೆ ನೋಡುತಲಿ 30 ಮಂಗಳಗೌರಿಯೆದುರಿಗೆ ಮುತ್ತೈದೇರು ಅಂಗನೆ ಭೈಷ್ಮಿ ಪೀಠದಲಿ ಕುಳ್ಳಿರಿಸಿ 31 ಮಂಗಳಾಂಗನು ನಿನ್ನ ಪತಿಯಾಗಲೆಂದು ಮಂಗಳಸೂತ್ರ ಬಂಧನ ಮಾಡಲು ನಗುತ 32 ಮಾರನಯ್ಯನ ಮೋರೆ ನೋಡಿದಾಕ್ಷಣದಿ ಮಹಾ- ದ್ವಾರದಿ ಮುತ್ತು ಸೂರ್ಯಾಡೇನೀಕ್ಷಣದಿ 33 ಹರನ್ವಲ್ಲಭೆ ತೋರೆ ಮುರಹರನ ಕರಿವರನ ಭಯ- ಹರನ ಶ್ರೀಧರನ ಕೊಡುವೆನೀ ದೇವರನು 34 ಮಚ್ಛಲೋಚನೆ ಧ್ಯಾನ ಅಚ್ಚ್ಯುತನಲ್ಲೇ ಇಡೆ ಭಕ್ತ- ವತ್ಸಲ ಬಂದನೆಂದೆಚ್ಚರಿಸಿದರು35 ಹತವಾದ ಪ್ರಾಣ ಬರಲತಿ ಹರುಷವ್ಹ್ಯಾಗೋ ರಥವ ಕಾಣುತ ರುಕ್ಮಿಣಿ ಕೃತಕೃತ್ಯಳಾಗ 36 ಸೃಗಾಲದ ಮಧ್ಯ ಒಂದು ಸಿಂಹ ಹೊಕ್ಕಂತೆ ಶ್ರೀನಾಥ ರುಕ್ಮಿಣಿಯ ಸ್ವೀಕಾರ ಮಾಡಿದನು 37 ರಥವು ಮುಂದಕೆ ಸಾಗೆ ಪಥವು ತೋರದಲೆ ಅಲೆ ಬಾಯ ಬಿಡುತ ಶ್ರೀಪತಿಯ ಬೆನ್ನ ್ಹತ್ತಿ 38 ಬಂದ ರುಕುಮನ ಗಡ್ಡ ಮಂಡಿ ಸವರುತಲಿ ಬಂಧನ ರಥಕೆ ಮಾಡಿದ ನಂದಸುತನು 39 ವಾರೆನೋಟದಿ ನೋಡಿ ಮೋರೆ ತಗ್ಗಿಸಿದ ನಾರಿ ರುಕ್ಮಿಣಿಯ ಮುಖ ನೋಡಿ ಶ್ರೀಕೃಷ್ಣ 40 ಕರುಣವಿರಲಿಕ್ಕೆ ನೀ ಬರೆದ್ಯಾತಕೆ ಓಲೆ ತಿಳಿಯಲಿಲ್ಲವೆ ಎಂದೀಪರಿ ಹಾಸ್ಯದಿ ನುಡಿದ41 ಒಡಹುಟ್ಟಿದವನಲ್ಲಿ ಕಡು ಮೋಹವಿನ್ನೂ ಹಿಡಿಯದೆನ್ನೊಳು ಕೋಪ ಬಿಡುರುಕ್ಮಿಣಿ ಎಂದ 42 <ಈಔಓಖಿ ಜಿಚಿಛಿe='ಓuಜ
--------------
ಹರಪನಹಳ್ಳಿಭೀಮವ್ವ
ಉದದಿ ಮೇಖಳೆಯ ಭಾರವನಿಳುಹುವನೆಂದು ವಿಧಿಪೂರ್ವಸುರರು ಬಂದು ಕ್ಷೀರಾಬ್ಧಿಯ ಸಿಂಧು ಪ. ಶೌರಿ ಗೃಹದ ಗೋಪಿ ಜನಕೆ ನಾನಾ ವಿಧದ ಲೀಲಿಯ ತೋರಿ ದೈತ್ಯರ ಸದೆದು ಗೋವುಗಳ ಕಾಯ್ದ ಕೃಷ್ಣಗೆ ಪದುಮದಾರತಿಯ ಬೆಳಗಿರೆ ಶೋಭಾನೆ 1 ಮೆಲ್ಲನೆ ಮಧುರೆಗೆ ಹೋಗಿ ಮಾವನ ದೊಡ್ಡ ಬಿಲ್ಲ ಮಧ್ಯದಿ ನಿಂದು ರಂಗದಿ ಹಸ್ತ ಮಲ್ಲಾದಿಗಳ ತರಿದು ಕೈದೋರಿ ಮೆರೆದು ಖುಲ್ಲನನು ಮಡುಹಿ ಬಂಧುಗ- ಳೆಲ್ಲರನು ಸಂರಕ್ಷಿಸಿದ ಸಿರಿ ನಲ್ಲ ಗೋಪೀ ವಲ್ಲಭನ ಪದ ಪಲ್ಲವಗಳನು ಪಾಡಿ ಪೊಗಳುತ ಮಲ್ಲಿಗೆಯಾರತಿಯ ಬೆಳಗಿರಿ ಶೋಭಾನೆ 2 ಮಂದಿಮಾಗದ ಮೊದಲಾದ ರಾಯರ ಮದ ಕುಂದಿಸಿ ರಥದೊಳಂದು ಭೈಷ್ಮಿಯ ಕರ ತಂದು ದ್ವಾರಕೆಗೆ ಬಂದು ಭಾಮಾದಿ ಮಹಿಷೀ ವೃಂದ ಸಂಗ್ರಹಿಸಿದ ಪರಾಪರ ವಂದ್ಯ ಶೇಷಗಿರೀಂದ್ರನಾಥನ ಚಂದನಾತ್ಮಕ ಮೂರುತಿಯ ಹೃ- ನ್ಮಂದಿರದ ಮಧ್ಯದಲಿ ಮಂಡಿಸಿಕುಂದಣದಾರತಿಯ ಬೆಳಗಿರೆ ಶೋಭಾನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕರವೀರಪುರವ ಸೇರಿದಳು ಹದಿನಾರು ಸಾವಿರ ನಾರಿಯರ ಭಾಗ್ಯವ ನೋಡಿ ಸೇರಿದಳುಲಕುಮಿ ಜರಿದಾಳು ಪ. ಶ್ರೀವೈಕುಂಠಕ್ಕೆ ಸರಿಯೆಂದು ದ್ವಾರಕೆಹರಿ ಬ್ರಹ್ಮ ಕೇಳಿ ಹರುಷಾಗಿಹರಿ ಬ್ರಹ್ಮ ಕೇಳಿ ಹರುಷಾಗಿ ತಮ್ಮ ತಮ್ಮಪುರದಿಂದ ಇಳಿದು ಬರುತಾರೆ 1 ವೃಂದಾರಕರೆಲ್ಲ ಬಂದರು ದ್ವಾರಕೆಗೆ ಚಂದ್ರ ನೊಬ್ಬ ಬರಲಿಲ್ಲಚಂದ್ರ ತಾನೊಬ್ಬ ಬರಲಿಲ್ಲ ತನ್ನಕಾಂತಿ ಕುಂದೀತೆಂಬೊ ಭಯದಿಂದ2 ಸಾರು ದೇವತೆಗಳು ದ್ವಾರಕೆಗೆ ಬರಲುಸೂರ್ಯ ತಾನೊಬ್ಬ ಬರಲಿಲ್ಲಸೂರ್ಯ ತಾನೊಬ್ಬ ಬರಲಿಲ್ಲ ತನ್ನತೇಜ ಕುಂದೀತೆಂಬೊ ಭಯದಿಂದ 3 ಜಾಣ ನಾರದ ತಮ್ಮ ವೀಣೆ ನುಡಿಸುತ ವಾಣಿ ಮಾವನ ಸ್ತುತಿಸುತವಾಣಿ ಮಾವನ ಸ್ತುತಿಸುತ ತಾಒಂದು ಓಣಿಯ ಹಿಡಿದು ಬರುತಾನೆ4 ವಶಿಷ್ಠ ಮೊದಲಾದ ಮಹಾಶಿಷ್ಠರು ಮುನಿಗಳು ತಮ್ಮ ಕೃಷ್ಣ್ಣಾಜಿನ ಕಾಷ್ಠ ಸಹಿತಾಗಿಕೃಷ್ಣ್ಣಾಜಿನ ಕಾಷ್ಠ ಸಹಿತಾಗಿ ಬಂದರು ಧಿಟ್ಟ ರಾಮೇಶÀನರಮನೆಗೆ 5
--------------
ಗಲಗಲಿಅವ್ವನವರು
ಕೃಷ್ಣ ತನ್ನರೂಪಇಟ್ಟಉತ್ಕøಷ್ಟ ಭಕ್ತರ ಮನೆ ಬಿಟ್ಟು ಹೋಗಲಾರದೆ ಪ.ಮಿತಿಯಿಲ್ಲದೆ ರೂಪದಿಂದ ಕುಂತಿ ಸುತರಭಕ್ತಿಗೆ ಲಕ್ಷ್ಮೀಪತಿ ಅಲ್ಲೆ ನಿಂತಮಿತರೂಪ ದ್ವಾರಕೆಗೆ ಬಂದಇಂಥ ಅತಿಶಯ ಶಕ್ತಿ ನೋಡುವದೆಂಥ ಚಂದ 1ಚೆಲ್ವನ ನೋಡುವರು ಜನರುಮನೆ ಒಲ್ಲದೆ ಜರಿದಾತನಲ್ಲೆ ಇದ್ದರುಫುಲ್ಲನಾಭನರೂಪಚಾರುಇದಕೆಲ್ಲರೂ ನಗಲುಹೃದಯದಂಬರದಲ್ಲಿ ತುಂಬಿದರು 2ಧಿಟ್ಟ ಬೊಮ್ಮಾದಿಗಳೆ ಸಾಕ್ಷಿಇದನಷ್ಟು ಬಲ್ಲಂಥ ಶಿವನೊಬ್ಬ ಸಾಕ್ಷಿಅಷ್ಟ ದಿಕ್‍ಪಾಲಕರೆ ಸಾಕ್ಷಿಮತ್ತಷ್ಟು ವೈಭವದ ಸುರರೆಲ್ಲ ಸಾಕ್ಷಿ 3ಭಕ್ತ ಪ್ರಲ್ಹಾದನೆ ಸಾಕ್ಷಿಇಂಥ ಉತ್ತುಮನೆನಿಸುವ ಧ್ರುವನೊಬ್ಬ ಸಾಕ್ಷಿಸತ್ಯ ಅಜಮಿಳನೊಬ್ಬ ಸಾಕ್ಷಿನಮ್ಮ ಮಿತ್ರಿ ದ್ರೌಪತಾದೇವಿ ಅತ್ಯಂತ ಸಾಕ್ಷಿ 4ಪಂಡಿತಬಲಿಯೊಬ್ಬ ಸಾಕ್ಷಿಜಲದಿ ಕಂಡ ಅಕ್ರೂರ ಅವನೊಬ್ಬ ಸಾಕ್ಷಿಪುಂಡರೀಕನೊಬ್ಬ ಸಾಕ್ಷಿರಮಿಗಂಡ ಭಕ್ತರ ಕಾದು ಕೊಂಡಿಹ ನಿಜ 5
--------------
ಗಲಗಲಿಅವ್ವನವರು
ನಡೆರಂಗ ನಡೆ ಕೃಷ್ಣ ನಡೆ ಮನೆಗೆಧೃಡ ಭಕ್ತರ ಕೂಡಿ ದ್ವಾರಕೆಗೆ ಪ.ಬಂದ ಜನರಿಗೆಲ್ಲ ಗಂಧ ಕುಂಕುಮವನಿಟ್ಟುತಂದು ತಾಂಬೂಲ ಕೊಡುತಲೆತಾಂಬೂಲ ಕೊಡುತಲೆ ರುಕ್ಮಿಣಿಕುಂದವ ಮಾಡಿ ಬಗೆಯದೆ 1ಮಿತ್ರೆ ದ್ರೌಪತಿದೇವಿ ಮತ್ತೆ ಪಾದಕ್ಕೆರಗಿಅತ್ಯಂತ ನಾವು ನುಡಿದೆವಅತ್ಯಂತ ನಾವು ನುಡಿದ ಅಪರಾಧವಚಿತ್ತದೊಳಿಡದೆ ಕರುಣಿಸು 2ಅರಗಿಳಿ ಮಾತಿನಹರದಿಸುಭದ್ರಾ ತಾನುಎರಗಿದಳುಭಾವೆಚರಣಕ್ಕೆಎರಗಿದಳುಭಾವೆಚರಣಕ್ಕೆ ರುಕ್ಮಿಣಿಯಪರಮಆಶೀರ್ವಾದ ಇರಲೆಂದು3ಅತ್ತಿಗೆಯರೆಂದು ಅರ್ಥಿಲಾಡಿದ ಮಾತುಮತ್ತೊಂದು ನೀವು ತಿಳಿಯದೆಮತ್ತೊಂದು ನೀವು ತಿಳಿಯದೆ ರಂಗನಮಿತ್ರೆಯರೆ ನಿಮ್ಮ ದಯವಿರಲಿ 4ಬಂದು ಪಾಂಡವರೆಲ್ಲ ಇಂದಿರೇಶಗೆ ಎರಗಿಚಂದಾಗಿ ತಾವು ಕೈ ಮುಗಿದುಚಂದಾಗಿ ತಾವು ಕೈ ಮುಗಿದು ನುಡಿದರುಕುಂದುಗಳೆಣಿಸದೆ ಸಲುಹೆಂದು 5ಭಾವಮೈದುನತನದಿ ನಾವೊಂದು ವಿನಯದಿಯಾವ ತಪ್ಪುಗಳ ಎಣಿಸದೆಯಾವ ತಪ್ಪುಗಳ ಎಣಿಸದೆ ಶ್ರೀ ಕೃಷ್ಣದೇವ ನೀ ಮಾಡೊ ದಯವನೆ 6ತಂದೆ ರಾಮೇಶಗೆ ನಾವಂದ ಮಾತುಗಳೆಲ್ಲಕುಂದವ ಮಾಡಿ ಬಗೆಯದೆಕುಂದವ ಮಾಡಿ ಬಗೆಯದೆ ನಮ್ಮನೆಗೆಬಂದು ಬಂದೊಮ್ಮೆ ಸಲುಹಯ್ಯ 7
--------------
ಗಲಗಲಿಅವ್ವನವರು